ಪಂಡರಾಪೂರ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ
Arrangements for Mahaprasad for Pandharapur devotees
ಲೋಕದರ್ಶನ ವರದಿ
ಯಮಕನಮರಡಿ 15 : ಸ್ಥಳೀಯ ಪಾಂಡುರಂಗ ಭಕ್ತರಾದ ಶ್ರೀ ಬಾಳಪ್ಪ ಬಸಪ್ಪ ಹೊನ್ನಂಗಿ ಅವರು ಬೆಳಗಾವಿ ತಾಲೂಕಿನ ಎಳ್ಳೂರು ಗ್ರಾಮದಿಂದ ಪಾದಯಾತ್ರೆ ಮೂಲಕ ಯಮಕನಮರಡಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಪಾದಯಾತ್ರೆಯ ನಂತರ ಭಕ್ತಾದಿಗಳಿಗಾಗಿ ವಿಶೇಷ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಭಕ್ತಿಮಯ ವಾತಾವರಣದಲ್ಲಿ ನಡೆಯಿತು. ಈ ಸೇವಾ ಕಾರ್ಯದಲ್ಲಿ ರಾಜು ತತವೀರ, ವಿಠ್ಠಲ್ ಮದಿಹಳ್ಳಿ, ಸಂತೋಷ್ ಬಾವನ್ನವರ್, ವಿಠ್ಠಲ್ ತುಬಶೆಟ್ಟಿ, ಅನಿಲ್ ಮಾರ್ಯಾಳಿ, ವಿಠ್ಠಲ್ ಹುಕ್ಕೇರಿ, ಮಂಜುನಾಥ್ ತುಬಶೆಟ್ಟಿ, ಅಭಿಜಿತ್ ಬಾವನ್ನವರ್, ಶ್ರೀನಿವಾಸ್ ಅರಳಿಕಟ್ಟಿ, ನಾಗಪ್ಪ ಬೆಳಗಾವಿ ಸೇರಿದಂತೆ ಅನೇಕ ಭಕ್ತರು ಸಹಕರಿಸಿದರು. ಭಕ್ತರು ಪಾಂಡುರಂಗನ ನಾಮಸ್ಮರಣೆ ಮಾಡಿ ಮಹಾಪ್ರಸಾದ ಸ್ವೀಕರಿಸಿದರು. ಗ್ರಾಮಸ್ಥರು ಈ ಸೇವಾ ಕಾರ್ಯವನ್ನು ಮೆಚ್ಚಿ, ಭಕ್ತಾದಿಗಳ ಏಕತೆಯು ಸಮಾಜಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 