ಏಶ್ಯನ್ ಗೇಮ್ಸ್ ಟೆನ್ನಿಸ್ ಭಾರತದ ಅಂಕಿತಾಗೆ ಕಂಚು
ಪಾಲೆಂಬಾಗ್ 23: ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಶ್ಯಾಡ್ ಗೇಮ್ಸ್ ನಲ್ಲಿ ಗುರುವಾರವೂ ಭಾರತದ ಪದಕ ಬೇಟೆ ಮುಂದುವರಿದಿದೆ. ಮಹಿಳಾ ಟೆನ್ನಿಸ್ ಸಿಂಗಲ್ಸ್ ವಿಭಾಗದಲ್ಲಿ ಅಂಕಿತಾ ರೈನಾ ಕಂಚಿನ ಪದಕ ಗೆದ್ದಿದ್ದಾರೆ.
ಇಂದು ಬೆಳಿಗ್ಗೆ ನಡೆದ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯಾಟದಲ್ಲಿ ಭಾರತದ ಅಗ್ರ ಕ್ರಮಾಂಕದ ಸಿಂಗಲ್ಸ್ ಆಟಗಾತರ್ಿ ಅಂಕಿತಾ ಚೀನಾದ ಶುಯಿ ಜಾಂಗ್ ಅವರಿಗೆ 4-6,6-7 (6) ಸೆಟ್ಗಳ ಅಂತರದಿಂದ ಪರಾಭವಗೊಂಡರು.
ಅಂಕಿತಾ ರೈನಾ ಏಶ್ಯಾನ್ ಗೇಮ್ಸ್ ಇತಿಹಾಸದಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಆಟಗಾತರ್ಿ. ಈ ಮೊದಲು ಸಾನಿಯಾ ಮಿಜರ್ಾ 2006ರಲ್ಲಿ ಬೆಳ್ಳಿ ಮತ್ತು 2010ರಲ್ಲಿ ಕಂಚಿನ ಪದಕ ಗೆದ್ದಿದ್ದರು.
ಅಹಮದಾಬಾದ್ ಮೂಲದ 25ರ ಹರೆಯದ ಅಂಕಿತಾ ರೈನಾ ಈವರೆಗೆ ಅಂತಾರಾಷ್ತ್ರೀಯ ಮಟ್ಟದಲ್ಲಿ 6 ಸಿಂಗಲ್ಸ್ ಮತ್ತು 13 ಡಬಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಟೆನ್ನಿಸ್ ಡಬಲ್ಸ್ ಪುರುಷರ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಫೈನಲ್ ತಲುಪಿದ್ದು ಭಾರತಕ್ಕೆ ಬಂಗಾರ ಅಥವಾ ಬೆಳ್ಳಿ ಪದಕ ಖಾತ್ರಿಯಾಗಿದೆ.
ಒಟ್ಟಾರೆ ಭಾರತ 4 ಬಂಗಾರ,3 ಬೆಳ್ಳಿ ಮತ್ತು 9 ಕಂಚಿನ ಪದಕಗೊಳೊಂದಿಗೆ ಒಟ್ಟು 16 ಪದಕಗಳೊಂದಿಗೆ 9 ನೇ ಸ್ಥಾನದಲ್ಲಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 