ಕಾಗವಾಡ 10 : ಈಗಾಗಲೇ ಖಿಳೇಗಾಂವ ಬಸವೇಶ್ವರ ಯಾತ ನೀರಾವರಿಯ ಯೋಜನೆಯ ಮೊದಲ ಹಂತದ ಕಾಲುವೆಗೆ ನೀರು ಹರಿಸಲಾಗಿದ್ದು, ಶೀರ್ಘದಲ್ಲಿಯೇ ಇನ್ನೂಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುವುದೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ರವಿವಾರ ದಿ. 09 ರಂದು ಅರಳೀಹಟ್ಟಿ ಗ್ರಾಮದ ಬಳಿ ಬಸವೇಶ್ವರ ಯಾತ ನೀರಾವರಿ ಯೋಜನೆಯ ಕಾಲುವೆಗಳಿಂದ ತುಂಬಿ ಹರಿಯುತ್ತಿರುವ ಕೆರೆಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಜೊತೆಗೆ ಬಾಗಿನ ಅರ್ಿಸಿ, ಗ್ರಾಮದಲ್ಲಿ ಆಯೋಜಿಸದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕೆರೆ ತುಂಬಿಸುವ ಯೋಜನೆಯಿಂದ ಹಾಗೂ ಖಿಳೆಗಾಂವ ಬಸವೇಶ್ವರ ಯಾತ ನೀರಾವರಿ ಯೋಜನೆಯಿಂದ ಬೇಸಿಗೆ ಕಾಲದಲ್ಲಿ ರೈತರ ತೆರದ ಬಾವಿಗಳು ಹಾಗೂ ಕೊಳವೆ ಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ರೈತರ ಬೆಳೆಗಳಿಗೆ ಸಹಾಯವಾಗಲಿದೆ ಹಾಗೂ ಜನ ಜಾನುವಾರುಗಳಿಗೆ ನೀರಿನ ಬವಣೆಯನ್ನು ನಿವಾರಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಬಸವನಗೌಡ ಪಾಟೀಲ, ಅನಿತಾ ಸಗರೆ, ವಿನಾಯಕ ಬಾಗಡಿ, ಖಂಡೆರಾವ ಘೋರೆ್ಡ, ನಿಜಗುಣಿ ಮಗದುಮ್ಮ, ಅಣ್ಣಪ್ಪ ಮೀಸಾಳೆ, ಬಸವರಾಜ ಅಂಗಡಿ, ತುಕಾರಾಮ ಶೆಳಕೆ, ಕಾಡಪ್ಪ ಅಥಣಿ, ಅಪ್ಪಾಸಾಬ ಚೌಗಲಾ, ಸಂಜಯ ಅಧಾಟೆ, ಕೆ.ಆರ್. ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.