ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಸುಲಭಾ ನೀರಲಗಿ

ಧಾರವಾಡ 30: ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಮುಂದಿನ ದಿನಗಳಲ್ಲಿ ಕೇಳುಗರಿದ್ದರೂ ಕಲಾವಿದರ ಕೊರತೆ ಕಾಣಬಹುದು ಆದ್ದರಿಂದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದು 

ಡಾ. ಸುಲಭಾ ದತ್ತ ನೀರಲಗಿ ಅಭಿಪ್ರಾಯಪಟ್ಟರು. 

ಕಲಾಶ್ರೀ ಸಂಗೀತ ಸಭಾದಲ್ಲಿ ಜರುಗಿದ ಗುರುಪೂರ್ಣಿಮೆ ಮತ್ತು ಸಂಗೀತ ಭವನದ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಂಗೀತ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಕೃಷಿ ವಿಶ್ವ ವಿದ್ಯಾಲಯ ನಿವೃತ್ತ ಡೀನ 

ಡಾ ಎಸ್. ಟಿ. ಕಜ್ಜಿಡೋಣಿ, ಕ.ವಿ.ವಿ. ಸಂಗೀತ ವಿಭಾಗದ ನಿವೃತ್ತ ಮುಖ್ಯಸ್ಥ ವ್ಹಿ. ಆರ್. ಹೂಗಾರ, ಸರಕಾರಿ ನೌಕರರ ಸಂಘದ ಟೇನಿಸ್ ಕ್ರೀಡಾಪಟು ಭರತ ವಂಟಕುದರಿ, ಹಾಗೂ ಉಪನ್ಯಾಸಕಿ 

ಡಾ. ಶಿಲ್ಪಾ ಪವನ ಕೆಲವಡಿಕರ ಅವರನ್ನು ಸನ್ಮಾನಿಸಲಾಯಿತು.  ಖ್ಯಾತ ಹೋಮಿಯೋಪತಿ ತಜ್ಞ 

ಡಾ. ಸಂತೋಷ ಮಠಪತಿ, ಮಾಜಿ ಪಾಲಿಕೆ ಸದಸ್ಯ ರಾಘವೇಂದ್ರ ರಾಮದುರ್ಗ, ಸೋನಿಯಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರೂಪಾ ಡಂಬಳ ಮುಖ್ಯ ಅತಿಥಿಗಳಾಗಿದ್ದರು. ಡಾ. ಸುಲಭಾ ದತ್ತ ನೀರಲಗಿಯವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆ ಮತ್ತು ಭಾವಗೀತ್ ಧ್ವನಿ ಸುರಳಿಗಳ ಬಿಡುಗಡೆ ನಡೆಯಿತು.

ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಲ್ಲಭ ಭಟ್ ಅವರಿಂದ ಕೊಳಲುವಾದನ, 

ಅಶೋಕ ನಾಡಿಗೇರ ಅವರಿಂದ ಗಾಯನ ಮತ್ತು ಮಾಯಾ ಚಿಕ್ಕೇರೂರ ಶೋಭಾ ರಾಮದುರ್ಗ ಶೈಲಾ ಬಿಜಾಪೂರ ಹಾಗೂ ವೀಣಾ ವಾಳ್ವೇಕರ, ಹಾಗೂ ಕಲಾಶ್ರೀ ಸಂಗೀತ ಸಭಾ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.  ಇವರೆಲ್ಲರಿಗೆ ಪಂ. ಅಲ್ಲಮಪ್ರಭು ಕಡಕೋಳ ತಬಲಾ ಹಾಗೂ ಪರಶುರಾಮ ಕಟ್ಟಿ ಸಂಗಾವಿ ಹಾರ್ಮೊನಿಯಂ ಸಾತ್ ನೀಡಿದರು. ಎಸ್. ಬಿ. ಗುತ್ತಲ, ಡಾ. ಸತ್ಯಭೋಧ ಗುತ್ತಲ, ರಾಘವೇಂದ್ರ ಕುಂದಗೋಳ, ಪವನ ವಾಳ್ವೇಕರ, ಅಭಿಯಂತರ ವಿ. ಎನ್. ಪಾಟೀಲ, ಸಾವನ ಡಂಬಳ, ಪ್ರೊ. ಕೆ. ಎಸ್. ನರಹರಿ, 

ಪ್ರೊ. ರವಿ ಹಾವಿನಾಳೆ, ಶ್ಯಾಮ ನೀರಲಗಿ, ಮುಂತಾದವರು ಉಪಸ್ಥಿತರಿದ್ದರು.  ಕಲಾಶ್ರೀ ಸಂಗೀತ ಸಭಾದ ಕಾರ್ಯದರ್ಶಿ ದತ್ತ ನೀರಲಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.