ಖಗೋಳಶಾಸ್ತ್ರ ಪಠ್ಯಪುಸ್ತಕ ದೇಶೀಯ ವಿಜ್ಞಾನ ಕ್ಷೇತ್ರಕ್ಕೆ ಹೊಸ ಪ್ರೇರಣೆ: ಪಟೇವಾಲೆ
Astronomy Textbook A New Inspiration for Domestic Science Sector: Patewale
ಖಗೋಳಶಾಸ್ತ್ರ ಪಠ್ಯಪುಸ್ತಕ ದೇಶೀಯ ವಿಜ್ಞಾನ ಕ್ಷೇತ್ರಕ್ಕೆ ಹೊಸ ಪ್ರೇರಣೆ: ಪಟೇವಾಲೆ
ವಿಜಯಪುರ : 1971 ರಲ್ಲಿ ನಿರ್ಮಿಸಲಾದ ಖಗೋಳಶಾಸ್ತ್ರ ಪಠ್ಯಪುಸ್ತಕವು ದೇಶೀಯ ವಿಜ್ಞಾನ ಕ್ಷೇತ್ರಕ್ಕೆ ಹೊಸ ಪ್ರೇರಣೆ ನೀಡಿದೆ. ಪ್ರಾಚೀನ ವೈದ್ಯರು ಮತ್ತು ವಿಜ್ಞಾನಿಗಳು ವಿದ್ಯಾರ್ಥಿಗಳಿಗೆ ಆಕಾಶ ಮತ್ತು ನಕ್ಷತ್ರಗಳ ಅಧ್ಯಯನವನ್ನು ಕಲಿಸಲು ಶ್ರಮಿಸಿದ್ದಾರೆ ಎಂದು ತಮಿಳುನಾಡಿನ ಊಟಿಯಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ರೆಡಿಯೋ ಅಸ್ಟ್ರೋಫಿಸಿಕ್ಸ್‌ನ ಎಲೆಕ್ಟ್ರಾನಿಕ್ಸ್ ಎಂಜಿನಿಯರಾದ ಅಬ್ದುಲ್ ಖಾದರ್ ಪಟೇವಾಲೆ ಹೇಳಿದರು.
ಸಿಕ್ಯಾಬ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ರೆಡಿಯೋ ಖಗೋಳಶಾಸ್ತ್ರದ ಸವಾಲುಗಳು ಅವಕಾಶಗಳು ಎಂಬ ಒಂದು ದಿನದ ತಾಂತ್ರಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಧ್ಯಯುಗದಲ್ಲಿ ಹಲವಾರು ವಿಜ್ಞಾನಿಗಳು ತಮ್ಮ ಸ್ಮರಣೆ ಮತ್ತು ಅನುಭವದ ಆಧಾರದಲ್ಲಿ ಸೂರ್ಯಗ್ರಹಣ ಮುಂತಾದ ಖಗೋಳದ ಘಟನೆಗಳನ್ನು ಊಹಿಸುತ್ತಿದ್ದರು. ಕಾಲಮಾನದ ನಿಖರ ಅಳತೆಯ ಕೊರತೆಯಿಂದ ಕೆಲವೊಮ್ಮೆ ಊಹೆಗಳು ತಪ್ಪಾಗಿರುತ್ತವೆ. ಈ ಸವಾಲುಗಳೇ ನೂತನ ವೈಜ್ಞಾನಿಕ ಅಧ್ಯಯನಕ್ಕೆ ಪ್ರೇರಣೆ ನೀಡಿತು ಎಂದು ಅವರು ಅಭಿಪ್ರಾಯ ಪಟ್ಟರು.
ನಮ್ಮ ಗ್ರಹಗಳು, ಆಕಾಶ ಮತ್ತು ವಿಸ್ತೀರ್ಣವಾದದನ್ನು ತಿಳಿದುಕೊಳ್ಳಲು ಈ ಅಧ್ಯಯನ ಬಹುಮುಖ್ಯವಾಗಿದೆ. ಹಾಗಾಗಿ ರೇಡಿಯೋ ಜಗತ್ತಿನ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ಇನ್ನು ಡಾ. ಸುಜಾ ಪುಣೆಕರ್ ಮಾತನಾಡಿ ರೇಡಿಯೋ ಖಗೋಳಶಾಸ್ತ್ರದ ಉಪಕರಣ ಬಗ್ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ, ಸೈಯದ್ ಅಬ್ಬಾಸ್ ಅಲಿ, ಡಾ. ಅಸ್ಲಂ ಕರ್ಜಗಿ, ಡಾ. ರವಿ ಹೊಸಮನಿ, ಡಾ. ಮಹಮ್ಮದ್ ಜಿಯಾವುಲ್ಲಾ ಚೌಧರಿ, ಪ್ರೊ. ಸಾದಿಕ್ ಮುಜಾವರ, ಡಾ. ವಸಿಂ ನಿಡಗುಂದಿ, ಪ್ರೊ. ಬೇನಜೀರ್ ಮುಂತೆಸಿರ್, ಪ್ರೊ. ಆರೀಫ್ ಮಕಾಂದಾರ ಪ್ರೊ. ಎಂ ಆರ್ ಚಿಕ್ಕೊಂಡ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 