ಕಾರವಾರ, ಜುಲೈ 10: ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗವನ್ನು ಅನುಷ್ಟಾನ ಮಾಡಬೇಕೆಂದು ಆಗ್ರಹಿಸಿ ಕಾರವಾರ-ಅಂಕೋಲಾ ನಾಗರಿಕರ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅಜರ್ಿ ಹಾಕುವುದಾಗಿ ಮಾಜಿ ಸಚಿವ ಆನಂದ ಅಸ್ನೋಟಿಕರ ಹೇಳಿದ್ದಾರೆ.
ಕಾರವಾರದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿ, ಅಂಕೋಲಾ ಹುಬ್ಬಳ್ಳಿ ರೈಲ್ವೆ ಮಾರ್ಗ ವಿರೋಧಿಸಿ ಪರಿಸರವಾದಿಗಳು ರಾಜ್ಯ ಹೈಕೋಟರ್ಿನಲ್ಲಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅಜರ್ಿಯ ಜೊತೆ, ತನ್ನ ಮಧ್ಯಪ್ರವೇಶದ ಅಜರ್ಿ ಸ್ವೀಕರಿಸಬೇಕೆಂದು ಹೈಕೋರ್ಟಗೆ ಮನವಿ ಮಾಡಲಿದ್ದೇನೆ ಎಂದರು. ಅಂಕೋಲಾ-ಹುಬ್ಬಳ್ಳಿ ಪಿಐಎಲ್ನ ವಿಚಾರಣೆ ಜುಲೈ 14 ರಂದು ಹೈಕೋಟರ್್ ಕೈಗೆತ್ತಿಕೊಳ್ಳಲಿದ್ದು, ಅಲ್ಲಿ ನಾಗರಿಕರ ಪರ ತಾನೂ ಮಧ್ಯಪ್ರವೇಶದ (ಇಂಟರ್ವೆಂಶನ್) ಅಜರ್ಿ ಸಲ್ಲಿಸಿ ತನ್ನನ್ನೂ ಪ್ರತಿವಾದಿಯನ್ನಾಗಿ ಮಾಡುವಂತೆ ಕೋರುತ್ತೇನೆ. ಈ ಅಜರ್ಿಯಲ್ಲಿ ರೈಲುಮಾರ್ಗದ ಪರ ನ್ಯಾಯಾಲಯಕ್ಕೆ ಮನದಟ್ಟು ಮಾಡಲು ಯಾವ ಅಂಶಗಳಿವೆ ಎಂದು ರೈಲ್ವೆ ಯೋಜನೆಯ ಪರ ಇರುವ ನಾಗರಿಕರು ತನಗೆ ತಿಳಿಸಬೇಕಾಗಿ ಮಾಜಿ ಸಚಿವ ಆಸ್ನೋಟಿಕರ್ ಮನವಿ ಮಾಡಿಕೊಂಡರು.
ಕೋವಿಡ್ ಸಂದರ್ಭದಲ್ಲಿ ಕಿತ್ತಾಟ ಬೇಡ:
ಕೋವಿಡ್ನ ಸಂದರ್ಭದಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿ ಜನರನ್ನು ದಿಕ್ಕು ತಪ್ಪಿಸಲು ಆರಂಭಿಸಿದ್ದಾರೆ ಎಂದ ಅಸ್ನೋಟಿಕರ್ ,ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಈಗಲೇ ಮಾಜಿ ಮತ್ತು ಹಾಲಿ ಶಾಸಕರು ಕಿತ್ತಾಟ ಪ್ರಾರಂಭಿಸಿದ್ದಾರೆ. ಯಾರನ್ನೂ ನಾನೀಗ ಟೀಕಿಸುವುದಿಲ್ಲ. ಈ ಹಿಂದೆಯೂ ಕಾರವಾರದ ಶಾಸಕರಿಗೆ ಹಲವು ಸಲಹೆಯ ನೀಡಿದ್ದೆ. ಅವರು ಪರಿಗಣಿಸದೇ ಉಡಾಫೆ ಮಾಡಿದರು. ಪರಿಣಾಮ ಈಗ ಮಾಜಿಯಾಗಿದ್ದಾರೆ ಎಂದರು. ಹಾಲಿ ಶಾಸಕಿ ರೂಪಾಲಿ ನಾಯ್ಕ ಕಾರ್ಯವೈಖರಿಯನ್ನು ಟೀಕಿಸಿದ ಆನಂದ ಅಸ್ನೋಟಿಕರ ಶಾಸಕಿ ರೂಪಾಲಿ ಅವರು ಕೋವಿಡ್ನ ಈ ಸಂದರ್ಭದಲ್ಲಿ ತನ್ನ ಕ್ಷೇತ್ರದಲ್ಲಿಯೇ ಇರಬೇಕಿತ್ತು. ಆದರೆ ಅವರು ಬೆಂಗಳೂರು, ಮೈಸೂರು ಹಾಗೂ ಚಿತ್ರದುರ್ಗಗಳಲ್ಲಿ ಹೆಚ್ಚಿನ ಕಾಲ ಕಳೆಯುತ್ತಾರೆ. ಜನಪ್ರತಿನಿಧಿಗಳು ಕಷ್ಟದ ಸಮಯದಲ್ಲಿ ಜನರ ಮಧ್ಯದಲ್ಲೇ ಇರಬೇಕು. ಶಾಸಕರು ತಮ್ಮ ಸಕರ್ಾರಿ ಕಚೇರಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ವಗರ್ಾಯಿಸಬೇಕು. ಈಗಿನ ಅವರ ಕಚೇರಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ದೂರವಿದ್ದು ಗಭರ್ಿಣಿಯರು, ಅಂಗವಿಕಲರಿಗೆ ಮಾಳಿಗೆ ಮೆಟ್ಟಿಲೇರಿ ಹೋಗುವುದು ಕಷ್ಟವಾಗುತ್ತಿದೆ ಎಂದರು.
ಕೇಂದ್ರ ಸಕರ್ಾರ ಬರುವ ಅಗಸ್ಟ್ 15 ರಂದು ಕೋವಿಡ್ಗೆ ಔಷಧಿಯನ್ನು ಬಿಡುಗಡೆ ಮಾಡಲಿದೆ ಎಂಬ ಮಾಧ್ಯಮದ ವರದಿಗಳನ್ನು ಉಲ್ಲೇಖಿಸಿದ ಆನಂದ ಅವರು ತಾನೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವನಾಗಿದ್ದೆ. ಇನ್ನೂ ಹಲವು ಅಧಿಕಾರಿಗಳು ಹಾಗೂ ವಿಜ್ಞಾನಿಗಳು ತಜ್ಞರು ತನ್ನ ಸಂಪರ್ಕದಲ್ಲಿದ್ದಾರೆ.
ಯಾವುದೇ ಔಷಧಿಯನ್ನು ಸರಿಯಾಗಿ ಪ್ರಯೋಗಾಲಯದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಪ್ರಯೋಗ ಮಾಡಲೇ ಬೇಕು. ಹೀಗಾಗಿ ಐಸಿಎಂಆರ್ ಹಾಗೂ ಭಾರತ ಸಕರ್ಾರಗಳು ಸರಿಯಾದ ಕ್ಲಿನಿಕಲ್ ಟ್ರಯಲ್ ಮಾಡದೇ ಈ ಔಷಧಿಯನ್ನು ಬಿಡುಗಡೆ ಮಾಡಬಾರದು ಎಂದು ಅವರು ಒತ್ತಾಯಿಸಿದರು.