ಲೋಕದರ್ಶನವರದಿ
ರಾಣೇಬೆನ್ನೂರು ಮಾ18 : ಅಂತರಂಗದಲ್ಲಿ ಅಡಗಿರುವ ಕಲೆ ಕಲಾವಿದನ ಸ್ವತ್ತಾದರೆ, ಅದನ್ನು ಪ್ರೋತ್ಸಾಹಿಸಿ, ಬೆಳೆಸಿ ಕಲಾವಿದನಿಗೆ ಸಮಾಜದಲ್ಲಿ ಸ್ಥಾನ-ಮಾನಗಳನ್ನು ದೊರಕಿಸುವ ಹಕ್ಕು ಮತ್ತು ಸ್ವತ್ತು ಕಲಾಪ್ರೇಕ್ಷಕರದಾಗಿದೆ ಎಂದು ಸರಿಗಮ ಖ್ಯಾತಿಯ ಕಲಾವಿದ ಸವಣೂರು ತಾಲೂಕ ಚಿಲ್ಲುರ್ಬಡ್ನಿ ತಾಂಡೆಯ ಕಲಾವಿದ ಹನುಮಂತ ಲಮಾಣಿ ಹೇಳಿದರು.
ಅವರು ರವಿವಾರ ಇಲ್ಲಿನ ಮೃತ್ಯುಂಜಯ ನಗರದ ವನಿತಾ ಗುತ್ತಲ ಸಭಾಗೃಹದಲ್ಲಿ ನಡೆದ ಕಲಾವಿದರ ಅಭಿನಂದನಾ ಸನ್ಮಾನ ಸಮಾರಂಭದಲ್ಲಿ ಅವರು ಅಭಿಮಾನಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಲೆ ಎಲ್ಲರಲ್ಲಿ ಅಡಗಿರುತ್ತದೆ. ಅದನ್ನು ಅಳವಡಿಸಿಕೊಂಡು, ಆರಾಧಿಸಿ ಸಂಗೀತ ಶಾರದೆಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ. ಗ್ರಾಮೀಣ ಕಲೆಗಳಾದ ಭಜನೆ, ಲಾವಣಿ, ಗೀಗಿ, ಸಣ್ಣಾಟ, ದೊಡ್ಡಾಟ, ಡಪ್ಪು ಪದಗಳು ವಿಶೇಷವಾಗಿ ಜನಪದಿಯ ಕಲೆಗಳು ಎಲ್ಲ ಕಲೆಗಳಿಗೂ ಮೂಲ ತಾಯಿ ಬೇರು ಎಂದು ವಿಶ್ಲೇಷಿಸಿದ ಹನುಮಂತ ಲಮಾಣಿ ಅವರು ಕಲಾವಿದರಿಗೆ ಕಲಾಭಿಮಾನಿಗಳ ಪ್ರೋತ್ಸಾಹವೇ ಬಹುದೊಡ್ಡ ಶಕ್ತಿಯಾಗುತ್ತದೆ ಎಂದರು.
ಅಭಿಮಾನಿ ಬಳಗದ ಪರವಾಗಿ ಸಮಾಜ ಸೇವಕಿ ನ್ಯಾಯವಾದಿ ವನಿತಾ ಗುತ್ತಲ್ ಸನ್ಮಾನಿಸಿ ಅಭಿನಂದಿಸಿ ಗೌರವಿಸಿದರು.
ಸ್ವಾಭೀಮಾನಿ ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ವಿಶ್ವನಾಥ ಎಂ.ನಿಲಗುಂದ, ಭೀಮರಾಜ ಕರಿಭೀಮಪ್ಪನವರ, ಸಿದ್ಧಲಿಂಗಯ್ಯ ಶಿವಮೂತರ್ಿ, ನಾಗರಾಜ ಚೌಡಣ್ಣನವರ, ರತ್ನಾ ಪುನೀತ್, ನಾಗರಾಜ ಮಾಕನೂರ, ಭಾಷಾ ಹಂಪಾಪಟ್ನ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೂರಾರು ಮುಖಂಡರು, ಅಭಿಮಾನಿಗಳು ಪಾಲ್ಗೊಂಡಿದ್ದರು.