ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಸಿಬ್ಬಂದಿ ಮುಷ್ಕರ

ಬಳ್ಳಾರಿ10: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯಕ್ತ ಆಶಾ ಕಾರ್ಯಕತರ್ೆಯರ ಸರ್ಂಘದ ನೇತೃತ್ವದಲ್ಲಿ ಆಶಾ ಕಾರ್ಯಕತರ್ೆಯರು ನಡೆಸಿದ ಹೋರಾಟ ಮತ್ತು ಮನವಿಗೆ ಸಕರ್ಾರ ಸ್ಪಂದಿಸದ ಕಾರಣ, ಮುಂದಿನ ಹಂತವಾಗಿ ಇಂದಿನಿಂದ ರಾಜ್ಯಾದ್ಯಂದ  ಆಶಾ ಕಾರ್ಯಕತರ್ೆಯರು ಕೆಲಸ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿದ್ದು, ಬಳ್ಳಾರಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಆಶಾ ಕಾರ್ಯಕತರ್ೆಯರು ಪ್ರತಿಭಟನೆ ನಡೆಸಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜನಾರ್ಧನ ಎಚ್.ಎಲ್ ಅವರಿಗೆ ಸಲ್ಲಿಸಿದರು.

 ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘದ ರಾಜ್ಯ ಕಾರ್ಯದಶರ್ಿ ಡಿ.ನಾಗಲಕ್ಷ್ಮಿ ಅವರು ಮಾತನಾಡಿ, ಒಂದು ವಾರದಿಂದ ಆಶಾ ಕಾರ್ಯಕತರ್ೆಯರು ಎಲ್ಲ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ರು, ಸಚಿವರಿಗೆ  ಮನವಿ ಸಲ್ಲಿಸಿದ್ದಾರೆ. ಕಳೆದ ಆರೇಳು ಬಾರಿ ಸುಮಾರು 10 ಮನವಿ ಸಲ್ಲಿಸಿದ್ದರೂ ಕನಿಷ್ಠಪಕ್ಷ ಬೇಡಿಕೆಗಳನ್ನು ಚಚರ್ಿಸಲು ಸಭೆ ಕರೆಯುವ ಪ್ರಸ್ತಾಪವನ್ನೂ ಸಕರ್ಾರ ಮಾಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಶುಕ್ರವಾರದಿಂದ ಕೆಲಸ ಬಹಿಷ್ಕರಿಸಿ, ರಾಜ್ಯದಾದ್ಯಂತ ಆಶಾ ಕಾರ್ಯಕತರ್ೆಯರು ಹೋರಾಟಕ್ಕೆ ಧುಮುಕಿದ್ದಾರೆ. ಬೇಡಿಕೆ ಈಡೇರುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ಜನರ ಆರೋಗ್ಯಕ್ಕಾಗಿ ಹಗಲಿರುಳು ದುಡಿಯುವ ಆಶಾಗಳಿಗೆ ಜೀವನಯೋಗ್ಯ ಕನಿಷ್ಠ ಗೌರವಧನ ನೀಡಲು ಸಕರ್ಾರಕ್ಕೆ ಸಾಧ್ಯವಿಲ್ಲದಿರುವುದು ದುರಂತ. ಆಶಾಗಳಿಗೆ ಕನಿಷ್ಠ 12,000 ರೂ. ಗೌರವಧನ ನಿಗದಿಗೊಳಿಸಬೇಕು. ಹಾಗೆಯೇ ಆಶಾ ಕಾರ್ಯಕತರ್ೆಯರಿಗೆ ಅಗತ್ಯ ಸಲಕರಣೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

  ಸಂಘದ ಜಿಲ್ಲಾ ಗೌರವಾಧ್ಯಕ್ಷ ಎ.ಶಾಂತಾ ನೇತೃತ್ವ ವಹಿಸಿಕೊಂಡಿದ್ದರು. ಮುಖಂಡರಾದ ಗೀತಾ, ಅಂಬಿಕಾ, ರಾಜೇಶ್ವರಿ, ರಾಮಕ್ಕ, ಪಾವನಿ, ರೇಷ್ಮಾ, ರೇಣುಕಾ, ಮಾಣಿಕ್ಯಮ್ಮ ಮುಂತಾದವರು ಪಾಲ್ಗೊಂಡಿದ್ದರು.