ವಿದ್ಯುತ್ ಖಾಸಗಿಕರಣ ಮತ್ತು ಟಾಟಾ ಪವರ್ ಕಂಪನಿ ಪರವಾನಿಗೆ ವಿರೋಧಿಸಿ ಸರ್ಕಾಕ್ಕೆ ಮನವಿ

ವಿದ್ಯುತ್ ಖಾಸಗಿಕರಣ ಮತ್ತು ಟಾಟಾ ಪವರ್ ಕಂಪನಿ ಪರವಾನಿಗೆ ವಿರೋಧಿಸಿ ಸರ್ಕಾಕ್ಕೆ ಮನವಿ  Appeal to the government against electricity privatization and Tata Power Company license

ಲೋಕದರ್ಶನ ವರದಿ 

ಬೆಂಗಳೂರು 17: ಟಾಟಾ ಪವರ್ ಕಂಪನಿಯವರಿಗೆ ಪರವಾನಿಗೆ ನೀಡಬಾರದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದನ್ನು ವಿರೋಧಿಸುತ್ತದೆ. ಇದು ರೈತರ ಪಂಪ್ಸೆಟ್ಟುಗಳಿಗೆ ಮಾರಕವಾಗಿದೆ ಮತ್ತು ಗೃಹ ಬಳಕೆಗೆ ಮತ್ತು ನಿರುದ್ಯೋಗದ ಸಮಸ್ಯೆಯು ಹೆಚ್ಚಾಗಲಿದ್ದು ಮತ್ತು ಮೀಸಲಾತಿಯಲ್ಲಿ ತೊಂದರೆ ಉಂಟಾಗುತ್ತದೆ ಎಂದರು 

ಒಂದು ವೇಳೆ ವಿದ್ಯುತ್ ಖಾಸಗಿಕರಣ ಆಗಿದ್ದೆ ಆದರೆ ಕರ್ನಾಟಕದ್ಯಂತ ಬಂದ್‌ಗೆ ಕರೆ ಕೊಡುವುದರ ಮೂಲಕ, ಕರ್ನಾಟಕ ಸರ್ಕಾರದ ವಿರುದ್ಧ ಬಾರು ಕೋಲು ಚಳುವಳಿ ಮಾಡಿ ಉಗ್ರವಾದ ಹೋರಾಟ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾಡಲಾಗುವುದು.  

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲೆ, ಟಿ.ನಾಗರಾಜ್ ಜಿಲ್ಲಾಧ್ಯಕ್ಷರು, ಆರ್‌.ಆರ್‌.ತಾಯಪ್ಪ ಜಿಲ್ಲಾ ಉಪಾಧ್ಯಕ್ಷರು, ದೊಡ್ಡ ಗಾಳೆಪ್ಪ, ರೇವಣ ಸಿದ್ದಪ್ಪ, ಕೆ.ಮೂರ್ತಿ, ಅಯ್ಯಣ್ಣ, ಮಹಾರುದ್ರ, ಗಂಟೆ ಬಸವರಾಜ, ಗಾದಿಲಿಂಗಪ್ಪ, ಸತೀಶ್, ರಾಮಾಂಜನಿ, ಸಾಗರ್ ಇನ್ನಿತರರು ಉಪಸ್ಥಿತರಿದ್ದು ಮನವಿ ಪತ್ರವನ್ನು ಸಲ್ಲಿಸಿದರು.