ಅಥಣಿ ತಾಲೂಕು ಅತಿ ಹೆಚ್ಚಿನ ಕಬ್ಬನ್ನು ಬೆಳೆಯುವ ತಾಲೂಕು
Athani taluk is the taluk that grows the most sugarcane.
ಲೋಕದರ್ಶನ ವರದಿ
ಅಥಣಿ ತಾಲೂಕು ಅತಿ ಹೆಚ್ಚಿನ ಕಬ್ಬನ್ನು ಬೆಳೆಯುವ ತಾಲೂಕು
ಬೆಳಗಾವಿ 09: 2025-26ನೇ ಸಾಲಿನ ಕಬ್ಬು ನಡೆಸುವ ಹಂಗಾಮವನ್ನು ಪ್ರಾರಂಭ ಮಾಡಲುಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ಸಜ್ಜಾಗಿವೆ. ಆದರೆ ಯಾವುದೇ ಸಕ್ಕರೆಕಾರ್ಖಾನೆ ದರ ಘೋಷಣೆ ಮಾಡಿಲ್ಲ. ಕಳೆದ ವರ್ಷದ ಎರಡನೇ ಕಂತನ್ನು ಪಾವತಿಸಿಲ್ಲ. ದರ ಘೋಷಣೆ ಮಾಡಿ ಕಾರ್ಖಾನೆ ಪ್ರಾರಂಭ ಮಾಡಬೇಕೆಂದು ರೈತರು ವಿನಂತಿ ಮೂಲಕ ಕಾರ್ಖಾನೆಗಳಿಗೆ ಅಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ತಾಲೂಕಾ ಅತಿ ಹೆಚ್ಚಿನ ಕಬ್ಬನ್ನು ಬೆಳೆಯುವ ತಾಲೂಕು ಹಾಗೂ ಸಕ್ಕರೆ ನಾಡಿನ ತಾಲೂಕು ಎಂದು ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಹಾಗೂ ಅತಿ ಹೆಚ್ಚು ಕಬ್ಬು ಇರುವ ಗಡಿ ಭಾಗದ ಕೃಷ್ಣಾ ತೀರದ ತಾಲೂಕು. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಈ ವರ್ಷ 44 ಸಾವಿರ ಹೆಕ್ಟರ್ ಕಬ್ಬು ಇದ್ದು, ಅದರಲ್ಲಿ 7 ಕಾರ್ಖಾನೆಗಳು ರೈತರ ಕಬ್ಬುಕಟಾವ ಮಾಡವತಮ್ಮ ಗುರಿಯನ್ನು ಮುಟ್ಟಿಸಲು ಜಿದ್ದಾಜಿದ್ದಿ ಮಾಡಬೇಕಾಗುವ ಸಂದರ್ಭ ಎದುರಾಗಬಹುದು. ಸಧ್ಯದ ಸ್ಥಿತಿಯಲ್ಲಿ ಕಾರ್ಖಾನೆಗೆ ಅವಶ್ಯಕತೆ ಇರುವ ಕಬ್ಬು ಕಟಾವು ಕಬ್ಬು ಸಾಗಾಣಿಕೆ ಮಾಡಲು ಟ್ಯಾಕ್ಟರ್ ಹಾಗೂ ಕೂಲಿಗಾರರು ಕಾರ್ಖಾನೆ ಪ್ರಾರಂಭಕುರಿತು ಸೂಚನೆ ನೀಡಿ ನವ್ಹೆಂಬರ 1 ರಂದು ಕಾರ್ಖಾನೆಗಳು ಪ್ರಾರಂಭವಾಗುತ್ತವೆ. ಸಧ್ಯದ ಸ್ಥಿತಿಯಲ್ಲಿ ಕೃಷ್ಣಾ ತೀರದಲ್ಲಿಅತಿ ಹೆಚ್ಚು ಮಳೆ ಇದ್ದ ಕಾರಣ ಇನ್ನೂ 1 ತಿಂಗಳು ಕಬ್ಬುಕಟಾವ ಮಾಡಲು ತೊಂದರೆ ಆಗುತ್ತದೆ. ಆ ಕಾರಣ ರೈತರಿಗೆ ಈ ವರ್ಷಕಬ್ಬುಕಟಾವ ಮಾಡವ ಪ್ರಕ್ರಿಯೆ ತಡವಾಗಿ ಪ್ರಾರಂಭವಾಗುತ್ತದೆ. ಕಬ್ಬುಕಟಾವ ಮಾಡಲು ಕಷ್ಟವಾಗುತ್ತದೆ.
ಸತತವಾಗಿ ಬರಗಾಲಕ್ಕೆ ತುತ್ತಾಗಿರುವ ಗಡಿ ಭಾಗದ ಗ್ರಾಮ ಕಳೆದ 2 ವರ್ಷದಿಂದಕಬ್ಬಿನ ಪ್ರಮಾಣ ಹೆಚ್ಚಾಗಿ ರೈತರಿಗೆಕಾರ್ಖಾನೆಗೆ ಸಾಗಾಣಿಕೆ ಮಾಡಲು ಕಷ್ಟವಾಗುತ್ತಿತ್ತು. ಆದರೆ ಈ ವರ್ಷಗಡಿ ಭಾಗದ ಗ್ರಾಮಗಳಲ್ಲಿ 10 ಸಾವಿರ ಹೆಕ್ಟರ್‌ಕಬ್ಬಿನ ಪ್ರಮಾಣ ಇದೆ.ಆದರೆ ರೈತರು ತಾಲೂಕಿನಲಿ ್ಲಇರುವ ಬಸವೇಶ್ವರ ಶುಗರ್ಸ ಬಳ್ಳಿಗೇರಿ, ರೇಣುಕಾ ಶುಗರ್ಸ ಬುರ್ಲಟ್ಟಿ, ಕೃಷ್ಣಾ ಶುಗರ್ಸ ಸಂಕೋನಟ್ಟಿ, ಅಥಣಿ ಶುಗರ್ ್ಸಕೆಂಪವಾಡ, ಉಗಾರ ಶುಗರ್ಸಉಗಾರ, ಶಿರಗುಪ್ಪಿ ಶುಗರ್ಸ ಕಾಗವಾಡ ಇಷ್ಟು ಕಾರ್ಖಾನೆಗಳು ಈ ತಾಲೂಕಿನ ಕಬ್ಬುಗಳ ಮೇಲೆ ಅವಲಂಬನೆ ಆಗಿದ್ದಾವೆ. ಈ ವರ್ಷಕಬ್ಬಿನ ಇಳುವರಿ ಕಡಿಮೆಇದೆಎಂದು ಹೇಳಲಾಗಿದೆ. ಆದರೆ ಈ ವರ್ಷ ಸಕ್ಕರೆದರ ಹೆಚ್ಚಾದಕಾರಣರೈತರಿಗೆ ಕನಿಷ್ಠವಾಗಿ 3500 ದಿಂದ 4000 ದರಸಿಗುವ ನಿರಿಕ್ಷೇ ರೈತರಲ್ಲಿ ಇದೆ.
ಈ ಕುರಿತುಗಡಿ ಭಾಗದರೈತ ಮುಖಂಡ, ಹೋರಾಟಗಾರ ಕಿರಣ ಮಿಸಾಳ ಇವರನ್ನು ಸಂಪರ್ಕಿಸಿದಾಗ, ಗಡಿ ಭಾಗದಲ್ಲಿ ಬಸವೇಶ್ವರಏತ ನೀರಾವರಿ ಯೋಜನೆಯ ನೀರು ಹಾಗೂ ಮಹಾರಾಷ್ಟ್ರದಿಂದ ಬರುವಅಗ್ರಾಣಿ ನೀರು ಹೆಚ್ಚಾದಕಾರಣಕಬ್ಬಿನ ಬೆಳೆ ಹೆಚ್ಚಾಗಿದ್ದು, ಕಾರ್ಖಾನೆಗಳು ಈ ವರ್ಷ 4000 ದರ ಪ್ರತಿಟನ್‌ಗೆ ಬಿಲ್ ಘೋಷಣೆ ಮಾಡಬೇಕು.ಹಾಗೂ ಕಳೆದ ವರ್ಷದ 2ನೇ ಬಿಲ್ ಪ್ರತಿಟನ್‌ಗೆ 500 ರೂಪಾಯಿಜಮಾ ಮಾಡಿಕಾರ್ಖಾನೆ ಪ್ರಾರಂಭ ಮಾಡಬೇಕೆಂದುಅವರು ಅಗ್ರಹಿಸಿದ್ದಾರೆ.
ಈ ಕುರಿತು ಕೃಷಿ ಸಹಾಯಕ ನಿರ್ದೇಶಕರಾದ ನಿಂಗಣ್ಣ ಬಿರಾದಾರಇವರನ್ನು ಸಂಪರ್ಕಿಸಿದಾಗ, ಅಥಣಿತಾಲೂಕಿನ ಸುಮಾರು 43 ಸಾವಿರ ಹೆಕ್ಟರ್‌ಕಬ್ಬುಇದ್ದು, ಈ ವರ್ಷಅತಿ ನೀರಿನ ಪ್ರಮಾಣ ಹೆಚ್ಚಾದಕಾರಣ ಕಬ್ಬಿನ ಇಳುವರಿ ಕಡಿಮೆ ಬೀಳುವ ಸಾಧ್ಯತೆಇದೆ.ಕೃಷ್ಣಾ ತೀರದದಂಡೆಯಲ್ಲಿಅತಿ ಹೆಚ್ಚು ನೀರಿನಿಂದಕಬ್ಬುಕಟಾವ ಮಾಡಲು ವಿಳಂಬವಾಗುತ್ತದೆಎಂದು ಹೇಳಿದರು. ವಿಶೇಷವಾಗಿ 265, 86032, 94012 ಈ ಜಾತಿಯ ಕಬ್ಬು ಹೆಚ್ಚು ಇದೆ ಎಂದು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 