370ನೇ ವಿಧಿ: ಚಿದು ಹೇಳಿಕೆ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ನವದೆಹಲಿ, ಆಗಸ್ಟ್ 12       ಜಮ್ಮು ಕಾಶ್ಮೀರ ಮುಸ್ಲಿಂ ಪ್ರಾಬಲ್ಯವುಳ್ಳ ರಾಜ್ಯವಾದ್ದರಿಂದ ಅಲ್ಲಿಗೆ ನೀಡಲಾಗಿದ್ದ ಸಂವಿಧಾನದ 370 ನೇ ವಿಧಿಯನ್ನು ಬಿಜೆಪಿ ಸರಕಾರ ರದ್ದುಪಡಿಸಿದೆ  ಎಂಬ  ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.    ಇದು ದುರದೃಷ್ಟಕರ ಹೇಳಿಕೆ.  ಪ್ರಚೋದನೆ ಮತ್ತು ಆಶಾಂತಿಗೆ ದಾರಿ ಮಾಡಿಕೊಡಲಿದೆ  ಎಂದು  ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.ಇತ್ತಿಚಿನ  ವರ್ಷಗಳಲ್ಲಿ, ಕಾಶ್ಮೀರದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದು ಇದರಲ್ಲಿ  ಮುಸ್ಲಿಮರೂ ಸೇರಿದ್ದಾರೆ ಎಂಬುದನ್ನು ಚಿದು ಅವರು ಮರೆತಿದ್ದಾರೆಯೇ ಪ್ರಶ್ನೆ ಮಾಡಿದ್ದಾರೆ.  "370 ನೇ ವಿಧಿಯನ್ನು ರದ್ದುಪಡಿಸುವ ತೀರ್ಮಾನ  ರಾಷ್ಟ್ರೀಯ ಹಿತದೃಷ್ಟಿಯಿಂದ ತೆಗೆದುಕೊಂಡ  ನಿರ್ಧಾರವಾಗಿದೆ.ಇದು ಒಟ್ ಬ್ಯಾಂಕ್ ತೀರ್ಮಾನವಲ್ಲ 370 ನೇ ವಿಧಿಯ ಹೆಸರಿನಲ್ಲಿ, ಈ ಎಲ್ಲಾ ವರ್ಷಗಳಲ್ಲಿ ಮುಸ್ಲಿಮರು ಸಹ ತಾರತಮ್ಯ ಮತ್ತು ಅನ್ಯಾಯ ಎದುರಿಸುತ್ತಿದ್ದಾರೆ . ಗುಜ್ಜಾರ್ಗಳು, ಬಕರ್ವಾಲ್ಗಳು ಮತ್ತು ಇತರ ಬುಡಕಟ್ಟು ಜನಾಂಗದವರು ಮೀಸಲಾತಿ ಹಕ್ಕಿನಿಂದ  ವಂಚಿತರಾಗಿದ್ದರು  ಜಮ್ಮು ಮತ್ತು ಕಾಶ್ಮೀರದ ತಾರತಮ್ಯಕ್ಕೆ ಗುರಿಯಾಗಿತ್ತು  ಎಂದು ಪ್ರಸಾದ್ ಆರೋಪಿಸಿದರು.  ಮತ್ತೊಬ್ಬ ಬಿಜೆಪಿ ಮುಖಂಡ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸಹ ಪಿ.ಚಿದಂಬರಂ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ದೇಶ  ವಿಮೋಚನೆಯಾಗಬೇಕು ಎನ್ನುವ  ಕಾಂಗ್ರೆಸ್ ಪಕ್ಷವು ಇಂದು ಶತ್ರು ರಾಷ್ಟ್ರದ ನಿಲುವಿಗೆ, ಸಾಲಿಗೆ ಬದ್ಧವಾಗಿದೆ ಎಂದು ಅವರು ದೂರಿದರು. ಇತಿಹಾಸದಲ್ಲಿ ಮೊದಲ ಬಾರಿಗೆ, ತಾಯಿ ತನ್ನ ಮಗನಿಂದಲೇ ಅನುವಂಶಿಕತೆಯನ್ನು ಪಡೆಯುತ್ತಿದ್ದಾರೆ. ರಾಹುಲ್ ಗಾಂಧಿ ಹುದ್ದೆ ತ್ಯಜಿಸುವ ನಿರ್ಧಾರಕ್ಕೆ ಅಂಟಿಕೊಂಡಿದ್ದರಿಂದ ಸೋನಿಯಾ ಗಾಂಧಿಯವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನೂ ಅವರು ಗೇಲಿ ಮಾಡಿ, ಸೋನಿಯಾರಿಂದ ರಾಹುಲ್ , ರಾಹುಲ್ ಅವರಿಂದ ಸೋನಿಯಾ ನಡುವೆ ಹುದ್ದೆ ಹಂಚಿಕೆಯಾಗುತ್ತಿದೆ ಬೇರೆ ನಾಯಕರಿಲ್ಲದೆ ಪಕ್ಷ ದಿವಾಳಿಯಾಗಿದೆಯೇ? ಎಂದು ಅವರು ಪ್ರಶ್ನೆ ಮಾಡಿದರು.