ಆ.26 : ವೀರಭದ್ರ ದೇವರ ಉದ್ಭವ ಮಹೋತ್ಸವ
August 26: Birth anniversary of Lord Veerabhadra
ಧಾರವಾಡ, 24 : ಮನುಕುಲಕ್ಕೆ ಸತ್ಯ-ಶುದ್ಧ ಸನ್ನಡತೆಯ ಸಾತ್ವಿಕ ಸಂಸ್ಕಾರ ಅರುಹಿದ ನೈತಿಕ ಶಕ್ತಿಯಾದ ಶ್ರೀವೀರಭದ್ರ ದೇವರು ನಮ್ಮ ಸಂಸ್ಕೃತಿಯ ವಿಶಿಷ್ಟ ಶಕ್ತಿ ಸೌಧ. ಈ ದೇವಶಕ್ತಿಯ ಮಹಾ ಅವತಾರವಾದದ್ದು ಭಾದ್ರಪದ ಮಾಸದ ಮೊದಲ ಮಂಗಳವಾರ. ಪ್ರಸ್ತುತ ಆಗಷ್ಟ-26 ರಂದು ರಾಷ್ಟ್ರವ್ಯಾಪಿಯಾಗಿ ಶೃದ್ಧಾ-ಭಕ್ತಿಯಿಂದ ಎಲ್ಲೆಡೆ ವೀರಭದ್ರ ದೇವರ ಉದ್ಭವ ಮಹೋತ್ಸವ ಆಚರಣೆಗೆ ಭಕ್ತಗಣ ಸಜ್ಜುಗೊಂಡಿದೆ.
ಶಿವನ ಸ್ಮರಣೆಯಲ್ಲಿ ಶಿವರಾತ್ರಿ, ಶಕ್ತಿಮಾತೆ ಶ್ರೀದೇವಿಯ ಸ್ಮರಣೆಯಲ್ಲಿ ನವರಾತ್ರಿ, ಮಹಾಲಕ್ಷ್ಮಿಯ ಸ್ಮರಣೆಯಲ್ಲಿ ದೀಪಾವಳಿ, ವಿಘ್ನೇಶ್ವರನ ಸ್ಮರಣೆಯಲ್ಲಿ ಶ್ರೀಗಣೇಶ ಚತುರ್ಥಿ ಹಬ್ಬಗಳನ್ನು ಆಚರಿಸುವಂತೆಯೇ ಶ್ರೀವೀರಭದ್ರ ದೇವರ ಉದ್ಭವ ಮಹೋತ್ಸವಕ್ಕೂ ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಿ ಭಕ್ತಿಯ ನೆಲೆಯಲ್ಲಿ ಆಚರಿಸಬೇಕೆಂದು ನಿರ್ಧರಿಸಲಾಗಿದೆ.
ಆಗಷ್ಟ-26 ರಂದು ರಾಜ್ಯದ ಎಲ್ಲಾ ಭಕ್ತರು ತಮ್ಮ ಮನೆ, ಮಠ ಮತ್ತು ಮಂದಿರಗಳಲ್ಲಿ ವೀರಭದ್ರ ದೇವರ ಉದ್ಭವ ಮಹೋತ್ಸವದ ಅಂಗವಾಗಿ ರುದ್ರಾಭಿಷೇಕ ಮಹಾಪೂಜೆ, ಬಿಲ್ವಾರ್ಚನೆ, ಪುಷ್ಪಾಲಂಕಾರ, ಪಲ್ಲಕ್ಕಿಉತ್ಸವ, ದಾಸೋಹಸೇವೆಯ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಕರ್ನಾಟಕ ರಾಜ್ಯ ಶ್ರೀವೀರಭದ್ರೇಶ್ವರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಸಿ.ಎಂ. ಶಿವಶರಣಪ್ಪ ಕಲಬುರ್ಗಿ, ಉಪಾಧ್ಯಕ್ಷ ಗುರುಮೂರ್ತಿ ಯರಗಂಬಳಿಮಠ, ಇತರೇ ಪದಾಧಿಕಾರಿಗಳಾದ ರಮೇಶ ಉಳ್ಳಾಗಡ್ಡಿ, ಪಿ. ಎಂ. ಚಿಕ್ಕಮಠ, ಗೀರೀಶಕುಮಾರ ಬುಡರಕಟ್ಟಿಮಠ, ಪ್ರಕಾಶ ಅಂದಾನಿಮಠ ಮುಂತಾದವರು ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 