ಗಜೇಂದ್ರಗಡದಲ್ಲಿ ಮಾನವ ಹಕ್ಕುಗಳ ಸಂಘಟನೆ ಪದಾಧಿಕಾರಿಗಳ ನೇಮಕ
Appointment of office-bearers for the human rights organization in Gajendragad
ಗಜೇಂದ್ರಗಡ, ಆ. 4: ಭಾರತೀಯ ಮಾನವ ಹಕ್ಕುಗಳ ಅಪರಾಧ ವಿರೋಧಿ ಮತ್ತು ಭ್ರಷ್ಟಾಚಾರ ವಿರೋಧಿ ಒಕ್ಕೂಟವು ಸಮಾಜದ ಅಭಿವೃದ್ಧಿ, ಜಾಗೃತಿ ಹಾಗೂ ಪರಿವರ್ತನೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯ ಜಿಲ್ಲಾ ಹಾಗೂ ವಿಭಾಗವಾರು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಭಾರತ ಸರ್ಕಾರದ ಮಾನ್ಯತೆ ಪಡೆದಿರುವ ಈ ಸಂಘಟನೆಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಸದಾನಂದ ಹುಸೇನ್ ಜಿಗಜೂರ ಅವರ ಆದೇಶದ ಮೇರೆಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ.
ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಕುಷ್ಟಗಿಯ ಶ್ರೀ ಅಮರನಾಥೇಶ್ವರ ಮಹಾದೇವ ಮಠದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪೀಠಾಧೀಶ್ವರರಾದ ಶ್ರೀ ಮಹಾಂತ ಸಹದೇವಾನಂದ ಗುರುಜಿ ಮಹಾರಾಜರು ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಪ್ರಮಾಣಪತ್ರಗಳನ್ನು ವಿತರಿಸಿ ಆಶೀರ್ವದಿಸಿದರು.
ನಂತರ ಮಾತನಾಡಿದ ಗುರುಜಿಗಳು, ಯುವಕರು ಹಾಗೂ ಮಹಿಳೆಯರು ಸಮಾಜದ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಪರಿವರ್ತನೆಗೆ ಶ್ರಮಿಸಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಉತ್ತಮ ಸಂಸ್ಕಾರ, ನಡೆ-ನುಡಿ ರೂಢಿಸಿಕೊಂಡು ಬಡವರು ಹಾಗೂ ನೊಂದವರ ಜೀವನ ಸುಧಾರಣೆಗೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಸಮಾಜಮುಖಿ ಸಂಘಟನೆಗಳು ನಿರಂತರವಾಗಿ ಜನಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಸಾತ್ವಿಕ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ವಿಭಾಗದ ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲಾ ತರವಾಡೆ, ಉಪಾಧ್ಯಕ್ಷರಾಗಿ ಬಸವರಾಜ ನೆಲಜೇರಿ, ಭಾಗ್ಯಶ್ರೀ ಹುಲಕಟ್ಟಿ ಅವರನ್ನು ಗದಗ ಜಿಲ್ಲಾ ಅಧ್ಯಕ್ಷರಾಗಿ, ಪವನ್ ಮೇರವಾಡೆ ಅವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಅಲ್ಲದೆ ನಾಗರಾಜ ಕೃಷ್ಣಜಿ ಮುಖೇ, ವೀರೇಶ್ ಕರ್ಚಿಗನೂರು, ಗಣೇಶ್ ಮೇರವಾಡೆ ಸೇರಿದಂತೆ ಹಲವರನ್ನು ವಿವಿಧ ಪದಾಧಿಕಾರಿ ಹುದ್ದೆಗಳಿಗೆ ನೇಮಿಸಲಾಯಿತು.
ಕಾರ್ಯಕ್ರಮದಲ್ಲಿ ಮುಂಡರಗಿ ಮಾಲೀಕ ಮಹಾಂತೇಶ್ ಬೆಕ್ಕೇರಿ, ಚಂದ್ರು ನಾವಿ, ಶಶಿಕಲಾ ಮೇಟಿ, ಪತ್ರಕರ್ತರಾದ ಯಲ್ಲಮ್ಮ ರಾಠೋಡ್, ಲಿಂಗರಾಜ ಮುದುಗಲ್ಲ, ಶ್ರೀ ಮಾತಾ ಹೋಟೆಲ್ ಮಾಲೀಕ ಮಹೇಶ್ ತೆಗ್ಗಿನಮನಿ, ಗೀತಾ ಜಾಧವ್, ಐಶ್ವರ್ಯ ರಾಠೋಡ್, ಪ್ರಕಾಶ್ ಬಳಗಾನೂರು ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 