ಬಾಗಲಕೋಟೆ: ತಾಲೂಕಿನ ಮಲ್ಲಾಪೂರ ಗ್ರಾಮದ ದಿ.ಪಾರ್ವತೆವ್ವ ರಾಜನಾಳ ಅವರ 9ನೇ ವರ್ಷದ ಪುಣ್ಯಸ್ಮರಣೆ ನಿಮಿತ್ಯ ಅವರ ಮಗನಾದ ಬಸವರಾಜ ರಾಜನಾಳ ಪ್ರವಾಹ ಸಂತ್ರಸ್ತರ ನೆರವಿಗಾಗಿ 6 ಸಾವಿರ ರೂ.ಗಳ ಡಿಡಿಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಿದರು. ಡಿಡಿಯನ್ನು ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾ.ನಿ.ಪ ಅಧ್ಯಕ್ಷ ಮಹೇಶ ಅಂಗಡಿ, ಮಂತ್ರಪ್ಪ ರಾಜನಾಳ, ಶಿವು ರಾಜನಾಳ, ಜಗದೀಶ ಕಂದಗಲ್ ಇದ್ದರು.