ಬರ್ಕಿನಾ ಫಾಸೋ ಮಸೀದಿ ಮೇಲೆ ದಾಳಿ; 15 ಸಾವು

ಯುಗಡೌಗೌ, ಅ 12:    ಉತ್ತರ ಬರ್ಕಿನಾ ಫಾಸೋದ ಮಸೀದಿಯೊಂದರ ಮೇಲೆ ಶುಕ್ರವಾರ ನಡೆದ  ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.     

ಸೇನಾ ಅಧಿಕಾರಿಯೊಬ್ಬರ ಪ್ರಕಾರ, ಕೆಲ ಅನಾಮಿಕ ದುಷ್ಕರ್ಮಿಗಳು ಮಸೀದಿಯ ಮೇಲೆ ದಾಳಿ ನಡೆಸಿದ್ದರಿಂದ  ಆ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 15 ಜನರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.  

2015 ರಿಂದ    ಬರ್ಕಿನಾ ಫಾಸೋ ನಿರಂತರ ಭಯೋತ್ಪಾದಕ ದಾಳಿಗೆ ತುತ್ತಾಗುತ್ತಿದ್ದು, 500 ಜನರು ಮೃತಪಟ್ಟಿದ್ದು, 2 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.     

ದೇಶಾದ ಹಲವು ಭಾಗಗಳಲ್ಲಿ ಭಯೋತ್ಪಾದನೆ ನಿಗ್ರಹಿಸುವ ಸಲುವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರ ಪರಿಣಾಮವಾಗಿ ಗಾಬರಿಗೊಂಡ ಜನರು ಸುರಕ್ಷಿತ ಪ್ರದೇಶಗಳನ್ನು ಅರಸಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.  

ಮಸೀದಿ ಮೇಲಿನ ಅಮಾನವೀಯ ದಾಳಿಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.