ಮಂತ್ರಾಲಯದ ರಾಯರ ದರ್ಶನ ಪಡೆದ ಪುಣ್ಯದ ಕ್ಷಣ
Auspicious moment of visiting the Mantralaya
ಯಾವಾಗಲಾದರೂ ರಜೆ ಬಂದರೆ ಸಾಕು. ಒಂದಿಲ್ಲೊಂದು ಪ್ರವಾಸಕ್ಕೆ ಅಣಿಯಾಗುವ ನಾನು. ಮಂತ್ರಾಲಯಕ್ಕೆ ಒಮ್ಮೆಯಾದರೂ ಹೋಗಿ ರಾಯರ ದರ್ಶನ ಪಡೆಯಬೇಕು ಎಂಬ ಆಸೆ ಬಹಳವಿತ್ತು. ಆದರೆ ಸರಿಯಾದ ಕಾಲ ಕೂಡಿ ಬರಬೇಕು ಎಂದು ಜನರು ಹೇಳುತ್ತಾರೆ. ಅದರಲ್ಲೂ ರಾಯರ ಸನ್ನಿಧಾನಕ್ಕೆ ರಾಯರೇ ನಮ್ಮನ್ನು ಕರೆಯಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ನಾನು ಕೂಡ ಇದ್ದೆ. ಕಡೆಗೂ ಆ ಸುದಿನ ಬಂದೆ ಬಿಟ್ಟಿತು.
ಶನಿವಾರದಂದು ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಹೋಗುವುದು ನಿಶ್ಚಯ ಮಾಡಲಾಯಿತು. ಅದರಂತೆ ನಾನು, ಸಂತೋಷ, ರಮೇಶ, ವಿಜಯ ಹಾಗೂ ಮನೋಜ ಪೂರ್ವ ತಯಾರಿ ಮಾಡಿಕೊಂಡೆವು. ಶನಿವಾರ ಸಂಜೆ ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಹೊರೆಟೆವು. ದಾರಿಯ ಮಧ್ಯೆದಲ್ಲಿ ಚಹಾ ಕುಡಿದು, ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠವನ್ನು ಕಣ್ತುಂಬಿಕೊಂಡೆವು. ಪ್ರಸಾದವನ್ನು ಸವಿದು ಮಂತ್ರಾಲಯದೆಡೆಗೆ ಸಾಗಿದೆವು. ದಾರಿಯುದ್ದಕ್ಕೂ ಅಲ್ಲಲ್ಲಿ ಚಹಾ ಕುಡಿಯುತ್ತಾ ಸಿಂಧನೂರ, ಮಾನ್ವಿ ಮೂಲಕ ಮಂತ್ರಾಲಯ ತಲುಪಿದಾಗ ರಾತ್ರಿ 3 ಗಂಟೆಯಾಗಿತ್ತು. ಅಲ್ಲಿಯೇ ಒಂದು ರೂಮ ಪಡೆದುಕೊಂಡು ನಿದ್ರೆಗೆ ಜಾರಿದೆವು.
ನಸುಕಿನ ಜಾವ ಎದ್ದು 6 ಗಂಟೆಗೆ ಆಗುವಷ್ಟರಲ್ಲಿ ಎಲ್ಲರೂ ರೆಡಿಯಾಗಿ ರಾಯರ ದರ್ಶನ ಪಡೆದುಕೊಳ್ಳಲು ದೇವಸ್ಥಾನದ ಕಡೆಗೆ ಹೊರೆಟೆವು. ಬೆಳಿಗ್ಗೆ ಬಹಳ ಜನ ಇರದ ಕಾರಣ ಬೇಗನೆ ನಮಗೆ ದರ್ಶನ ಭಾಗ್ಯ ದೊರೆಯಿತು. ರಾಯರ ದರ್ಶನ ಪಡೆದುಕೊಂಡು ದೇವಸ್ಥಾನ ಪ್ರಾಂಗಣದಲ್ಲಿ ಕೆಲಹೊತ್ತು ಕುಳಿತುಕೊಂಡೆವು. ಅಲ್ಲಿಯೇ ಇದ್ದ ಮ್ಯೂಸಿಯಂ ಕೂಡ ನೋಡಿದೆವು. ಕೆಲವು ಫೋಟೊಗಳನ್ನು ಕ್ಲಿಕಿಸಿಕೊಂಡು ಹೊರಬಂದೆವು. ಅಂದು ಏಕಾದಶಿ ಆಗಿದ್ದರಿಂದ ಪ್ರಸಾದವಿರಲಿಲ್ಲ. ದೇವಸ್ಥಾನದ ಹೊರ ಬಂದು ಸ್ವಲ್ಪಹೊತ್ತು ಕುಳಿತುಕೊಂಡೆವು. ನೂರಾರು ಭಕ್ತರು ಫೋಟೊಗಳನ್ನು ಕ್ಲಿಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಾವು ಕೂಡ ಕೆಲವು ಫೋಟೊಗಳನ್ನು ಕ್ಲಿಕಿಸಿಕೊಂಡು, ಅಲ್ಲಿಂದ ಮರಳಿ ವಾಹನ ಕಡೆಗೆ ಹೆಜ್ಜೆ ಹಾಕಿದೆವು. ಮಂತ್ರಾಲಯದಿಂದ ಸ್ವಲ್ಪ ದೂರದಲ್ಲಿ ದಾರಿ ಮಧ್ಯದಲ್ಲಿ ಬೆಳಗಿನ ಉಪಹಾರ ಸವಿದೆವು.
ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಹೋಗುವುದು ಹೇಗೆ ಎಂದು ಅಲ್ಲಿನ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡೆವು. ಕೆಲ ಸಮಯದಲ್ಲೇ ಪಂಚಮುಖಿ ಆಂಜನೇಯ ದೇವಸ್ಥಾನ ತಲುಪಿ, ಸರತಿ ಸಾಲಿನಲ್ಲಿ ನಿಂತು ಆಂಜನೇಯನ ದರ್ಶನ ಪಡೆದುಕೊಂಡೆವು. ಗೋಲಿಸೋಡ ರುಚಿ ಸವಿದು, ಬಿಚ್ಚಾಲಿಯ ಬಿಚ್ಚಾಲಮ್ಮ ದೇವಸ್ಥಾನ ನೋಡಲು ಹೊರೆಟೆವು. ಬಿಚ್ಚಾಲಮ್ಮ ದೇವಸ್ಥಾನ ನೋಡಿಕೊಂಡು ಮರಳಿ ಹುಬ್ಬಳ್ಳಿ ಕಡೆಗೆ ವಾಹನ ಚಲಾಯಿಸಿದೆವು. ಮಾನ್ವಿ ತಲುಪುವಷ್ಟರಲ್ಲಿ ಗಂಟೆ 2 ಆಗಿತ್ತು. ಹೊಟ್ಟೆ ಕೂಡ ತಾಳ ಹಾಕುತ್ತಿದ್ದವು. ಅಲ್ಲಿಯೇ ಊಟ ಮಾಡಿ, ಆನೆಗುಂದಿ ನೋಡೋಣ ಎಂದುಕೊಂಡೆವು. ಆದರೆ ಸಮಯದ ಅಭಾವದಿಂದ ಆನೆಗುಂದಿಗೆ ಹೋಗದೇ ಕೊಪ್ಪಳ ಮಾರ್ಗವಾಗಿ ನೇರವಾಗಿ ಹುಬ್ಬಳ್ಳಿ ಕಡೆಗೆ ಪಯಣಿಸಿದೆವು. ಅಣ್ಣಿಗೇರಿ ತಲುಪುವಷ್ಟರಲ್ಲಿ ಸುಮಾರು 6.45 ಗಂಟೆಯಾಗಿತ್ತು. ನವಲಗುಂದಕ್ಕೆ ನನ್ನನ್ನು ಇಳಿಸಿ, ಮುಂದೆ ಎಲ್ಲರೂ ಹುಬ್ಬಳ್ಳಿಗೆ ಪ್ರಯಾಣಿಸಿದರು. ಮನೆ ಸೇರುವಷ್ಟರಲ್ಲಿ ರಾತ್ರಿ 9.30 ಆಗಿತ್ತು. ಕಣ್ಣಿಗೆ ನಿದ್ರಾದೇವತೆ ಆವರಿಸಿದ್ದಳು. ಹಾಸಿಗೆ ಹಿಡಿದು ಮಲಗಿ ಬೆಳಿಗ್ಗೆ 8 ಗಂಟೆಗೆ ಎಚ್ಚರವಾಗಿತ್ತು. ಒಟ್ಟಿನಲ್ಲಿ ಬಹುದಿನಗಳ ರಾಯರ ದರ್ಶನದ ಕನಸು ನನಸಾಯಿತು. ನೀವು ಕೂಡ ಒಮ್ಮೆ ಭೇಟಿ ರಾಯರ ದರ್ಶನವನ್ನು ಪಡೆದುಕೊಂಡು ಬನ್ನಿ.
ಲೇಖಕರು: ನಾಗಪ್ಪ ಕೆ ಮಾದರ
ಹಾಲಕುಸುಗಲ್ಲ
ನವಲಗುಂದ
ಧಾರವಾಡ
582208
8073327846

ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 