ವಿಜಯಪುರ 22: ನಗರದ ಹೊರವಲಯ ಮಹಾತ್ಮಗಾಂಧಿನಗರ, ಸ್ಟಾರ್‌ಚೌಕ್ ಹತ್ತಿರ ಇಟ್ಟಗೆ ಬಟ್ಟಿಯಲ್ಲಿ ಹೊಟ್ಟೆಪಾಡಿಗಾಗಿ ಕೆಲಸಕೆ ಬಂದ ಕಾರ್ಮಿಕರಾದ ಜಮಖಂಡಿ ತಾಲೂಕಿ ಚಿಕ್ಕಲಕಿ ಕ್ರಾಸ್‌ನ ಸದಾಶಿವ ಮಾದರ, ಉಮೇಶ ಮಾದರ, ಸದಾಶಿವ ಬಬಲಾದಿ ಇವರನ್ನು ಮೂರಾ್ನಲ್ಕು ದಿನ ಕೂಡಿ ಹಾಕಿ ಅಮಾನವೀಯವಾಗಿ ಥಳಿಸಿರುವುದು ಅತ್ಯಂತ ಹೀನ ಕೃತ್ಯವಾಗಿದೆಎಂದು ಭಾರತೀಯಜನತಾ ಪಾರ್ಟಿಅಸಂಘಟಿತಕಾರ್ಮಿಕ ಪ್ರಕೋಸ್ಠಿಯ ರಾಜ್ಯ ಸದಸ್ಯರಾದ ಸಚೀನ ಶಿ. ಬೊಂಬಲೆ ಹೇಳಿದರು.
ಅವರು ನಗರದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೋಂದ ಕಾರ್ಮಿಕರಿಗೆ ಹಣ್ಣು ಹಂಪಲು ವಿತರಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಟ್ಟಿಗೆ ಬಟ್ಟೆ ಮಾಲೀಕ ಹಾಗೂ ಗುಂಡಾ ವರ್ತನೆತೋರಿದ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕೆಂದು ಸಾಂತ್ವಾನ ಹೇಳಿದರು. ಪೆಟ್ಟುತಿಂದವರಿಗೆ ಸಾಂತ್ವಾನ ವ್ಯಕ್ತಪಡಿಸಿ ಕಾರ್ಮಿಕ ಇಲಾಖೆಯಿಂದ ಹಾಗೂ ಸರ್ಕಾರದಿಂದ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಒದಗಿಸುವುದಲ್ಲದೇ ದುಸ್ಕೃತ್ಯ ಎಸಗಿದವರನ್ನು ಕಠೀಣ ಶಿಕ್ಷೆ ನೀಡಬೇಕು.
ಜಿಲ್ಲಾ ಸಂಘಟಿತ ಕಾರ್ಮಿಕ ಸಹ ಸಂಚಾಲಕರಾದ ಸಂಗಮೇಶ ಮ. ಉಕ್ಕಲ ಮಾತನಾಡಿ, ಇದೊಂದು ಅಮಾನವೀಯಕೃತ್ಯವಾಗಿದ್ದು, ಕಾನೂನಿನ ಸುವ್ಯವಸ್ಥೆ ಹದಗೆಟ್ಟಂತಾದಗಿದೆ. ಹತ್ತಾರು ಜನ ಸೇರಿ ಕೈ ಕಾಲು ಕಟ್ಟಿ ಪ್ರಾಣಾಪಾಯ ಆಗುವಂತೆ ಥಳಿಸಿದ ಹೀನ ಮನಸ್ಸಿನ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಬೇಕು. ಇಂತಹ ವ್ಯಕ್ತಿಗಳಿಗೆ ನಾಗರೀಕ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದು ತಿಳಿದುಕೊಳ್ಳಲು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಕ್ರೊಶ ವ್ಯಕ್ತಪಡಿಸಿದರು. ನಗರದಜನತೆ, ಸಂಘ, ಸಂಸ್ಥೆಗಳು ತಮ್ಮ ಜೊತೆಗಿದ್ದು, ಯಾವುದೇ ಭಯ ಒತ್ತಡಕ್ಕೆ ಮಣಿಯದೆ ಪಿರಾ್ಯಧಿ ದಾಖಲಿಸಿ ನ್ಯಾಯದೊರಕಿಸುವ ನಿಟ್ಟಿನಲ್ಲಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಸುಭಾಸ ಭಿಸೆ, ಮಂಜುಳಾ ಅಂಗಡಿ, ರವಿ ರಜಪೂತ, ಕಾಳೆ ಹಾಗೂ ಇನ್ನಿತರರು ಬಿಜೆಪಿ ಕಾರ್ಯಕರ್ತರುಇದ್ದರು.