ಪುರಸಭೆಯನ್ನು ನಗರಸಭೆಯನ್ನಾಗಿಸಲು ಶ್ರಮಿಸಿದ ಅಶೋಕ ಮನಗೂಳಿಗೆ ಪೌರಸನ್ಮಾನ
Ashok Managuli receives civic honour
ಸಿಂದಗಿ 08: ಪುರಸಭೆಯನ್ನು ನಗರಸಭೆಯನ್ನಾಗಿ ಪರಿವರ್ತನೆ ಮಾಡುವಲ್ಲಿ ಶ್ರಮಿಸಿದ ಶಾಸಕ ಅಶೋಕ ಮನಗೂಳಿಯವರಿಗೆ ಕಾರ್ಯಕರ್ತರ ಆಸೆಯಂತೆ ಶಾಸಕರನ್ನು ಚಿಕ್ಕಸಿಂದಗಿ ಬೈಪಾಸ್‌ನಲ್ಲಿರುವ ಪ್ರಥಮ ದರ್ಜೆ ಗುತ್ತಿಗೆದಾರ ದಯಾನಂದಗೌಡ ಬಿರಾದಾರ ಇವರ ಮನೆಯಲ್ಲಿ ಪೌರಸನ್ಮಾನ ಮಾಡಿದರು.
ಶಾಸಕ ಅಶೋಕ ಮನಗೂಳಿ ಅವರು ಮಾತನಾಡಿ, ಕೆಲ ದಿನಗಳ ಹಿಂದೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಆಗಮನದ ಸಮಯದಲ್ಲಿ ರಾಜ್ಯದಲ್ಲಿ 50 ಪುರಸಭೆಗಳನ್ನು ನಗರ ಸಭೆಯನ್ನಾಗಿ ಮಾಡುವಂತೆ ಪ್ರಸ್ತಾವನೆ ಬಂದಿದ್ದು ಸಿಂದಗಿ ಪುರಸಭೆಯನ್ನು ನಗರ ಸಭೆಯನ್ನಾಗಿ ಪ್ರಥಮ ಆದ್ಯತೆ ನೀಡಿ ಘೋಷಣೆ ಮಾಡುವುದಾಗಿ ನೀಡಿದ ಭರವಸೆಯಂತೆ ಇಂಡಿ ನಂತರ ಸಿಂದಗಿ ಪುರಸಭೆಯನ್ನಾಗಿ ಆದೇಶ ನೀಡಿ ನಡೆದಂತೆ ನಡೆದುಕೊಂಡಿದ್ದಾರೆ ಅವರಿಗೂ ಹಾಗೂ ಈ ಆದೇಶಕ್ಕೆ ಸಹಕಾರ ನೀಡಿದ ಮುಖ್ಯಮಂತ್ರಿಗಳಿಗೂ, ಡಿಸಿಎಂ ಅವರಿಗೂ ಅಲ್ಲದೆ ಸಚಿವ ಸಂಪುಟದ ಎಲ್ಲ ಸಚಿವರಿಗೂ ಪತ್ರಿಕೆ ಮುಖಾಂತರ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಂತರ ಕಿತ್ತೂರರಾಣಿ ಚನ್ನಮ್ಮ ಸರ್ಕಲ್ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ದಿ.ಮಾಜಿ ಸಚಿವ ಎಂ.ಸಿಮನಗೂಳಿ ರಸ್ತೆಯ ಮಾರ್ಗವಾಗಿ ತೆರಳಿ ಸ್ವಾಮಿ ವಿವೇಕಾನಂದ ವೃತ್ತದ ವರೆಗೆ ಮೆರವಣಿಗೆಯು ಸಕಲ ವಾಧ್ಯ, ಕಲಾ ತಂಡಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ಮೆರವಣಿಗೆಯಲ್ಲಿ ಪುರಸಭೆ ಅದ್ಯಕ್ಷ ಡಾ.ಶಾಂತವೀರ ಮನಗೂಳಿ, ಉಪಾದ್ಯಕ್ಷ ಸಂದೀಪ ಚೌರ, ಆಲಮೇಲ ಪಂ.ಪ ಅದ್ಯಕ್ಷ ಸಾದಿಕ ಸುಂಬಡ, ದಯಾನಂದಗೌಡ ಬಿರಾದಾರ, ಎಂ.ಎಂ.ಹಂಗರಗಿ, ಮಹಾದೇವಪ್ಪ ಸಿಂದಗಿ, ಶಿವಜಾತ ಹಿರೇಮಠ, ಶ್ರೀಮಂತ ಮಲ್ಲೇದ, ಶಿವಶಂಕರ ಬಿರಾದಾರ, ಬಸವರಾಜ ಕಾಂಬಳೆ, ವ್ಹಿ.ಬಿ.ಕುರುಡಿ, ಅಂಬಿಕಾ ಪಾಟೀಲ, ಜಯಶ್ರೀ ಹದನೂರ, ಶರಣಮ್ಮ ನಾಯಕ ಸೇರಿದಂತೆ ವಿವಿದ ಗ್ರಾಮಗಳ ಕಾರ್ಯಕರ್ತರು, ಮುಖಂಡರು, ಮಹಿಳಾ ನಾಯಕಿಯರು, ಸಿಂದಗಿಯ ಜನತೆ ಪಕ್ಷ ಬೇದ ಯಾವುದೇ ಜಾತಿ ಎನ್ನದೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 