ಕಲಾವಿದ ಮಂಜುನಾಥಗೌಡರಿಗೆ ‘ಕಲ್ಯಾಣ ಕಲಾಸಿರಿ’ ಗೌರವ
Artist Manjunatha Gowda honored with 'Kalyana Kalasiri'
ಲೋಕದರ್ಶನ ವರದಿ
ಕಲಾವಿದ ಮಂಜುನಾಥಗೌಡರಿಗೆ ‘ಕಲ್ಯಾಣ ಕಲಾಸಿರಿ’ ಗೌರವ
ದಾರವಾಡ 03: ದಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ತ್ರಿ ವಿಧ ದಾಸೋಹಿ ಪೂಜ್ಯ ಲಿಂ. ಬಸವಣ್ಣಜ್ಜನವರ ಪುಣ್ಯಸ್ಮರಣೋತ್ಸವ ಹಾಗೂ ಕಲ್ಯಾಣಪುರ ವೈಭವ ಸಮಾರಂಭದ ಅಂಗವಾಗಿ ಹುಬ್ಬಳ್ಳಿಯ ಖ್ಯಾತ ಕಲಾವಿದ ಮಂಜುನಾಥಗೌಡ ಪಾಟೀಲರಿಗೆ ‘ಕಲ್ಯಾಣ ಕಲಾಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಂದಗೋಳದ ಕಲ್ಯಾಣಪುರ ಮಠದ ಬಸವಣ್ಣಜ್ಜ ಶ್ರೀಗಳು ಕಲಾವಿದ ಮಂಜುನಾಥಗೌಡರ ದೀರ್ಘಕಾಲದ ಕಲಾಸೇವೆಯನ್ನು ಮೆಚ್ಚಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿ ಪ್ರಶಸ್ತಿ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಡಾ. ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿಗಳು (ಮೂರುಸಾವಿರ ಮಠ, ಹುಬ್ಬಳ್ಳಿ), ನವಲಿಂಗ ಮಹಾಸ್ವಾಮಿಗಳು, ಪ್ರಭುದೇವ ಜ್ಞಾನ ಕೇಂದ್ರದ ಸಂತೆ ಕಡೂರು ಶಿವಮೊಗ್ಗ, ಸರೂ್ಭಷಣ ಸ್ವಾಮಿಗಳು, ಗದಿಗೆಯ ಸ್ವಾಮಿಗಳು, ರಾಚೋಟೇಶ್ವರ ಸ್ವಾಮಿಗಳು, ಪ್ರವಚನಕಾರ ಗವಿಸಿದ್ದೇಶ್ವರ ಶಾಸ್ತ್ರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ವಾತಾವರಣದಲ್ಲಿ ನಡೆದ ಕಾರ್ಯಕ್ರಮವು ಭಕ್ತಿಭಾವ ಹಾಗೂ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಯಿತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 