ಸ್ಲಂ ನಿವಾಸಿಗಳ ವಿವಿಧ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಸುರ್ವಣ ಸೌಧದಲ್ಲಿ ವಸತಿ ಸಚಿವರಿಗೆ ಮನವಿ
Appeal to the Housing Minister at Surwan Soudha demanding various rights of slum dwellers
ಗದಗ-17: ಬೆಳಗಾವಿಯ ಸುರ್ವಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯದ ಸಮಿತಿಯ ಪದಾಧಿಕಾರಿಗಳು ಸ್ಲಂ ನಿವಾಸಿಗಳ ವಸತಿಹಕ್ಕು ಕಾಯ್ದೆ ಜಾರಿಗೆ ಆಗ್ರಹಿಸಿ, ಖಾಸಗಿ ಮಾಲಿಕತ್ವದಲ್ಲಿರುವ ಕೊಳಗೇರಿ ಪ್ರದೇಶಗಳನ್ನು ತಕ್ಷಣ ಘೋಷಣೆ ಮಾಡಲು ಹಾಗೂ ವಿವಿಧ ಹಕ್ಕೋತ್ತಾಯಗಳಿಗೆ ಒತ್ತಾಯಿಸಿ ಸುರ್ವಣ ಸೌಧದಲ್ಲಿ ವಸತಿ ಸಚಿವರಾದ ಜಮೀರ್ ಅಹ್ಮದಖಾನ ಅವರಿಗೆ ಘೇರಾವು ಹಾಕಿ ಮನವಿಯನ್ನು ಸಲ್ಲಿಸಿದರು. ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಮಾತನಾಡಿ ರಾಜ್ಯಾದ್ಯಂತ ಬಿಬಿಎಂಪಿ, ಮಹಾನಗರಪಾಲಿಕೆ ಹಾಗೂ ನಗರಸಭೆ ವ್ಯಾಪ್ತಿಯ ಖಾಸಗಿ ಒಡೆತನದಲ್ಲಿರುವ ಸುಮಾರು 709ಕ್ಕೊ ಹೆಚ್ಚು ಸ್ಲಂಗಳಲ್ಲಿ ಅಂದಾಜು 1.8 ಲಕ್ಷ ಕುಟುಂಬಗಳು ಕಳೆದ 50 ವರ್ಷಗಳಿಂದ ಯಾವುದೇ ನಾಗರೀಕ ಸೌಲಭ್ಯಗಳು ಇಲ್ಲದೇ ವಾಸವಾಗಿದ್ದಾರೆ,
ಸ್ಲಂ ಕಾಯ್ದೆ ಪ್ರಕಾರ ಸ್ಲಂ ಘೋಷಣೆ ಮಾಡಿ ಅಭಿವೃಧ್ದಿ ಪಡಿಸಬೇಕಾದ ನಿಯಮಕ್ಕೆ 2023 ಸೆಪ್ಟೆಂಬರ್ ನಲ್ಲಿ ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿ ಖಾಸಗೀ ಮಾಲಿಕತ್ವದ ಸ್ಲಂಗಳನ್ನು ತಾತ್ಕಾಲಿಕವಾಗಿ ಘೋಷಣೆ ಮಾಡಲು ತಡೆ ನೀಡಲಾಗಿದೆ, ಇದರಿಂದ ಕಳೆದ 2 ವರ್ಷಗಳಿಂದ ಕೊಳಗೇರಿ ಅಭಿವೃಧ್ದಿ ಮಂಡಳಿಯಿಂದ ಸ್ಲಂ ಘೋಷಣೆ ಮಾಡುವುದನ್ನೇ ನಿಲ್ಲಿಸಿದೆ. ಇಂತಹ ಜನವಿರೋಧಿ ಸುತ್ತೋಲೆಯಿಂದ ರಾಜ್ಯದ ಸ್ಲಂ ನಿವಾಸಿಗಳು ಹಕ್ಕುಪತ್ರ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ರಾಜ್ಯ ಹಣಕಾಸು ಇಲಾಖೆಯಿಂದ ಸ್ಲಂ ಘೋಷಣೆಗೆ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರೂ ಸಹ ವಸತಿ ಇಲಾಖೆಯು ಅನಗತ್ಯ ಸುತ್ತೋಲೆ ಮೂಲಕ ಬಡವರ ಹಿತಾಸಕ್ತಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ತಕ್ಷಣವೇ ಈ ಜನವಿರೋಧಿ ಸುತ್ತೋಲೆಯನ್ನು ಹಿಂಪಡೆದು ಕೊಳಗೇರಿ ಪ್ರದೇಶಗಳ ಅಭಿವೃಧ್ದಿಗಾಗಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ವಸತಿ ಸಚಿವರು ಮನವಿ ಸ್ವಿಕರಿಸಿ ಮಾತನಾಡಿ ಖಾಸಗೀ ಮಾಲಿತ್ವದಲ್ಲಿರುವ ಸ್ಲಂ ಪ್ರದೇಶಗಳ ಘೋಷಣೆ, ವಸತಿ ಯೋಜನೆಯ ಸಮಪರ್ಕವಾಗಿ ಜಾರಿಗಾಗಿ ಹಾಗೂ ವಸತಿ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಕುರಿತು ಚರ್ಚಿಸಲು ಅಧಿವೇಶನ ಮುಗಿದ ನಂತರ ಬೆಂಗಳೂರಿನಲ್ಲಿ ಉನ್ನತಮಟ್ಟದ ಸಭೆಯನ್ನು ಕರೆಯಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ, ಸಾವಿತ್ರಿಬಾ ಪುಲೆ ಮಹಿಳಾ ಸಮಿತಿ ಸಂಚಾಲಕಿ ಚಂದ್ರಮ್ಮ, ವಿಭಾಗೀಯ ಸಂಚಾಲಕರಾದ ಜನಾರ್ಧನ ಹಳ್ಳಿಬೆಂಚಿ, ಹುಬ್ಬಳ್ಳಿ ಸಂಚಾಲಕಿ ಶೋಭಾ ಕಮತರ, ಡಾವಣಗೇರಿ ಸಂಚಾಲಕಿ ರೇಣುಕಾ ಯಲ್ಲಮ್ಮ, ತುಮಕೂರಿನ ಅರುಣ. ಹೊಸಪೇಟೆ ಸಂಚಾಲಕಿ ವೆಂಕಮ್ಮ, ಚಿತ್ರದುರ್ಗ ಸಂಚಾಲಕಿ ಸುಧಾ, ಗುಲಬುರ್ಗಾ ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ವಿಜಯಪುರ ಸಂಚಾಲಕ ಅಕ್ರಮ ಮಸಾಳಕರ, ಬೆಳಗಾವಿ ಜಿಲ್ಲಾ ಸಂಚಾಲಕ ಫಕ್ಕಿರ್ಪ ತಳವಾರ, ಮಂಜುಬಾಯಿ, ಹನುಮಂತ ಕಟ್ಟಿಮನಿ, ಗದಗ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ಬಾಷಾಸಾಬ ಡಂಬಳ, ಶರಣಪ್ಪ ಸೂಡಿ, ರಿಜ್ವಾನ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 