ಲೋಕದರ್ಶನ ವರದಿ
ಮುಗಳಖೋಡ 20: ಮನುಷ್ಯನಲ್ಲಿ ಉದಾರಗುಣವಿರಬೇಕು, ಸಹನೆ ತಾಳ್ಮೆ ನಮ್ಮ ಹತ್ತಿರವಿರಬೇಕು ಅದು ಇದ್ದಾಗ ದೇವರು ಭಕ್ತರ ಹತ್ತಿರ ತಾನಾಗಿಯೇ ಬರುತ್ತಾನೆ.ಕೋಪ ಅಸೂಹೆ ದು:ಖ ತರುತ್ತದೆ, ಶಾಂತಿ ಪ್ರೀತಿಯಿಂದ ಸುಖ ಪ್ರಾಪ್ತಿಯಾಗುತ್ತದೆ ಮನುಷ್ಯನಲ್ಲಿ ದುರಹಂಕಾರ ದುರ್ಬುದ್ಧಿ ಬಂದಾಗ ಎಲ್ಲರಿಂದಲೂ ದೂರವಾಗಿ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಮಾದುಲಿಂಗ ಮಹಾರಾಜರು ಹೇಳಿದರು. ಅವರು ಸಮೀಪದ ಖನದಾಳ ಗ್ರಾಮದ ಶ್ರೀ ಜಗದ್ಗುರು ಹುಲಿಕಾಂತೇಶ್ವರ ಜಾತ್ರಾಮಹೋತ್ಸವದ ಪ್ರವಚನಕಾರರಾಗಿ ಆಗಮಿಸಿ ನಿಜಗುಣಿ ಶಿವಯೋಗಿಗಳವರ ಕೈವಲ್ಯ ಪದ್ಧತಿ ನೀತಿ ಕ್ರೀಯಾ ವಿಶೇಷವಾಗಿ ಪ್ರವಚನ ಹೇಳುತ್ತಾ ಗುರುವಿನ ಬಲ ಯಾರ ಮೇಲೆ ಇರುತ್ತದೆಯೋ ಅವರು ಸಾಧನೆ ಮಾಡುತ್ತಾರೆ ಎಂದು ಹೇಳುತ್ತಾ ಸ್ವಾಮಿ ಅಯ್ಯಪ್ಪನ ಚರೀತ್ರೆಯಲ್ಲಿ ಆ ತಾಯಿ ಮಗುವಿನ ಪ್ರೀತಿ ಭಕ್ತಿ ಎಂತ್ತದ್ದು ಎಂದು ತಿಳಿಸಿಕೊಟ್ಟರು.
ಎರಡು ದಿನಗಳ ಕಾಲ ಪ್ರವಚನಕಾರರಾಗಿ ಆಗಮಿಸಿದ ಕರಿಕಟ್ಟಿಯ ಶ್ರಿ ಬಸವರಾಜ ಮಹಾರಾಜರಿಗೆ ಸತ್ಕಾರ ಮಾಡುವುದರ ಮೂಲಕ ಬಿಳ್ಕೋಟ್ಟರು. ಮತ್ತು 42 ವರ್ಷಗಳ ಕಾಲ ಪಶು ಚಿಕಿತ್ಸಾಲಯದಲ್ಲಿ ಕೆಲಸ ಮಾಡಿದ ವಸಂತ ದಳವಾಯಿ ಹಾಗೂ ದ್ವಾರಬಾಗಿಲನ್ನ ನಿಮರ್ಾಣ ಮಾಡಿದ ರಾಮಪ್ಪ ವಡ್ಡರ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕರಿಕಟ್ಟಿಯ ಬಸವರಾಜ ಮಹಾಸ್ವಾಮಿಗಳು, ಮಾಧುಲಿಂಗ ಮಹಾರಾಜರು, ಈರಯ್ಯಾ ಸ್ವಾಮಿಗಳು, ಶೇಖರ ಸ್ವಾಮಿಗಳು, ಶಿವಲಿಂಗಯ್ಯಾ ಸ್ವಾಮಿಗಳು, ಶಿವಾನಂದ ಶರಣರು, ಮಾತೋಶ್ರೀ ಅಕ್ಕಮಹಾದೇವಿ ತಾಯಿ, ಅಶೋಕ ಹುಣ್ಣರಗಿ ಸ್ವಾಮಿಜಿ, ಮಾದವಾನಂದ ಪಾಟೀಲ ಹಾಗೂ ಕಮಿಟಿಯ ಅಧ್ಯಕ್ಷ ವಸಂತ ದಳವಾಯಿ ಹಾಗೂ ಸದಸ್ಯರು, ಭಕ್ತ ಸಮೂಹ ಪಾಲ್ಗೊಂಡಿತ್ತು. ಕಾರ್ಯಕ್ರಮವನ್ನು ಗೋಪಾಲ ಬೆಕ್ಕೇರಿ ನಿರೂಪಿಸಿ ವಂದಿಸಿದರು.