ಸ್ಮಶಾನ ಅಭಿವೃದ್ಧಿಗೆ ಅನುದಾನ ನೀಡಲು ಪ.ಪಂಗೆ ಮನವಿ
Appeal to the P.P. to provide grants for cemetery development
ದೇವರಹಿಪ್ಪರಗಿ 25: ಪಟ್ಟಣದಲ್ಲಿ ಸುಮಾರು 15 ಸಾವಿರಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿದ್ದು. ಸ್ಮಶಾನ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಅನುದಾನ ನೀಡಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಅಪ್ರೋಜ ಅಹಮದ ಪಟೇಲ ಹಾಗೂ
ಪ.ಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ ಅವರಿಗೆ ಪಟ್ಟಣದ ಅಂಜುಮನ್ ಇ ಇಸ್ಲಾಂ ಕಮಿಟಿಯಿಂದ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಬುಧವಾರದಂದು ಮನವಿ ಪತ್ರ ಸಲ್ಲಿಸಿ ಮಾತನಾಡಿದ ಮುಖಂಡರು,ಸ್ಮಶಾನದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು,ಅಂತ್ಯಸಂಸ್ಕಾರ ನೆರವೇರಿಸಲು ನೀರು, ನೆರಳು, ಬೆಳಕು ಸೇರಿದಂತೆ ರಸ್ತೆಯ ಅವಶ್ಯಕತೆ ಇದೆ. ಆದರೆ, ಅಂತ್ಯಸಂಸ್ಕಾರಕ್ಕೆ ಆಗಮಿಸುವ ಜನರಿಗೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ಎಲ್ಲೆಂದರಲ್ಲಿ ಮುಳ್ಳುಗಂಟಿಗಳು ಬೆಳದು ನಿಂತಿತು ಅಸ್ವಚ್ಛತೆ ಮನೆ ಮಾಡಿದೆ. ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದೆ ಜನರು ಪರದಾಡುವಂತಾಗಿದೆ. ರಾತ್ರಿ ಬೆಳಕಿನ ಅಭಾವದಿಂದ ಕತ್ತಲಲ್ಲೆ? ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ಇದೆ. ಮಳೆಗಾಲದಲ್ಲಂತೂ ಸ್ಥಿತಿ ಹೇಳತೀರದು. ವಿಷ ಜಂತುಗಳ ಭಯದಲ್ಲೆ? ಸಾಗಬೇಕಾಗಿದೆ ಮೂಲಸೌಕರ್ಯ ವಂಚಿತಗೊಂಡಿದ, ಸ್ಮಶಾನದ ಅಭಿವೃದ್ಧಿಗೆ ಪ.ಪಂ.ನಿಂದ ಅನುದಾನ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಮೈಹಿಬೂಬ ಹುಂಡೆಕಾರ, ಸದಸ್ಯರುಗಳಾದ ಎಂ.ಎಚ್. ಫಾನಪರೋಶ, ಮುನೀರ್ ಅಹ್ಮದ್ ಮಳಖೇಡ, ಸೈಯದ್ ಮರೂಳ, ಮಹಮ್ಮದ್ ಇಕ್ಬಾಲ್ ಬಿಜಾಪುರ, ಬಂದೆ ನವಾಜ್, ಹೈದರಸಾಬ್ ಮುಲ್ಲಾ, ಯುನಸ್ ಲಾಳಸಂಗಿ, ಯಾಕೋಬ್ ನದಾಫ್, ಮೌಲಾಸಾಬ್ ನದಾಫ್, ಇಬ್ರಾಹಿಂ ಆಳಂದ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 