ಕಳ್ಳತನಕ್ಕೆ ಯತ್ನ : ಗ್ರಾಮಸ್ಥರಿಂದ ಧರ್ಮದೇಟು

ಬೆಳಗಾವಿ 03: ಮನೆಗಳ್ಳತನ ಮಾಡಿ ಪರಾರಿ ಆಗುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿದು ಗಿಡಕ್ಕೆ ಕಟ್ಟಿ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ಹಿಂಡಲಗಾ ಗ್ರಾಮದಲ್ಲಿ ನಡೆದಿದೆ. 

ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಇಬ್ಬರು ಮನೆಗಳ್ಳತನ ಮಾಡುತ್ತಿದ್ದರಂತೆ ಇಂದು ಬೆಳಂಬೆಳಗ್ಗೆ ಮನೆ ಕಳ್ಳತನಕ್ಕೆ ಬಂದಿದ್ದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ತಕ್ಷಣವೇ ಗಮನಿಸಿ ಇಬ್ಬರನ್ನು ಹಿಡಿದಿದ್ದಾರೆ. ಬಳಿಕ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯ ನಿವಾಸಿಗಳು ಧರ್ಮದೇಟು ನೀಡಿದ್ದಾರೆ. ಇನ್ನೂ ಕಳೆದ 15 ದಿನಗಳಿಂದ ಗ್ರಾಮೀಣ ಭಾಗದಲ್ಲಿ ಮನೆಗಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.