ಸೆಲೆಬ್ರಿಟಿ ಶೋನಲ್ಲಿ ’ಭೈರಾದೇವಿ’ಗೆ ಮೆಚ್ಚುಗೆ

ಅಘೋರಿ, ಕಾಳಿ ಅವತಾರದಲ್ಲಿ ಮಿಂಚುವ ರಾಧಿಕಾ ಕುಮಾರಸ್ವಾಮಿಶಮಿಕಾ ಎಂಟರ​‍್್ರೈಸ್ ಬ್ಯಾನರ್ ನಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡಿ ಮುಖ್ಯ ಪಾತ್ರ ನಿರ್ವಹಿಸಿರುವ ’ಭೈರಾದೇವಿ’ ಸಿನಿಮಾ ಬಿಡುಗಡೆಗೆ ಕ್ಷಣ ಗಣನೆ ಆರಂಭವಾಗಿದ್ದು ನಾಳೆ ಅಕ್ಟೋಬರ್ 3ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಟ್ರೇಲರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ರಾಧಿಕಾ ಅವರು ಅಘೋರಿ ಪಾತ್ರ ನಿರ್ವಹಿಸಿದ್ದಾರೆ ಜೊತೆಗೆ ಕಾಳಿ ಅವತಾರದಲ್ಲೂ ಕಾಣಿಸಿಕೊಂಡಿದ್ದಾರೆ.

ಇತ್ತೀಚಿಗೆ ಈ ಚಿತ್ರದ ಸೆಲೆಬ್ರಿಟಿ ಶೋ ಬೆಂಗಳೂರಿನ ಮಾಲ್ ಒಂದರಲ್ಲಿ ನಡೆದಿದ್ದು, ಚಿತ್ರರಂಗದ ಸಾಕಷ್ಟು ಕಲಾವಿದರು, ತಂತ್ರಜ್ಞರು ಹಾಗೂ ಅವರ ಫ್ಯಾಮಿಲಿ ಸಿನಿಮಾ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಮೇಶ್ ಅರವಿಂದ್ ’ಸೆಲೆಬ್ರಿಟಿ ಶೋನಲ್ಲಿ ಸಿನಿಮಾ ನೋಡಿದ ಗೆಳೆಯರೊಬ್ಬರು ’ಭಯಕ್ಕೊಂದು ಹೆಸರು ಭೈರಾದೇವಿ’ ಎಂದು ಮೆಸೇಜ್ ಮಾಡಿದ್ದರು. ಈ ಪಾತ್ರ ಮಾಡಲು ಕಥೆ ಕಾರಣ. ಅಘೋರಿ ಬಗ್ಗೆ ಸಿನಿಮಾ ಮಾಡಿರಲಿಲ್ಲ. ಒಂದು ಹಾರರ್ ಚಿತ್ರವನ್ನು ಫ್ಯಾಮಿಲಿ ಕಥೆ ಮೂಲಕ ಹೇಳಲಾಗಿದೆ. ಅನು ಪಾತ್ರ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ ಆಗುತ್ತದೆ’ ಎನ್ನುವರು.ಇನ್ನು ಚಿತ್ರದ ಬಗ್ಗೆ ಮಾಹಿತಿ ನೀಡುವ ಚಿತ್ರದ ನಿರ್ದೇಶಕ ಶ್ರೀಜೈ ’ಅಚಾನಕ್ ಆಗಿ ಕಥೆ ಹುಟ್ಟಿಕೊಂಡಿದ್ದು. ನಾನು ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೇನೆ. ಈ ಸಂದರ್ಭದಲ್ಲಿ ಮಹಿಳಾ ಅಘೋರಿಗಳ ಬಗ್ಗೆ ಗೊತ್ತಾಯಿತು. ನಂತರ ಅಘೋರಿಗಳ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಂಡೆ. ಇದರಲ್ಲಿ ಒರಿಜಿನಲ್ ಮಂತ್ರಗಳನ್ನು ಬಳಿಸಿದ್ದು ಶೂಟಿಂಗ್ ಸಂದರ್ಭದಲ್ಲಿ ಸಿಕ್ಕಾಪಟ್ಟಿ ತೊಂದರೆ​‍್ಲಗಳು ಆದವು. ಸಿನಿಮಾ ಕ್ವಾಲಿಟಿಯಾಗಿ ಬರಲು ತಂತ್ರಜ್ಞರು ಶ್ರಮ ತುಂಬಾ ಇದೆ’ ಎಂದು ಹೇಳಿದರು.

ರಾಧಿಕಾ ಕುಮಾರಸ್ವಾಮಿ ಮಾತನಾಡಿ ’ಬೇರೆ ಭಾಷೆಗಳಲ್ಲಿ ಚಿತ್ರ ರೆಡಿ ಆಗಿದ್ದರೂ ನಾನು ಕನ್ನಡದವಳು ಆಗಿದ್ದರಿಂದ ಮೊದಲು ಕನ್ನಡದಲ್ಲಿ ರೀಲೀಸ್ ಮಾಡತಾ ಇದ್ದೇವೆ. ನಾನು ಮೊದಲಬಾರಿ ಸಿನಿಮಾದಲ್ಲಿ ಆ್ಯಕ್ಷನ್ ಮಾಡಿದ್ದೇನೆ. ಒಂದು ಸಿನಿಮಾ ನಿರ್ಮಾಣ ಮಾಡೋದು ತುಂಬಾ ಕಷ್ಟ. ಅದರಲ್ಲೂ ಈ ತರದ ಸಿನಿಮಾ ಮಾಡೋದು ಚಾಲೆಂಜ್ ಆಗಿತ್ತು. ಹೆಣ್ಣು ಅಘೋರಿ ಇರುತ್ತಾರೆ ಅಂತಾ ಗೊತ್ತಿರಲಿಲ್ಲ. ಈ ತರಾ ಪಾತ್ರ ಮಾಡುತ್ತೇನೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಭೈರಾದೇವಿ ಒಂದು ಒಳ್ಳೆಯ ಸಿನಿಮಾ ಆಗಲಿದೆ ನಮ್ಮ ಸಂಸ್ಥೆಯಿಂದ. ಕಥೆ ಕೇಳಿ ಪಾತ್ರಕ್ಕೆ ನಾನು ಶೂಟ್ ಆಗಲಿಲ್ಲ ಅಂದ್ರೆ ಬೇರೆಯವರನ್ನು ಹಾಕಿಕೊಳ್ಳಿ ನಾನು ನಿರ್ಮಾಣ ಮಾಡುತ್ತೇನೆ ಎಂದಿದ್ದೆ ನಿರ್ದೇಶಕರಿಗೆ. ಲುಕ್ ಟೆಸ್ಟ್‌ ಆದಮೇಲೆ ಈ ಪಾತ್ರ ಮಾಡಲೇಬೇಕು ಅನಿಸಿತು. ಮೊದಲು ದೆವ್ವಗಳ ಬಗ್ಗೆ ಭಯ ಇತ್ತು. ಚಿತ್ರಕ್ಕಾಗಿ ಸ್ಮಶಾನದಲ್ಲಿ ಶೂಟ್ ಮಾಡಿದ ಮೇಲೆ ಭಯ ಹೊರಟೋಗಿದೆ’ ಎಂದು ಹೇಳುವರು.

ವೇದಿಕೆಯಲ್ಲಿ ನಟರಾದ ರಮೇಶ್ ಅರವಿಂದ್, ಅನು ಪ್ರಭಾಕರ್, ರಂಗಾಯಣ ರಘು, ಸಾಹಸ ನಿರ್ದೇಶಕ ರವಿವರ್ಮ ಮುಂತಾದವರು ಅನುಭವ ಹಂಚಿಕೊಂಡರು.