ಅರುಣ್ ಜೇಟ್ಲಿ ಆರೋಗ್ಯ ಸ್ಥಿರ, ಆದರೆ ಗಂಭೀರ

ನವದೆಹಲಿ, ಆ 17            ಕೇಂದ್ರದ ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರ ಆರೋಗ್ಯ  ಸ್ಥಿರವಾಗಿದ್ದರೂ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಜೇಟ್ಲಿ ಅವರನ್ನು  ಉಸಿರಾಟ ತೊಂದರೆಯ ಕಾರಣದಿಂದ ಆಗಸ್ಟ್ 9 ರಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಏಮ್ಸ್ ಗೆ ಭೇಟಿ ನೀಡಿ ಮಾಜಿ ಸಚಿವರ ಆರೋಗ್ಯ ಸ್ಥಿತಿ ವಿಚಾರಿಸಿದರು. ಅಮಿತ್ ಶಾ ಕಳೆದ ರಾತ್ರಿ ಏಮ್ಸ್ ಗೆ ಭೇಟಿದ್ದರು. ರಾಷ್ಟ್ರಪತಿಗಳ ಭೇಟಿಯ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಆರೋಗ್ಯ ಖಾತೆ ರಾಜ್ಯ ಸಚಿವರಾದ ಅಶ್ವಿನಿ ಚೌಬೆ ಉಪಸ್ಥಿತರಿದ್ದರು. ಜೇಟ್ಲಿ ಅವರ ಚಿಕಿತ್ಸೆಯ ಜವಾಬ್ದಾರಿಯನ್ನು ನುರಿತ ವೈದ್ಯರ ನೋಡಿಕೊಳ್ಳುತ್ತಿದೆ. ಜೇಟ್ಲಿ ಅವರು ಕಳೆದ ವರ್ಷ ಮೂತ್ರಪಿಂಡ ಕಸಿಗೆ ಒಳಗಾಗಿದ್ದರು. ಈ ವೇಳೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಹಣಕಾಸು ಖಾತೆಯನ್ನು ಹೆಚ್ಚುವರಿಯಾಗಿ ನಿರ್ವಹಿಸಿದ್ದರು. ಅನಾರೋಗ್ಯದ ಕಾರಣ ಜೇಟ್ಲಿ ಅವರು ಫೆಬ್ರವರಿಯಲ್ಲಿ ಮೋದಿ ಸರ್ಕಾರದ ಮೊದಲ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಿರಲಿಲ್ಲ. ಈ ಕಾರ್ಯವನ್ನು ಗೋಯಲ್ ಅವರಿಗೆ ವಹಿಸಿದ್ದರು.