ಕಲಾವಿದರು ಕಲೆಯನ್ನೇ ವೃತ್ತಿಯಾಗಿಸಿಕೊಂಡು ಬದುಕುತ್ತಿದ್ದಾರೆ: ಕೃಷ್ಣ ಕೊಳ್ಳಾನಟ್ಟಿ

ಧಾರವಾಡ 07: ಜಾನಪದ ಕಲಾಸಂಘಗಳು ನಶಿಸಿ ಹೋಗದಂತೆ ಕಲಾವಿದರು ಕಲೆಯನ್ನು ಬೆಳೆಸುತ್ತಾ ಬಂದಿದ್ದಾರೆ. ಆದರೆ ಸರ್ಕಾರದವರು ಯಾಕೋ ಏನೋ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಯಾವುದೇ ಅನುದಾನವನ್ನು ಬಿಡುಗಡೆ ಮಾಡದೇ ಇರುವುದು ಒಂದು ದುರಂತ. ಏಕೆಂದರೆ ಕಲಾವಿದರು ಕಲೆಯನ್ನೇ ವೃತ್ತಿಯಾಗಿಸಿಕೊಂಡು ಬದುಕುತ್ತಿದ್ದಾರೆ. ಆದ್ದರಿಂದ ಸರ್ಕಾರ  ಕೂಡಲೇ ಸಂಘ ಸಂಸ್ಥೆಗಳಿಗೆ ಧನಸಹಾಯ ಮಂಜೂರು ಮಾಡಬೇಕೆಂದು ಎಪಿಎಂಸಿ ಸದಸ್ಯ ಕೃಷ್ಣ ಕೊಳ್ಳಾನಟ್ಟಿ ಹೇಳಿದರು.

ಅವರು ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಲಾದ ಗ್ರಾಮದೇವಿ ಜಾನಪದ ಮಹಿಳಾ ಸಂಘ ಮುತ್ತಗಿ ಹಾಗೂ ಗ್ರಾಮದೇವಿ ಸಾಂಸ್ಕೃತಿಕ ಮಹಿಳಾ ಸಂಘ ಹಿರೇಹೊನ್ನಳ್ಳಿ ಇವುಗಳ ಉದ್ಘಾಟನೆ ಹಾಗೂ ಸಾಂಸ್ಕೃತಿಕ 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾನಿಧ್ಯ ವಹಿಸಿದ ಬಸವಲಿಂಗಸ್ವಾಮಿಗಳು ರುದ್ರಾಕ್ಷಿಮಠ ಹುಬ್ಬಳ್ಳಿ ಇವರು ಕಲೆ ಕಲಾವಿದನಿಗೆ ಹುಟ್ಟುತ್ತಲೇ ಬಂದಿದ್ದು ಒಬ್ಬ ಕಲಾವಿದ ತನ್ನ ಕಲೆಯನ್ನು ಪ್ರದರ್ಶನ ಮಾಡುವಾಗ ಯಾವ ಸಕರ್ಾರದ ಹಣಕ್ಕಾಗಿ ಈ ಕಲೆಯನ್ನು ಕಲಿಯಲಿಲ್ಲ. ತನಗೆ ಮಾಶಾಸನ ಬರುತ್ತಿದೆ ಎಂದು ಈ ಕಲೆಯನ್ನು ಪ್ರದರ್ಶನ ಮಾಡಲಿಲ್ಲ. ಜನರ ಸಂತೋಷಕ್ಕಾಗಿ ತನ್ನ ಸಂತೋಷಕ್ಕಾಗಿ ಈ ಕಲೆಯನ್ನು ಬೆಳೆಸುತ್ತಾ ಬಂದಿದ್ದಾನೆ. ಇಂತಹ ಕಲಾವಿದರಿಗೆ ಸಹಾಯ ಸಹಕಾರ ಅವಶ್ಯವಾಗಿರುತ್ತದೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಆಯ್. ಈಳಿಗೇರ ಇಂಥ ಸುಂದರವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದು ನನ್ನ ಪುಣ್ಯ. ಜನಪದ ಕಲೆ ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇಲ್ಲಿ ಬಂದಂತಹ ಕಲಾವಿದರೇ ಸಾಕ್ಷಿ ಎಂದು ಹೇಳಿದರು. 

ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಉಪಸ್ಥಿತರಿದ್ದು ಗಂಗವ್ವ ಪೂಜಾರ, ಬಸವ್ವ ಹೊಸೂರ, ಮೀರಾ ಬೀರಣ್ಣವರ ಅತಿಥಿಯಾಗಿ ಆಗಮಿಸಿದ್ದರು. ನಿರೂಪಣೆಯನ್ನು ಪ್ರಕಾಶ ಮಲ್ಲಿಗವಾಡ ನೆರವೇರಿಸಿದರು. ವಂದನಾರ್ಪಣೆಯನ್ನು ಶಾನವಾಡ ಮಾಸ್ತರ್ ನಡೆಸಿಕೊಟ್ಟರು. ಮುಂದೆ ಕಲಾವಿದರಿ