ಕೊವಿಡ್-19 ತುರ್ತು ಸೇವೆಗೆ ಬಿಬಿಎಂಪಿಯಿಂದ 22 ವೈದ್ಯಾಧಿಕಾರಿಗಳ ನೇಮಕ

ಬೆಂಗಳೂರು, ಏ 8,ನಗರದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ಮತ್ತು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ 22 ವೈದ್ಯಾಧಿಕಾರಿಗಳನ್ನು ತುರ್ತು ನೇಮಕಾತಿ ಮೂಲಕ ನಿಯೋಜನೆ ಮಾಡಿಕೊಳ್ಳಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಏ 2ರಂದು ಹೊರಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನ ಮಾಡಿದ್ದು, 22 ವೈದ್ಯಾಧಿಕಾರಿಗಳಿಗೆ  6 ತಿಂಗಳ ಅವಧಿಗೆ ನಿಯೋಜನೆ ಮಾಡಿಕೊಳ್ಳಲಾಗಿದೆ. ಈ ವೈದ್ಯರು ಕೋವಿಡ್ -19 ತುರ್ತು ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಗ್ಯಾಧಿಕಾರಿರವರು ತಿಳಿಸಿದ್ದಾರೆ.