ಕಲೆ ಕೇವಲ ಹವ್ಯಾಸವಲ್ಲ ಅದು ಆತ್ಮವಿಶ್ವಾಸ: ಕಲಾವಿದ ಡಾ. ಯಾದವ್
Art is not merely a hobby; it is self-confidence: Artist Dr. Yadav
ಲೋಕದರ್ಶನ ವರದಿ
ಬೆಳಗಾವಿ 08: ಕರ್ನಾಟಕ ಪಬ್ಲಿಕ್ ಸ್ಕೂಲ್ ರಾಮತೀರ್ಥ ನಗರದಲ್ಲಿ ಜುಲೈ 3 ಹಾಗೂ 4, 2026 ರಂದು ಶ್ರೀ ತಕ್ಷಶಿಲಾ ಗುರುಕುಲ ವತಿಯಿಂದ ಬೆಂಗಳೂರಿನ ಖ್ಯಾತ ಚಿತ್ರ ಕಲಾವಿದರಾದ ಡಾ.ಯಾದವ್ ರವರ ನೇತೃತ್ವದಲ್ಲಿ ಎರಡು ದಿನಗಳ ಉಚಿತ ಚಿತ್ರಕಲೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಕಲಾ ಪ್ರತಿಭೆಯನ್ನು ಬೆಳೆಸುವ ಉದ್ದೇಶದಿಂದ ಎರಡು ದಿನಗಳ ಉಚಿತ ಕಲಾ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಮೊದಲ ದಿನ ರಾಮತೀರ್ಥನಗರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ಗುಣಮಟ್ಟದ ಚಿತ್ರಕಲೆ ಸಾಮಗ್ರಿಗಳನ್ನು ವಿತರಿಸಿ ವಿಶೇಷ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳು ವಿವಿಧ ಚಿತ್ರಕಲೆ ತಂತ್ರಗಳನ್ನು ಕಲಿತು ತಮ್ಮ ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆಯನ್ನು ಕಲಾಕೃತಿಗಳ ಮೂಲಕ ಅಭಿವ್ಯಕ್ತಪಡಿಸಿದರು. ಮಕ್ಕಳ ಉತ್ಸಾಹ ಹಾಗೂ ಕಲಿಕೆಯ ಆಸಕ್ತಿ ಎಲ್ಲರ ಗಮನ ಸೆಳೆಯಿತು.
ಎರಡನೇ ದಿನ ಮಹೇಶ್ ಫೌಂಡೇಶನ್ ನಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ವಿಶೇಷ ಕಲಾ ಕಾರ್ಯಾಗಾರ ನಡೆಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಮೂಲಭೂತ ತಂತ್ರಗಳು, ಬಣ್ಣಗಳ ಬಳಕೆ, ಸೃಜನಾತ್ಮಕ ಚಿಂತನೆ, ಕಲೆಯ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ಜೀವನದಲ್ಲಿ ಕಲೆಯ ಮಹತ್ವ ಕುರಿತು ಮಾರ್ಗದರ್ಶನ ನೀಡಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಹೊಸ ಅನುಭವವನ್ನು ಪಡೆದರು.
ಈ ಮೂಲಕ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವುದರ ಜೊತೆಗೆ, ಕಲೆ ಕೇವಲ ಹವ್ಯಾಸವಲ್ಲ ಅದು ಆತ್ಮವಿಶ್ವಾಸ, ಏಕಾಗ್ರತೆ, ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ಮಾಧ್ಯಮ ಎಂಬ ಸಂದೇಶವನ್ನು ನೀಡಲಾಯಿತು. ಮಹೇಶ್ ಫೌಂಡೇಶನ್ ಸಂಸ್ಥಾಪಕರಾದ ಮಹೇಶ್ ಜಾಧವ್ ಹಾಗೂ ಹಂಪಿಹೊಳಿ, ಶ್ರೀ ತಕ್ಷಶಿಲಾ ಗುರುಕುಲದ ಸಂಸ್ಥಾಪಕರಾದ ಶ್ರೀಧರ್ ಬಸಾಪುರ, ಎಲ್ಲಾ ಸ್ವಯಂ ಸೇವಕರು ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ 