ಅಪರಿಚಿತ ಶವದ ವಾರಸುದಾರರ ಪತ್ತೆಗೆ ಮನವಿ
Appeal to trace heirs of unidentified body
ಕೊಪ್ಪಳ 03: ಗದಗ ರೈಲ್ವೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 01 ರಂದು ಹುಲಕೋಟಿ-ಅಣ್ಣಿಗೇರಿ ರೈಲ್ವೆ ನಿಲ್ದಾಣಗಳ ಮಧ್ಯ ರೈಲ್ವೇ ಕಿ.ಮೀ ನಂ: 37/700 -600 ರಲ್ಲಿ ಸುಮಾರು 30 -35 ವರ್ಷದ ಅಪರಿಚಿತ ವ್ಯಕ್ತಿಯು ಯಾವುದೋ ರೈಲಿಗೆ ಬಿದ್ದು ಮೃತಪಟ್ಟಿದ್ದು, ಈ ಸಂಬಂಧ ಗದಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬರ್ 29/2025 ಕಲಂ 194 ಬಿ.ಎನ್.ಎಸ್.ಎಸ್ ನೇದ್ದರ ರೀತ್ಯ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಚಹರೆ: ಮೃತ ವ್ಯಕ್ತಿಯು ಸುಮಾರು 5.5 ಅಡಿ ಎತ್ತರವಿದ್ದು, ದುಂಡು ಮುಖ, ಅಗಲವಾದ ಹಣೆ, ಗೋಧಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಸುಮಾರು 2 ಇಂಚು ಕಪ್ಪು/ಬಿಳಿ ಕೂದಲು, 1/2 ಇಂಚಿನಷ್ಟು ಕಪ್ಪು/ಬಿಳಿ ದಾಡಿ-ಮೀಸೆ ಬಿಟ್ಟಿರುತ್ತಾರೆ. ಮೃತರ ಮೈಮೇಲೆ ಒಂದು ಖಾಕಿ ಕಲರಿನ ಟಿ-ಶರ್ಟ್, ಒಂದು ಬಿಳಿ ಕಲರಿನ ಬನಿಯನ್, ಒಂದು ಕಪ್ಪು ಕಲರಿನ ಪ್ಯಾಂಟ್, ಒಂದು ಕಪ್ಪು ಕಲರಿನ ಅಂಡರ್‌ವೇರ್ ಧರಿಸಿರುತ್ತಾರೆ.
ಮೃತರ ವಾರಸುದಾರರಿದ್ದಲ್ಲಿ ಅಥವಾ ಮೇಲ್ಕಂಡ ಚಹರೆಯ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಗದಗ ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ಸಂ.08372-278744 ಅಥವಾ ಮೊ.ನಂ.9480802128 ಇ-ಮೇಲ್: ರಚಿಜಚಿರಡಿಟಥಿಅಠಿ.ರಠ.ಟಿ ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080- 22871291 ನೇದ್ದಕ್ಕೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗದಗ ರೈಲ್ವೇ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 