ನಾಗರಿಕರ ಮೇಲಿನ ದಾಳಿ: ಒಪ್ಪುವುದಿಲ್ಲ ವಿಶ್ವಸಂಸ್ಥೆ ಎಚ್ಚರಿಕೆ

ವಿಶ್ವಸಂಸ್ಥೆ, ನವೆಂಬರ್ 14 :      ಇಸ್ರೇಲ್ ಗಾಜಾಪಟ್ಟಿಯಲ್ಲಿ ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ನಾಯಕರನ್ನು ಗುರಿಯಾಗಿಟ್ಟುಕೊಂಡು   ನಡೆಸಿದ ದಾಳಿ ನಂತರ  ಗಾಜಾ ಪಟ್ಟಿಯ ನಡುವಿನ ಗಡಿಯುದ್ದಕ್ಕೂ ರಾಕೆಟ್ ದಾಳಿ  ಹೆಚ್ಚಿಸಿರುವ ಬಗ್ಗೆ ವಿಶ್ವಸಂಸ್ಥೆ  ಬಗ್ಗೆ ಆತಂಕ ವ್ಯಕ್ತಪಡಿಸಿ ನಾಗರಿಕರ ಮೆಲಿನ  ದಾಳಿಯನ್ನು  ಒಪ್ಪು ವುದಿಲ್ಲ ಎಂದು ಎಚ್ಚರಿಸಿದೆ. 

ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಮತ್ತು ದಾಳಿ  ಗಂಭೀರ ಸ್ವರೂಪ ಪವಯುತ್ತಿರುವುದು ಆತಂಕ ತಂದಿದೆ ಎಂದು  ವಿಶ್ವಸಂಸ್ಥೆ ಸಮನ್ವಯಾಧಿಕಾರಿ   ನಿಕೋಲಾಯ್ ಮ್ಲೆಡೆನೋವ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಸ್ಥಳೀಯ ವರದಿಗಳ ಪ್ರಕಾರ, ಈ ದಾಳಿಯು ಉಗ್ರ ನಾಯಕರನ್ನು  ಮಾತ್ರವಲ್ಲ, ಅವರ  ಹೆಂಡತಿ ಮತ್ತು ಇತರರನ್ನೂ ಹತ್ಯೆ ಮಾಡಲಾಗಿದೆ .   

ಈ ನಡುವೆ   ಉಗ್ರಗಾಮಿ ಗುಂಪು ಹಮಾಸ್ ನಿಯಂತ್ರಣದಲ್ಲಿರುವ ಗಾಜಾ ಪ್ರದೇಶದಲ್ಲಿ  ಇಸ್ರೇಲ್ ನಡೆಸಿದ ಪ್ರತೀಕಾರದ ವೈಮಾನಿಕ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ 13 ಪ್ಯಾಲೆಸ್ಟೀನಿಯಾದ ಜನರು ಸಾವನ್ನಪ್ಪಿದ್ದಾರೆ ಎಂದೂ  ವರದಿಯಾಗಿದ್ದು  ಸಾವಿನ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ.  

"ಜನಸಂಖ್ಯಾ ಕೇಂದ್ರಗಳ ವಿರುದ್ಧ ವಿವೇಚನೆಯಿಲ್ಲದೆ ರಾಕೆಟ್ ಉಡಾಯಿಸುತ್ತಿರುವುದು ಸರಿಯಲ್ಲ  ಮತ್ತು ತಕ್ಷಣವೇ ನಿಲ್ಲಿಸಬೇಕು" ಎಂದು ಒತ್ತಿ ಹೇಳಿ, ನಾಗರಿಕರ ವಿರುದ್ಧದ  ದಾಳಿಗೆ ಯಾವುದೇ ಸಮರ್ಥನೆ ಸಾಧ್ಯವಿಲ್ಲ ಎಂದು  ಎಚ್ಚರಿಸಿದ್ದಾರೆ.