ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ -ಸ್ತ್ರೀ-ಚೇತನ ಅಭಿಯಾನ

As part of International Women's Day - Stree-Chetana Campaign

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ -ಸ್ತ್ರೀ-ಚೇತನ ಅಭಿಯಾನ 

ಹಾವೇರಿ 12: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕಿನ  ದೇವಿಹೊಸೂರ ಗ್ರಾಮ ಪಂಚಾಯತಿಯಲ್ಲಿ ಸ್ತ್ರೀ-ಚೇತನ ಅಭಿಯಾನ ಕೈಗೊಳ್ಳಲಾಯಿತು. ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳಾದ ಶಿವಬಸಪ್ಪ ಸಾತೇನಹಳ್ಳಿ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶ ಮಹಿಳೆಯರಿಗೂ ಸಮಾನ ಅವಕಾಶ ವೇತನ ಸೌಲಭ್ಯವನ್ನು ಕಲ್ಪಿಸಲಾಗುತ್ತಿರುವುದರಿಂದ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಶೇ.50ಅಕ್ಕಿಂತ ಹೆಚ್ಚಿರುತ್ತದೆ.ಈ ಸಾಲಿನಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಶೇ.10 ರಷ್ಟು ಹೆಚ್ಚಿಸುವ ಸಲುವಾಗಿ ಗ್ರಾಮ ಪಂಚಾಯತಿಗಳಲ್ಲಿ 08ನೇ ಮಾರ್ಚ-2025 ರಿಂದ 31 ಮಾರ್ಚ್‌-2025ರ ವರೆಗೆ ಸ್ತ್ರೀ-ಚೇತನ ಅಭಿಯಾನದಲ್ಲಿ ಮನೆಮನೆ ಭೇಟಿ,ಕರಪತ್ರ,ಸ್ವಚ್ಚವಾಹಿನಿಯಲ್ಲಿ ಜಿಂಗಲ್ಸ್‌ ಮುಖಾಂತರ ಪ್ರಚಾರ ಕೈಗೊಳ್ಳಲಾಯಿತು ಎಂದರು. ಮಾಹಿತಿ ಶಿಕ್ಷಣ ಸಂಯೋಜಕರಾದ ಗೀರೀಶ ಬೆನ್ನೂರ ಅವರು ಸ್ತ್ರೀ ಚೇತನ ಅಭಿಯಾನದ ಉದ್ದೇಶಗಳ ಬಗ್ಗೆ ಮಾತನಾಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೋಂದಾಯಿತ ಎಲ್ಲಾ ಮಹಿಳಾ ಕೂಲಿಕಾರರಿಗೆ ಸಮಾನ ಅವಕಾಶ ನೀಡಿರುವ ಬಗ್ಗೆ ಜಾಗೃತಿ ಮೂಡಿಸುವುದು.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯ ಪ್ರಮಾಣವನ್ನು ಶೇ.60ಕ್ಕಿಂತ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವುದು.ಗ್ರಾಮೀಣ ಮಹಿಳಾ ಕುಟುಂಬಗಳನ್ನು ಸಬಲವಾಗಿಸುವುದು.ಮಹಿಳಾ ಕಾಯಕಬಂಧುಗಳಿಗೆ ಕಡ್ಡಾಯವಾಗಿ ಪ್ರೋತ್ಸಾಹಧನ ಪಾವತಿಸುವಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಇದೇ ಅವಧಿಯಲ್ಲಿ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಹಾಗೂ ಮಹಿಳಾ ಗ್ರಾಮಸಭೆ ಜರುಗಿತು.ಈ ಸಂದರ್ಭದಲ್ಲಿ ಪಂಚಾಯತಿಯ ಅಧ್ಯಕ್ಷರಾದ ವಿಶಾಲಾಕ್ಷಿ ಮುದಿಗೌಡ್ರ ಉಪಾದ್ಯಕ್ಷರಾದ ಮಹಮದ್‌ಜಾಫರ್ ಯರೇಶಿಮಿ  ಎಲ್ಲ ಸರ್ವಸದಸ್ಯರು,ಕೂಲಿಕಾರರು,ಸಾರ್ವಜನಿಕರು,ಮಹಿಳಾ ಸ್ವ-ಸಹಾಯ ಸಂಗದ ತಾಲೂಕ ಸಂಯೋಜಕರಾದ ಇಂದಿರಾ ಕನವಳ್ಳಿ ಎಲ್ಲ ಮಹಿಳಾ ಸಂಘದವರು ಪಂಚಾಯತಿ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.