ಬೆಂಗಳೂರು, ಮೇ 21,ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಹೆಚ್ಚಳ ಮಾಡಬಾರದು ಎಂಬ ಆದೇಶವನ್ನು ಧಿಕ್ಕರಿಸಿರುವುದು ಆಶಿಸ್ತಿನ ಪರಮಾವಧಿಯಾಗಿದೆ ಎಂದು ಸರ್ಕಾರ ಎಚ್ಚರಿಕೆ ನೋಟಿಸ್ ಜಾರಿ ಮಾಡಿದೆ. ಕರೋನ ಮತ್ತು ಲಾಕ್ಡೌನ್ ಕಾರಣ ರಾಜ್ಯದ ಜನತೆ ಬಹಳ ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಶುಲ್ಕ ಹೆಚ್ಚಳ ಮಾಡಿ ಜನರ ಶೋಷಣೆಗೆ ಯಾವ ಖಾಸಗಿ ಶಾಲೆ ಮುಂದಾಗಬಾರದು ಸರ್ಕಾರ ಬಹಳ ಹಿಂದೆಯೇ ಸುತ್ತೊಲೆ ಹೊರಡಿಸಿದ್ದರೂ ಅದನ್ನು ಖಾಸಗಿ ಶಾಲೆಗಳು ಮಾನ್ಯ ಮಾಡದೆ ಪೋಷಕರ ಸುಲಿಗೆ ಮಾಡ ಹೊರಟಿರುವುದನ್ನು ಸಹಿಸಲಾಗದು ಎಚ್ಚರಿಕೆ ನೀಡಲಾಗಿದೆ. ಈ ಪತ್ರ ತಲುಪಿದ ಮೂರು ದಿನಗಳ ಒಳಗೆ ಲಿಖಿತ ಹೇಳಿಕೆ ಮೂಲಕ ಸೂಕ್ತ ಸಮಾಜಾಯಿಸಿ ಕೊಡಬೇಕು ತಪ್ಪಿದಲ್ಲಿ ಶಾಲೆಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರಣ ಕೇಳಿ ಖಾಸಗಿ ಶಾಲೆಗಳಿಗೆ ನೋಟಿಸ್ ಜಾರಿಮಾಡಿದ್ದಾರೆ.