ಗದಗ ಜಿಲ್ಲಾ ವಕ್ಫ್ ಅಧ್ಯಕ್ಷರ ನೇಮಕಾತಿ
Appointment of Gadag District Wakf President
ಗದಗ 29: ನಿಕಟಪೂರ್ವ ಗದಗ ಜಿಲ್ಲೆಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಜಿ ಎಮ್ ದಂಡಿನ ರವರ ಅಕಾಲಿಕ ಮರಣಾನಂತರ ಕಳೆದ ಹಲವಾರು ದಿನಗಳಿಂದ ತೆರವಾಗಿದ್ದ ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕಾತಿ ಕುರಿತು ಇದೇ ದಿನಾಂಕ 27 ರಂದು ಮುಸ್ಲಿಂ ಸಮುದಾಯದ ಜಿ ಡಿ ಕಳಸಾಪೂರ ( ಜನಾಬ್ ಗುಲಾಮಹುಸೇನ್ ಡಿ ಕಳಸಾಪೂರ) ಇವರನ್ನು ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿರುತ್ತದೆ.ಎಂದು ಪತ್ರಿಕಾ ಪ್ರಕಟಣೆಗೊಂಡಿರುತ್ತದೆ.
ಆದರೆ ಸದರ ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕಾತಿಯನ್ನು ಮಾಡಿ ಅಧಿಕೃತವಾಗಿ ಆದೇಶಿಸಲಾಗಿರುವುದಿಲ್ಲ. ಆ ಕುರಿತು ಯಾವುದೇ ಉಹಾಪೋಹಗಳಿಗೆ ಆಸ್ಪದ ನೀಡಬಾರದು ಹಾಗೂ ಸದರ ಗದಗ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕವಾಗಿದೆ ಎಂದು ಸುಳ್ಳು ಹಾಗೂ ಬನಾವಟಿಯಿಂದ ಕೂಡಿದ ಸಂಗತಿಯಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರು ಹಾಗೂ , ,ನಗರಸಭಾ ಸದಸ್ಯರು ಹಾಗೂ ವಿರೋಧ ಪಕ್ಷದ ಉಪನಾಯಕರಾದ ಜನಾಬ್ ಬರಕತಅಲಿ ಮುಲ್ಲಾರವರು ಅಧಿಕೃತವಾಗಿ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಸಂಧರ್ಭದಲ್ಲಿ ಉಮರ್ ಫಾರೂಕ್ ಹುಬ್ಬಳ್ಳಿ, ಶಾರುಖ್ ಹುಯಿಲಗೋಳ, ಅನ್ವರ್ ಶಿರಹಟ್ಟಿ , ಮಾಜೀ ನಗರಸಭಾ ಸದಸ್ಯರಾದ ಅನಿಲ ಗರಗ, ಚಾಂದಸಾಬ್ ಕೊಟ್ಟೂರ್,ಗದಗ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ ಮಂದಾಲಿ
ರಾಮಣ್ಣ ಹಬೀಬ್ ಡಾ,ಕಮಲಶಿ, ಎಸ್ ಕೊಡಬಿಂಗೆ ಬಸವರಾಜ ಕಡೆಮನಿ, ಶ್ರೀನಿವಾಸ್ ಹುಯಿಲಗೋಳ, ಮೋಹನ ದೊಡ್ಡಕುಂಡಿ, ಮಾರ್ತಾಠಪ್ಪ ಹಾದಿಮನಿ ಹಾಗೂ ಇನ್ನಿತರು ಉಪಸ್ಥಿತರಿದ್ದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 