ಗ್ಯಾಂಗ್ಟಕ್, ಮೇ 7,ಹವಾಮಾನ ವೈಪರೀತ್ಯದಿಂದಾಗಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಒಂದು ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಉತ್ತರ ಸಿಕ್ಕಿಂನಲ್ಲಿ ನಡೆದಿದೆ.ಅದರಲ್ಲಿದ್ದ ಒಟ್ಟು 6 ಜನರಿದ್ದರು. ಅದರಲ್ಲಿ ನಾಲ್ವರು ಹೆಲಿಕಾಪ್ಟರ್‌ಗೆ ಸಂಬಂಧಪಟ್ಟವರು ಮತ್ತು ಇಬ್ಬರು ಸೈನಿಕರಾಗಿದ್ದಾರೆ. ಅವರು ನಿಯಮಿತ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ರಕ್ಷಣೆಗಾಗಿ ಬೇರೆ ಹೆಲಿಕಾಪ್ಟರ್‌ಗಳನ್ನು ಅಲ್ಲಿಗೆ ಕಳುಹಿಸಲಾಯಿತು.ಚಾಪೆನ್ ಮತ್ತು ಮುಕುಥಾಂಗ್ ಎಂಬ ಪ್ರದೇಶದ ನಡುವೆ ಹೆಲಿಕಾಪ್ಟರ್ ತುರ್ತಾಗಿ ಇಳಿದಿದೆ. ಆದರೆ ನಿಖರವಾದ ಸ್ಥಳ ಯಾವುದು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.