ರಾಯಬಾಗ ತಾಲೂಕಿನಲ್ಲಿ 534 ಶಾಲೆಗಳಿದ್ದರೂ ಕ್ಷೇತ್ರ ಶಿಕ್ಷಣಾಧಿಕ ಕಚೇರಿ (ಬಿಇಒ) ಮಾತ್ರ ಒಂದೇ
There are 534 schools in Raybagh taluk, but only one Field Education Officer (BEO)
ಲೋಕದರ್ಶನ ವರದಿ
ಹಾರೂಗೇರಿ : ಎರಡು ವಿಧಾನಸಭೆ ಕ್ಷೇತ್ರ ಹೊಂದಿರುವ ರಾಯಬಾಗ ತಾಲೂಕಿನಲ್ಲಿ 534 ಶಾಲೆಗಳಿದ್ದರೂ ಕ್ಷೇತ್ರ ಶಿಕ್ಷಣಾಧಿಕ ಕಚೇರಿ (ಬಿಇಒ) ಮಾತ್ರ ಒಂದೇ ಇದೆ. ಶೈಕ್ಷಣಿಕ ಯೋಜನೆಗಳ ಅನುಷ್ಠಾನಕ್ಕಾಗಿ ಆಡಳಿತ ವಿಕೇಂದ್ರಿಕರಣ ಮಾಡಿ, ಕುಡಚಿ ವಿಧಾನಸಭೆ ಕ್ಷೇತ್ರದ ಕೇಂದ್ರ ಸ್ಥಾನ ಹಾರೂಗೇರಿಯಲ್ಲಿ ಬಿಇಒ ಕಚೇರಿ ಸ್ಥಾಪನೆ ಮಾಡಬೇಕೆಂಬ ಕೂಗು ದಶಕಗಳಿಂದ ಕೇಳಿ ಬರುತ್ತಿದ್ದರೂ ಈವರೆಗೂ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆ ಗಮನ ಹರಿಸದಿರುವುದು ವಿಪರ್ಯಾಸ.
ಆಡಳಿತಾತ್ಮಕ ಕೆಲಸಗಳಿಗಾಗಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರ ಅಲೆದಾಟ ತಪ್ಪಿಸಲು ಹಾರೂಗೇರಿಯಲ್ಲಿ ಬಿಇಒ ಕಚೇರಿ ಸ್ಥಾಪನೆ ಅನಿವಾರ್ಯವೂ ಆಗಿದೆ. ತಾಲೂಕಿನ ಗಡಿ ಗ್ರಾಮಗಳಿಂದ ರಾಯಬಾಗದ ಬಿಇಒ ಕಚೇರಿಗೆ ಹೋಗಲು 70 ಕಿ.ಮೀ ದೂರ ಕ್ರಮಿಸಬೇಕು. ಸಣ್ಣ ಕೆಲಸವಿದ್ದರೂ ಒಂದು ದಿನ ಬೇಕು.
ರಾಜ್ಯದಲ್ಲಿ ವಿಧಾನಸಭೆ ಮತಕ್ಷೇತ್ರಕ್ಕೊಂದರಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ರಾಯಬಾಗ ತಾಲೂಕಿನಲ್ಲಿ ಎರಡು ವಿಧಾನಸಭೆ ಮತಕ್ಷೇತ್ರಗಳಿದ್ದರೂ ಬಿಇಒ ಕಚೇರಿ ಮಾತ್ರ ಒಂದೇ ಇದೆ. ರಾಯಬಾಗ ತಾಲೂಕಿನಲ್ಲಿ 1ರಿಂದ 10ನೇ ತರಗತಿವರೆಗಿನ 534 ಶಾಲೆಗಳಿದ್ದು, 83217 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 3000ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಕುಡಚಿ ಮತಕ್ಷೇತ್ರದ ಹಾರೂಗೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸ್ಥಾಪನೆ ಮಾಡಿದರೆ 328 ಶಾಲೆಗಳು, 51314 ಮಕ್ಕಳು ಹಾಗೂ 1800ಕ್ಕೂ ಹೆಚ್ಚು ಶಿಕ್ಷಕರು ಅದರ ವ್ಯಾಪ್ತಿಗೆ ಬರಲಿದ್ದಾರೆ. ತಾಲೂಕಿನ ಶೈಕ್ಷಣಿಕ ಪ್ರಗತಿಯಲೂ ಕೂಡ ಹಾರೂಗೇರಿ ಹಾಗೂ ಸುತ್ತಮುತ್ತಲಿನ ಹಳ್ಳಗಳದ್ದೇ ಸಿಂಹಪಾಲಿದೆ.
ಶೈಕ್ಷಣಿಕ ಕಾರ್ಯಚಟುವಟಿಕೆ ಮತ್ತು ಸಭೆಗಳಿಗೆ ಶಿಕ್ಷಕರು ತಾಲೂಕು ಬಿಇಒ ಕಚೇರಿಗೆ ನಿರಂತರ ಭೇಟಿ ನೀಡುತ್ತಾರೆ. ಇನ್ನು ನಾನಾ ದಾಖಲಾತಿ ಪರೀಶೀಲನೆ, ಕನ್ನಡ ಮಾಧ್ಯಮ, ಗ್ರಾಮೀಣ ಪ್ರಮಾಣ ಪತ್ರಗಳಿಗಾಗಿ ವಿದ್ಯಾರ್ಥಿಗಳು ಮತ್ತು ಪಾಲಕರು ಬಿಇಒ ಕಚೇರಿಗೆ ಹೋಗಿ-ಬರಲು 60ರಿಂದ 70 ಕಿಮೀ. ಪ್ರಯಾಣಿಸಬೇಕು.
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಈ ಭಾಗದ ಸುಮಾರು 30 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಪಠ್ಯಪುಸ್ತಕ ವಿತರಿಸುವುದು ಮುಖ್ಯ ಶಿಕ್ಷಕರಿಗೆ ಸವಾಲಾಗಿ ಪರಿಣಮಿಸಿದೆ. 40 ಕಿಮೀ ಪುಸ್ತಕಗಳ ಭಾರ ಹೊತ್ತು ಸಾಗಬೇಕಿದೆ.
ಸರ್ಕಾರ ಹಾಗೂ ಇಲಾಖೆಯ ನೂತನ ಬಿಇಒ ಕಚೇರಿ ಸ್ಥಾಪನೆ ಲಿಸ್ಟ್‌ಲ್ಲಿ ಹಾರೂಗೇರಿ ಹೆಸರೂ ಇದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅದು ಹಾಗೇ ಉಳಿದಿದೆ. ಆಡಳಿತಾತ್ಮಕ ಸರಳೀಕರಣ ಮತ್ತು ಶೈಕ್ಷಣಿಕ ಗುಣಮಟ್ಟದ ಹಿತದೃಷ್ಠಿಯಿಂದ ವಲಯಗಳ ವಿಕೇಂದ್ರಿಕರಣವಾಗಲೇಬೇಕೆಂದು ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಆಗ್ರಹಿಸಿದ್ದಾರೆ.
ರಾಯಬಾಗ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ವ್ಯಾಪ್ತಿ ಬಹಳಷ್ಟು ವಿಸ್ತಾರವಾಗಿರುವುದರಿಂದ ಆಡಳಿತ ಕಾರ್ಯ ಭಾರವಾಗಿದೆ. ಶಾಲೆ, ಮಕ್ಕಳು ಮತ್ತು ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಯಬಾಗ ತಾಲೂಕಿನಲ್ಲಿ ಇನ್ನೊಂದು ಬಿಇಒ ಕಚೇರಿ ಸ್ಥಾಪಿಸಲು ಸ್ಥಳೀಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕಿದೆ.
(ತಾಲೂಕಿನ ಗಡಿಭಾಗದಿಂದ 45 ಕಿ.ಮೀ ದೂರ ಬಿಇಒ ಕಚೇರಿ ಇರುವುದರಿಂದ ಗಡಿಹಳ್ಳಿಗಳ ಮಕ್ಕಳು, ಶಿಕ್ಷಕರಿಗೆ ಬಹಳ ತೊಂದರೆಯಾಗುತ್ತಿದೆ. ಶೈಕ್ಷಣಿಕ ಹಿತದೃಷ್ಠಿಯಿಂದ ಕೇಂದ್ರ ಸ್ಥಾನದಲ್ಲಿರುವ ಹಾರೂಗೇರಿಯಲ್ಲಿ ಬಿಇಒ ಕಚೇರಿ ಅತ್ಯಗತ್ಯವಾಗಿದೆ. ಬಿಇಒ ಕಚೇರಿಗಾಗಿ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ. - ಪೂಜ್ಯಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಮಠ, ಹಂದಿಗುಂದ-ಆಡಿ)
(ಶೈಕ್ಷಣಿಕ ಯೋಜನೆಗಳ ಜಾರಿ ಮತ್ತು ನಿರ್ವಹಣೆಗೆ 100 ರಿಂದ 200 ಶಾಲೆಗಳಿಗೊಂದರಂತೆ ಬಿಇಒ ಕಚೇರಿ ಇರಬೇಕು. ಹಾರೂಗೇರಿಯಲಿ ಬಿಇಒ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 