ಸಮಾಜಕ್ಕೆ ಚಿತ್ರಕಲಾವಿದರ ಕೊಡುಗೆ ಅಪಾರ : ಡಾ. ಜಾಲಿ
Art exhibition on the occasion of World Art Day
ಲೋಕದರ್ಶನ ವರದಿ
ವಿಶ್ವಕಲಾ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಪ್ರದರ್ಶನ
ಬೆಳಗಾವಿ 28: ಸಮಾಜಕ್ಕೆ ಚಿತ್ರಕಲಾವಿದನ ಕೊಡುಗೆ ಅಪಾರವಾಗಿದೆ. ರೋಗಿಯನ್ನು ನಿರೋಗಿಯನ್ನಾಗಿಸುವ ಅಲ್ಲದೇ ಮನೋಧೈರ್ಯವನ್ನು ಹೆಚ್ಚಿಸುವ ಶಕ್ತಿ ಚಿತ್ರಕಲೆಗಿದೆ. ಕಲಾವಿದನಿಗೆ ಭಾಷೆಯೆಂಬುದಿರುವುದಿಲ್ಲ. ತನ್ನ ಹೃದಯದ ಭಾವನೆಗಳನ್ನು ಚಿತ್ರಕಲೆಯ ಮೂಲಕ ಕಲಾವಿದ ವ್ಯಕ್ತಪಡಿಸುತ್ತಾನೆ ಎಂದು ಕೆ.ಎಚ್.ಇ.ಆರ್. ಮತ್ತು ಕೆ.ಎಲ್.ಇ. ಬಾಹ್ಯ ಆಸ್ಪತ್ರೆ ವೈದ್ಯಕೀಯ ಸಲಹಾಗಾರರಾಗಿರುವ ಡಾ. ಮಲ್ಲಿಕಾರ್ಜುನ ವಿ. ಜಾಲಿಯವರು ಇಂದಿಲ್ಲಿ ಹೇಳಿದರು.
ನಗರದ ವರ್ಣಕಲಾ ಸಾಂಸ್ಕೃತಿಕ ಸಂಘ ಮತ್ತು ಶ್ರೀಮಾತಾ ಗ್ಲಾಸ್ ಆರ್ಟ ಗ್ಯಾಲರಿ ಸಂಘಟನೆಯವರು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದೊಂದಿಗೆ ವಿಶ್ವಕಲಾ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಿಲಕವಾಡಿಯ ವರೇರಕರ ನಾಟ್ಯ ಸಂಘ ಸಭಾಗೃದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದರು. ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿದ ಡಾ. ಮಲ್ಲಿಕಾರ್ಜುನ ಜಾಲಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು.
ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ, ಲೇಖಕ ಗುಂಡೇನಟ್ಟಿ ಮಧುಕರ ಅವರು ಮಾತನಾಡುತ್ತ ಸಾಹಿತ್ಯ, ಚಿತ್ರಕಲೆ ಸಂಗೀತ ಕಲೆಗೆ ಯಾವಾಗಲೂ ಅಳಿವೆಂಬುದು ಇಲ್ಲ. ಹಲವಾರು ತಿರುವುಗಳನ್ನು ಪಡೆಯುತ್ತ ನಿರಂತರವಾಗಿರುತ್ತದೆ. ಹೊಸ ಹೊಸ ಪ್ರತಿಭೆಗಳೂ ಹುಟ್ಟಿಕೊಳ್ಳುತ್ತವೆ. ಬೆಳೆಯುತ್ತವೆ ಇದೊಂದು ನಿರಂತರವಾಗಿ ಹರೆಯುವ ನೀರು ಎಂದು ಹೇಳಿದರು.
ವರ್ಣಕಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ನಾಗೇಶ ಚಿಮರೋಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಾವಿದ ದೀಲೀಪಕುಮಾರ ಕಾಳೆ ಪರಿಚಯಿಸಿದರು. ಕಲಾವಿದರಾದ ದರ್ಶನ ಚೌದರಿ, ದಾದಾ ಚಿತ್ರದುರ್ಗ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೋಮಟೇಶ ವಿದ್ಯಾಪೀಠದ ಕು. ಗೌತಮಿ ಸುತಾರ ಪ್ರಾರ್ಥಿಸಿದರು. ಕೆ.ಎಲ್.ಎಸ್. ಪ್ರೌಢಶಾಲೆಯ ಪೂರ್ವಿ ಮಾಕಟ್ಟಿ ಜಾನಪದ ಗೀತೆ ಮತ್ತು ಸೇಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಶಾಂಭವಿ ಗಣೇಶಗುಡಿ ಭರತನಾಟ್ಯ ಪ್ರಸ್ತುತ ಪಡಿಸಿದರು.
ವಿಶ್ವಕಲಾ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಪ್ರಾತ್ಯಕ್ಷಿಕೆಗಳು, ಚಿತ್ರಕಲಾ ಶಿಬಿರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಭಾಸ್ಕರ ಪಾಟೀಲ, ದೀಪಾ ವಾಲಿ, ರವಿ ಓಂಕಾರ, ದೇಮಣ್ಣಾ, ಭರಮಣ್ಣ ವೇತಾಳ, ವಾಣಿ ಹಿರೇಮಠ, ವಾಣಿ ನಡಗಕರ ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 