ವಿದ್ಯಾರ್ಥಿನಿಲಯ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಹಾಯಕ ಆಯುಕ್ತರು ಕಾವ್ಯರಾಣಿ ಭೇಟಿ

ವಿದ್ಯಾರ್ಥಿನಿಲಯ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಸಹಾಯಕ ಆಯುಕ್ತರು ಕಾವ್ಯರಾಣಿ ಭೇಟಿ  Assistant Commissioner Kavyarani visits the hostel and Morarji Desai Residential School

ಕಂಪಿ 16:ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ನಡಾವಳಿಕೆಗಳನ್ನು ಬದಲಿಸಿಕೊಂಡು ಕಾರ್ಯನಿರ್ವಹಿಸಬೇಕಿದೆ ಇಲ್ಲದಿದ್ದರೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಶಿರಸಿ ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಕಂಪ್ಲಿ ತಾಲ್ಲೂಕು ಉಸ್ತುವಾರಿ ಅಧಿಕಾರಿಗಳಾದ ಕಾವ್ಯರಾಣಿ ತಿಳಿಸಿದರು.

ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಏರಿ​‍್ಡಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿ ಇಂದಿನ ಸಭೆಯ ಬಗ್ಗೆ ಮೊದಲೇ ಎಲ್ಲಾ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳನ್ನು ಸಭೆಗೆ ಕಳುಹಿಸಿರುವುದು ಸರಿಯಾದ ಕ್ರಮವಲ್ಲ, ಇದು ಪ್ರಗತಿ ಪರೀಶೀಲನಾ ಸಭೆಯಾಗಿರುವುದರಿಂದ ಎಲ್ಲಾ ಇಲಾಖೆಗಳ ಮುಖ್ಯಸ್ಥರೇ ಸಭೆಗೆ ಹಾಜರಾಗಿ ತಮ್ಮ ಇಲಾಖೆಗಳ ಪ್ರಗತಿ ಹಾಗೂ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗ್ಯಾರಂಟಿ ಯೋಜನೆಗಳ ಬಗ್ಗೆ, ಆಯಾ ಇಲಾಖೆಗಳ ಕ್ರೀಯಾಯೋಜನೆಯೊಂದಿಗೆ ಸಭೆಗೆ ಬರಬೇಕು. ಇಂದಿನ ಸಭೆಗೆ ಗೈರುಹಾಜರಾದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ತಹಸಿಲ್ದಾರರಿಗೆ ಸೂಚಿಸಿದರು.ಯಾವುದಾರೂ ಇಲಾಖೆಯಲ್ಲಿ ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ಹಾಗೂ ಎಲ್ಲೆಲ್ಲಿ ಸಮಸ್ಯೆಗಳಿವೆ ಎನ್ನುವ ಬಗ್ಗೆ, ಕಳೆದ ವರ್ಷದ ಹತ್ತನೇ ತರಗತಿಯಲ್ಲಿ ಫಲಿತಾಂಶ ಕಡಿಮೆಯಾಗಿರುವ ಬಗ್ಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿಗಳನ್ನು ನೀಡುವಂತೆ ಸೂಚಿಸಿದರು. ಶಿರಸಿ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಭೆಯನ್ನು ನಡೆಸಲು ತಡವಾಗಿದ್ದು, ಮುಂದಿನ ದಿನಗಳಲ್ಲಿ ನಿಯಮಿತವಾಗಿ ಪ್ರಗತಿ ಪರೀಶೀಲನೆ ನಡೆಸಲಾಗುವುದು ಹಾಗೂ ವಿಡಿಯೋ ಕಾನ್ಪರೆನ್ಸ್‌ ಮೂಲಕವೂ ಸಭೆಯನ್ನು ನಡೆಸುತ್ತೇನೆ ಎಂದರು.

ಸಭೆಯಲ್ಲಿ ಪುರಸಭೆ, ತಾ.ಪಂ. ಪಶು ಚಿಕಿತ್ಸಾ ಇಲಾಖೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ,ಯುವನಿಧಿಯ ಮಾಹಿತಿಗಳನ್ನು ನೀಡಿದರು.ತಾಲ  ರಾಮಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಪರೀಶೀಲನೆ ನಡೆಸಿದರಲ್ಲದೆ, ವಿದ್ಯಾರ್ಥಿನಿಲಯಗಳು ಉತ್ತಮವಾಗಿದ್ದು, ಹೊಸದಾಗಿ ಆರಂಭಿಸಲಾಗಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಬೆಂಚ್‌ಗಳ ಅಗತ್ಯವಿದ್ದು, ಇನ್ನೊಂದು ತಿಂಗಳಲ್ಲಿ ಇಲಾಖೆಯವರು ಒದಗಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ತಹಸಿಲ್ದಾರ್ ಜೂಗಲ್ ಮಂಜುನಾಯಕ, ತಾ.ಪಂ.ಇಒ ಆರ್‌.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಕಂದಾಯಾಧಿಕಾರಿ ಜಗದೀಶ್,ಆರೋಗ್ಯಾಧಿಕಾರಿ ಡಾ.ಅರುಣ್, ಡಾ.ಬಸವರಾಜ್,ಎಸಿಡಿಪಿಒ ಮೋಹನ್ ಕಾಳಾಪುರ, ಅಂಗನವಾಡಿ ಮೇಲ್ವಿಚಾರಕಿ ಲತೀಫಾ ಬೇಗಂ, ಇಸಿಒ ಟಿ.ಎಂ.ಬಸವರಾಜ್,ಅರಣ್ಯ, ಆರೋಗ್ಯ, ಪಶುಸಂಗೋಪನೆ, ಪುರಸಭೆ, ಭೂಮಾಪನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿನಿಯರ ಬಿಸಿಎಂ ಹಾಸ್ಟೆಲ್ ಆರಂಭಿಸಲು ವಿದ್ಯಾರ್ಥಿನಿಯರ ಮನವಿಃ- ಕಂಪ್ಲಿ ತಾಲ್ಲೂಕು ಉಸ್ತುವಾರಿ ಅಧಿಕಾರಿಗಳಾದ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತೆ ಕಾವ್ಯಾರಾಣಿ ಯವರಿಗೆ ಕಂಪ್ಲಿ ಪಟ್ಟಣದ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿವಿಧ ಗ್ರಾಮಗಳಾದ ನಂ2 ಮುದ್ದಾಪುರ, ಹೊಸ ಹಾಗೂ ಹಳೇ ದರೋಜಿ, ರಾಮಸಾಗರ, ಎಮ್ಮಿಗನೂರು ಗ್ರಾಮಗಳ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರು ಕಂಪ್ಲಿಗೆ ವಿವಿಧ ಕಾಲೇಜುಗಳಿಗೆ ಬರುತ್ತಿದ್ದೇವೆ. ಪ್ರತಿದಿನ ಬೆಳಿಗ್ಗೆ ಬಂದು ಸಂಜೆ ಹೋಗಬೇಕು, ಆದರೆ ಸಮಯಕ್ಕೆ ಸರಿಯಾಗಿ ಬಸ್ಸುಗಳು ಇಲ್ಲದೇ ಇರುವುದರಿಂದ ತೀವ್ರವಾದ ತೊಂದರೆಯಾಗಿದೆ. ಹಾಸ್ಟೇಲ್ ಸೇರೋಣವೆಂದರೆ ಕಂಪ್ಲಿಯಲ್ಲಿ ಬಿಸಿಎಂ ಹಾಸ್ಟೇಲ್ ಇಲ್ಲದೇ ಇರುವುದು ಅಡಚಣೆಯಾಗಿದ್ದು, ವಿದ್ಯಾಭ್ಯಾಸ ಮಾಡಲು ತೊಂದರೆಯಾಗಿದ್ದು, ಕಾಲೇಜು ಬಿಡಬೇಕಾಗಿದೆ ಎಂದು ವಿದ್ಯಾರ್ಥಿಗಳಾದ ಲೀಲವತಿ, ಕಲ್ಪನಾ, ರಬೀಯಾಬೇಗಂ, ಉಷಾ ಸೇರಿದಂತೆ ಇತರು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಸಹಾಯಕ ಆಯಕ್ತರು ಹಾಗೂ ಉಸ್ತುವಾರಿ ಅಧಿಕಾರಿಗಳಾದ ಕಾವ್ಯಾರಾಣಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೂಕ್ತಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.