ಪ್ರಾಣಿ- ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಿ: ಶಿಕ್ಷಕ ಗಣೇಶ್ ಹವಾಲ್ದಾರ್‌

ಪ್ರಾಣಿ- ಪಕ್ಷಿಗಳಿಗಾಗಿ ನೀರಿನ ವ್ಯವಸ್ಥೆ ಮಾಡಿ: ಶಿಕ್ಷಕ ಗಣೇಶ್ ಹವಾಲ್ದಾರ್‌ Arrange water for animals and birds: Teacher Ganesh Havaldar

ಲೋಕದರ್ಶನ ವರದಿ 

ಹೂವಿನಹಡಗಲಿ  5:  ಗಿಡ ಮರಗಳನ್ನು ಕಡಿದು ಪ್ರಾಣಿ-ಪಕ್ಷಿಗಳಿಗೆ ಸಂಕುಲಕ್ಕೆ ಅನನುಕೂಲ ಮಾಡದ ಪ್ರಕೃತಿ ಸಂಪತ್ತು ಕಾಪಾಡುವುದು ಪ್ರತಿಯೊಬ್ಬ ರ ಕರ್ತವ್ಯ ಎಂದು ನಿವೃತ್ತ ಶಿಕ್ಷಕ ಗಣೇಶ್ ಹವಾಲ್ದಾರ್ ಅಭಿಪ್ರಾಯ ಪಟ್ಟರು.ತಾಲೂಕಿನ ಹೊಳಗುಂದಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನ ದಲ್ಲಿ  ಇಲ್ಲಿನ ಪರಿವರ್ತನಾ ಸೇವಾ ಸಮಿತಿಯ ಸಹಯೋಗದಲ್ಲಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟಿಗೆ ನಿರ್ಮಾಣ ಹಾಗೂ ಪರಿಸರ ಜಾಗೃತಿ  ಕಾರ್ಯಕ್ರಮ ಅರವಟಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಬೇಸಿಗೆ ಕಾಲದಲ್ಲಿ ಪ್ರಾಣಿ -ಪಕ್ಷಿಗಳಿಗೆ ಅನುಕೂಲ ವಾಗಲು ಗಿಡ ಮರಗಳಲ್ಲಿ ನೀರಿನ ವ್ಯವಸ್ಥೆ ಮಾಡಬೇಕು.  ನಾಗರಿಕರು ಸಮರ​‍್ಕವಾಗಿ ನೀರು ಹಾಕಿ ನಿರ್ವಹಣೆ ಮಾಡಿ ಪಕ್ಷಿ ಸಂಕುಲಕ್ಕೆ ಅನುಕೂಲ ಮಾಡುವಂತೆ ಸಲಹೆ ನೀಡಿದರು.ಗಿಡ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಸಂರಕ್ಷಣೆಗೆ ಮಾಡಬೇಕು ಎಂದರು.

ಮುಖ್ಯ ಗುರುಗಳಾದ ಮಲ್ಲೇಶಪ್ಪ  ಮಾತನಾಡಿ ಪರಿಸರ ಸಂರಕ್ಷಣೆ ಸಾರ್ವಜನಿಕ ಸಹಕಾರ ಅಗತ್ಯ ಬೇಸಿಗೆಯ ತೀವ್ರ  ಬಿಸಿಲಿನಿಂದ ಪ್ರಾಣಿ-ಪಕ್ಷಿಗಳಿಗೆ ಎದುರಾಗುವ  ನೀರಿನ ಅಭಾವವನ್ನು ನೀಗಿಸಲು ಉತ್ತಮ ಕಾರ್ಯ ವಾಗಿದೆ ಎಂದರು.ಚಿತ್ರ ಕಲಾ ಶಿಕ್ಷಕ ದ್ವಾರಕೀಶ್ ರೆಡ್ಡಿ ಮಾತನಾಡಿ ಇಲ್ಲಿನ ಪರಿವರ್ತನಾ ಸಮಿತಿ ಕಾರ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.  ಇದೇ ವೇಳೆ ಗಣೇಶ್ ಹವಾಲ್ದಾರ್ ತಮ್ಮ ಮನೆಯಲ್ಲಿ ಬೆಳೆಸಿದ ಸಸಿಗಳನ್ನು ಮಕ್ಕಳಿಗೆ ವಿತರಿಸಲಾಯಿತು. ನಂತರ ನೂರು ಅರವಟಿಗೆ ಗಳನ್ನು ನೀಡುವ ಮೂಲಕ ಪರಿಸರ ಪ್ರಜ್ಞೆ ಮತ್ತು ಪಕ್ಷಿಗಳಿಗೆ ನೀರು ಹಾಕುವ ಬಗ್ಗೆ ಜಾಗೃತಿ ಮೂಡಿಸಲಾಯಿತು.  ಕೊಟ್ರೇಶ ಪ್ರಾಸ್ತಾವಿಕವಾಗಿ  ಮಾತನಾಡಿದರು. ಹೆಚ್‌.ಗುರುಬಸವರಾಜ ಸ್ವಾಗತಿಸಿದರು.  ಆರಿ​‍್ಬ.ಗುರುಬಸವರಾಜ, ಎಂ.ಲೋಕೇಶ, ಹೆಚ್‌.ಕರಿಬಸಪ್ಪ.ನವೀನ ಕೃಷ್ಣ. ರಾಜನಗೌಡ ಪಾಟೀಲ್ .ಹನುಮಂತಪ್ಪ , ಕೊಟ್ರೇಶ್ ಹಾವನೂರು .ಎಚ್ ಎಂ. ಶಾಂತಪ್ಪ ಟಿ.ಇತರರು ಇದ್ದರು.