ತಂತ್ರಜ್ಞಾನ ಬೆಳೆದಂತೆ, ಕೃಷಿ ಕ್ಷೇತ್ರದಲ್ಲಿಯೂ ಆವಿಷ್ಕಾರಗಳು ಅವಶ್ಯಕ: ಶಿಂದೆ
As technology advances, innovations are necessary in the agricultural sector too: Shinde
ಬೆಳಗಾವಿ 03: ನಮ್ಮ ಬೆಳಗಾವಿ ಜಿಲ್ಲೆಯು ಅತೀ ಹೆಚ್ಚು ಕಬ್ಬು ಬೆಳೆಯುತ್ತಿರುವುದರಿಂದ ಸಕ್ಕರೆ ಜಿಲ್ಲೆಯೆಂದೆ ಪ್ರಸಿದ್ಧಿಯಾಗಿದೆ. ಆದ ಕಾರಣ ನಿಮಗೆಲ್ಲರಿಗೂ ಸಹ ಈ ಕಬ್ಬು ಕಟ್ಟಾವು ಯಂತ್ರಗಳ ಚಾಲಕರ ಹಾಗೂ ಡ್ರೋನ್ ಆಪರೇಟರ್ ತರಬೇತಿಯು ಉಪಯುಕ್ತವಾಗಿದೆ ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂದೆ ತಿಳಿಸಿದರು.
ತಂತ್ರುಜ್ಞಾನವನ್ನು ನಿಮ್ಮ ವೃತ್ತಿಯಲ್ಲಿ ಬಳಸಿದಂತೆ ಮನುಷ್ಯನ ಮೇಲಿರುವಂತಹ ನಿರ್ಭರತೆಯು ಕಡಿಮೆಯಾಗುತ್ತಾ ಹೋಗುತ್ತದೆ, ಮತ್ತು ಕಡಿಮೆ ಸಮಯದಲ್ಲಿ ಅತೀಹೆಚ್ಚು ಕೆಲಸವನ್ನು ಮಾಡಬಹುದು. ಎಲ್ಲಾ ಕ್ಷೇತ್ರದಲ್ಲಿ ತಂತ್ರಜ್ಞಾನ ಬೆಳೆದಂತೆ, ಕೃಷಿ ಕ್ಷೇತ್ರದಲ್ಲಿಯೂ ಆವಿಷ್ಕಾರಗಳು ಅವಶ್ಯಕ ಆ ನಿಟ್ಟಿನಲ್ಲಿ ಕಬ್ಬು ಕಟ್ಟಾವು ಯಂತ್ರಗಳ ಚಾಲಕರ ಹಾಗೂ ಡ್ರೋನ್ ಆಪರೇಟರ್ ತರಬೇತಿಯು ಸಹ ಒಂದು ಉತ್ತಮ ಉದಾಹರಣೆಯಾಗಿದೆೆ, ಕೃಷಿ ಕ್ಷೇತ್ರದಲ್ಲಿ ಅಭಿವೃದ್ದಿ ಸಾಧಿಸಿದಂತೆ ಎಲ್ಲಾ ಕೃಷಿಕರು ಸಹ ಉದ್ಯೋಗಸ್ಥರಂತೆ ಲಾಭಗಳಿಸಬಹುದು ಎಂದು ತಿಳಿಸಿದರು.
ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿಯಲ್ಲಿ ಬೆಳಗಾವಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಮತ್ತು ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ದಿ. 31ರಂದು ಹಮ್ಮಿಕೊಂಡಿದ್ದ 13 ದಿನಗಳ ಕೃಷಿ ಉದ್ಯಮಿ ತರಬೇತಿಯಲ್ಲಿ ಗ್ರಾಮೀಣ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ- 2025 ಅನುದಾನದಡಿಯಲ್ಲಿ ಕಬ್ಬು ಕಟ್ಟಾವು ಯಂತ್ರಗಳ ಚಾಲಕರ ಹಾಗೂ ಕೃಷಿ ಆಧಾರಿತ ಡ್ರೋನ್ ಆಪರೇಟರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್. ಡಿ. ಕೋಳೆಕರ ಅವರು ಮಾತನಾಡಿ ಕೃಷಿ ಇಲಾಖೆಯಲ್ಲಿ ಈ ತರಬೇತಿಯು ಒಂದು ವಿನೂತನ ಕಾರ್ಯಕ್ರಮವಾಗಿದ್ದು, ಹಾಗೂ ಸಂಚಲನವನ್ನು ಸೃಷ್ಡಿಸಿದೆ. ಆದ ಕಾರಣ ಈ ತರಬೇತಿಯ ಸಂಪೂರ್ಣ ಲಾಭವನ್ನು ಪಡೆಯಿರಿ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಪ್ರವೀಣ ಕೆ. ಎಸ್. ಇವರು ಈ ಕಬ್ಬು ಕಟ್ಟಾವು ಯಂತ್ರಗಳ ಚಾಲಕರ ಹಾಗೂ ಡ್ರೋನ್ ಆಪರೇಟರ್ ತರಬೇತಿಯು ಸಂಸ್ಥೆಯ ವಿನೂತನ ಹಾಗೂ ನಾವಿನ್ಯತೆಯಿಂದ ಕೂಡಿರುವಂತಹ ತರಬೇತಿಯಾಗಿದ್ದು, ರಾಜ್ಯದಲ್ಲಿ ್ರ್ರಥಮ ಬಾರಿಗೆ ನಮ್ಮ ಬೆಳಗಾವಿ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ (ಅಃಖಖಇಖಿಋ) ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದು, ಡ್ರೋನ್ ಆಪರೇಟರ್ ತರಬೇತಿ ಪಡೆದ ಶಿಬಿರ್ರಾಥಿಗಳಿಗೆ ಆಉಅಂ ಪ್ರಮಾಣೀಕೃತ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಶಾಂತ ಘೋಡಕೆ ಎಲ್.ಡಿ.ಸಿ.ಎಮ್ ಕೆನರಾ ಬ್ಯಾಂಕ ಬೆಳಗಾವಿ ಇವರು ಸಹ ಉತ್ತಮ ರೀತಿಯ ತರಬೇತಿಯನ್ನು ಸಂಸ್ಥೆಯವರು ಹಮ್ಮಿಕೊಡಿದ್ದು, ತರಬೇತಿಯ ನಂತರ ಶಿಬಿರ್ರಾಥಿಗಳಿಗೆ ಸಾಲ ಸೌಲಭ್ಯದ ಕುರಿತು ತಿಳಿಸಿದರು. ಮತ್ತು ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅತಿಥಿಗಳು ಶಿಬಿರಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ಬಿರಾದಾರ, ಇಲಾಖೆಯ ಸಹ ಸಿಬಂದಿ ವೀಣಾ, ತರಬೇತಿ ಸಂಸ್ಥೆಯ ಎಲ್ಲಾ ಸಿಬಂದ್ದಿಯವರು ಉಪಸ್ಥಿತರಿದ್ದರು. ವಂದನಾರೆ್ನಯನ್ನು ಸಂಸ್ಥೆಯ ಉಪನ್ಯಾಸಕಿ ರಾಜೇಶ್ವರಿ ದೇವಲಾಪೂರ ಇವರು ನೆರವೇರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 