ಕಲಾವಿದ-ಗಾಯಕ ಫಾರೂಕ್ ಹಾನಗಲ್ ಇನ್ನಿಲ್ಲ
Artist-singer Farooq Hanagal is no more
ರಾಣೇಬೆನ್ನೂರು 24: ಇಲ್ಲಿನ ಕರ್ಜಗಿ ಬಡಾವಣೆ ಕೋನಬೇವು ಪ್ಲಾಟ್ ನಿವಾಸಿ, ಫಾರೂಕ್ ಶೆ. ಹಾನಗಲ್ (63) ಅವರು ರವಿವಾರ ಮಧ್ಯಾಹ್ನ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು.
ಮೃತ ಫಾರೂಕ್ ಅವರು, ಕಲಾವಿದರ ಸಾಂಗತ್ಯದಲ್ಲಿ ಬೆಳೆದು ಅವರು ಸಹ ಓರ್ವ ಪ್ರಬುದ್ಧ ಕಲಾವಿದರಾಗಿ, ರಾಜ್ಯದಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಜನಪ್ರಿಯತೆ ಗಳಿಸಿದ್ದರು.
ರಾಣೆಬೆನ್ನೂರು ನಗರದಲ್ಲಿ ತಮ್ಮದೇ ಆದ, ಎಫ್.ಕೆ. ಮ್ಯೂಸಿಕಲ್ಸ್ ಆರ್ಕೆಸ್ಟ್ರಾ ಸ್ಥಾಪಿಸುವುದರ ಮೂಲಕ, ನೂರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿದ್ದರು.ಮೃತರ ನಿಧನಕ್ಕೆ, ಅನೇಕ ಕಲಾ ಸಂಸ್ಥೆಗಳು, ಕಲಾವಿದರು, ವಾದ್ಯಗಾರರು ತಮ್ಮ ತೀರ್ವ ಸಂತಾಪ ಸೂಚಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 