ಗಾಯದಿಂದ ಆರ್ಚರ್ ರಕ್ಷಣೆ ಅಗತ್ಯ: ಅಖ್ತರ್

ನವದೆಹಲಿ, ಆ 20     ಇಂಗ್ಲೆಂಡ್ ತಂಡಕ್ಕೆ ಜೊಫ್ರಾ ಆರ್ಚರ್ ಪ್ರಮುಖ ಅಸ್ತ್ರ ಎಂಬುದನ್ನು ಬಲವಾಗಿ ನಂಬಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೊಯೆಬ್ ಅಖ್ತರ್, 24ರ ಪ್ರಾಯದ ಯುವ ವೇಗಿಯನ್ನು ಗಾಯವಾಗದ ರೀತಿಯಲ್ಲಿ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. 

ದಿ ಲಾಡ್ರ್ಸ ಅಂಗಳದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಜೊಫ್ರಾ ಆರ್ಚರ್ ಆಸ್ಟ್ರೇಲಿಯಾ ವಿರುದ್ಧ ಮಾರಕ ದಾಳಿ ನಡೆಸಿದ್ದರು. ಪಂದ್ಯ ಅಂತಿಮವಾಗಿ ಡ್ರಾ ಆಗಿದ್ದರೂ ಆರ್ಚರ್ 91 ರನ್ ಐದು ವಿಕೆಟ್ ಕಬಳಿಸಿದ್ದರು. ಜೊಫ್ರಾ ಆರ್ಚರ್ ಅವರ ಸರಾಸರಿ  95ಮೈಲಿ ವೇಗವಾಗಿ ಬೌಲಿಂಗ್ ಮಾಡಿದ್ದರು. ಅಲ್ಲದೇ, ಎಸೆಯುತ್ತಿದ್ದ ಬೌನ್ಸರ್ಗಳು ಎಲ್ಲರ ಗಮನ ಸೆಳೆದಿತ್ತು. ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಆರ್ಚರ್ ಎಸೆತಗಳನ್ನು ಎದುರಿಸುವಲ್ಲಿ ಹೆಣಗಾಡಿದ್ದರು. 

" ಆರ್ಚರ್ ಒಬ್ಬ ರೋಮಾಂಚನಕಾರಿ ಪ್ರತಿಭೆ. ಅವರು ಬಲಶಾಲಿಯಾಗಿದ್ದಾರೆ ಆದರೆ ಗಾಯಕ್ಕೆ ಗುರಿಯಾಗುವ ಪರಿಪೂರ್ಣ ಅಭ್ಯರ್ಥಿ ಎಂಬುದನ್ನು ನಾನು ನಂಬುತ್ತೇನೆ. ಅವರ ಬೌಲಿಂಗ್ ಶೈಲಿ ಹಾಗೂ ವೇಗ ಗಮನಿಸಿದರೆ ಬೆನ್ನು ನೋವಿಗೆ ಒಳಗಾಗಬಹುದು. ಆದ್ದರಿಂದ ಅವರನ್ನು ಗಾಯವಾಗದಂತೆ ಕಾಪಾಡುವ ಅಗತ್ಯವಿದೆ ಎಂದು ಮಾಜಿ ವೇಗಿ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ವೀಡೀಯೊದಲ್ಲಿ ತಿಳಿಸಿದ್ದಾರೆ.  

ನನ್ನ ಸಲಹೆ ಏನೆಂದರೆ ಆರ್ಚರ್ ಅವರನ್ನು ಕಡಿಮೆ ಪಂದ್ಯಗಳಲ್ಲಿ ಆಡಿಸಬೇಕು. ಒಂದು ಇನಿಂಗ್ಸ್ನಲ್ಲಿ ಅವರಿಗೆ 27 ಓವರ್ ಬೌಲಿಂಗ್ ನೀಡಬಾರದು. 14 ಓವರ್ಗಳಲ್ಲಿ ಇವರು ಏನೂ ಮಾಡದೆ ಇರುವುದು, ಇನ್ನೂ 27 ಓವರ್ಗಳಲ್ಲೂ ಏನನ್ನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಅವರನ್ನು ಬಹಳ ಎಚ್ಚರಿಕೆಯಿಂದ ಪಂದ್ಯದಲ್ಲಿ ನಿರ್ವಹಿಸಬೇಕು" ಎಂದು ಅಖ್ತರ್ ಹೇಳಿದ್ದಾರೆ.