ಸರ್ಕಾರಿ ಜಾಗ ಒತ್ತುವರಿ ಮಾಡಿದವರ ಮೇಲೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಮನವಿ
Appeal to the District Collector to take action against those who encroached on government land
ಸರ್ಕಾರಿ ಜಾಗ ಒತ್ತುವರಿ ಮಾಡಿದವರ ಮೇಲೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಮನವಿ
ತಾಳಿಕೋಟೆ 31: ಪಟ್ಟಣದಲ್ಲಿ ಹರಿಯುವ ಜಾನಕಿ ಹಳ್ಳವನ್ನು ಒತ್ತುವರಿ ಮಾಡಿಕೊಂಡು ನ್ಯಾಯಾಲಯದ ತಡೆಯಾಜ್ಞೆಯನ್ನೂ ಮೀರಿ 24 ನಿವೇಶನಗಳನ್ನು ನಿರ್ಮಿಸಲು ಹೊರಟಿದ್ದು ಅದಕ್ಕೆ ತಡೆ ನೀಡಿ ಇದರ ಸಮಗ್ರ ತನಿಖೆ ನಡೆಸಿ, ತಪ್ಪು ದಾಖಲೆಗಳನ್ನು ಸೃಷ್ಟಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಜಾನಕಿ ಹಳ್ಳವನ್ನು ಉಳಿಸಿ ಕೊಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸಿರಸಕುಮಾರ ಹಜೇರಿ ಹಾಗೂ ಪುರಸಭೆ ಸದಸ್ಯ ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ ಅವರು ಜಿಲ್ಲಾಧಿಕಾರಿ ಡಾ.ಆನಂದ ಕೆ. ಇವರಿಗೆ ಬುಧವಾರ ಮನವಿ ಮಾಡಿದರು.
ಪಟ್ಟಣಕ್ಕೆ ಬುಧವಾರ ಆಗಮಿಸಿದ್ದ ವಿಜಯಪುರ ನೂತನ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅವರು ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಈ ಮನವಿಯನ್ನು ಮಾಡಿಕೊಂಡರು. ಇಡೀ ಪ್ರಕರಣದ ಕುರಿತು ದಾಖಲೆಗಳ ಸಮೇತವಾಗಿ ಜಿಲ್ಲಾಧಿಕಾರಿಯವರಿಗೆ ವಿವರಿಸಿದ ಅವರು ತಾಳಿಕೋಟೆ ಪಟ್ಟಣದ ಕ್ಷೇತ್ರ 2-28 ಎ.ಗು. ಜಮೀನಿನ ಮಧ್ಯದಲ್ಲಿ ಹರಿಯುತ್ತಿರುವ ಸರಕಾರಿ ಜಾನಕಿ ಹಳ್ಳವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಕಾನೂನು ಬಾಹಿರವಾಗಿ 24 ವಾಣಿಜ್ಯ ನಿವೇಶನಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಮುದ್ದೇಬಿಹಾಳ ಸಿವಿಲ್ ನ್ಯಾಯಾಲಯದಲ್ಲಿ ನಿರಂತರ ತಡೆ ಆಜ್ಞೆ ಓ.ಖ.ಓಠ181/2011 ಇದ್ದರೂ ಕೂಡ ಕಾನೂನುಬಾಹಿರವಾಗಿ 24 ವಾಣಿಜ್ಯ ನಿವೇಶನಗಳನ್ನು ಕೊಡಿಸಿ ಕಾನೂನಿನ ಉಲ್ಲಂಘನೆಯನ್ನು ಮಾಡಿದ್ದಾರೆ ಇದರ ಸ್ಥಳ ಪರೀಶೀಲನೆ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು .ಮುದ್ದೇಬಿಹಾಳ ಸಿವಿಲ್ ನ್ಯಾಯಾಲಯದಲ್ಲಿ ತಡೆ ಆಜ್ಞೆ ಇದ್ದರೂ ಇದನ್ನು ಗಾಳಿಗೆ ತೂರಿ ಜಮೀನಿನ ಮೂಲ ಮಾಲೀಕರಿಂದ 2021-22 ರಲ್ಲಿ ಮೂರು ಜನರಿಗೆ ಮುದ್ದೇಬಿಹಾಳ ಉಪನೊಂದಣಾಧಿಕಾರಿ ಅವರು ಕೇವಲ ರೂ.3 ಸಾವಿರ ಮುದ್ರಾಂಕ ಶುಲ್ಕವನ್ನು ತುಂಬಿ 21 ವಾಟ್ನಿಪತ್ರ ಕಾನೂನು ಬಾಹಿರವಾಗಿ ಮಾಡಿಕೊಟ್ಟು ಮುದ್ರಾಂಕದಿಂದ ಸರ್ಕಾರಕ್ಕೆ ಬರಬಹುದಾಗಿದ್ದ ಲಕ್ಷಾಂತರ ರೂಪಾಯಿ ತೆರಿಗೆ ಹಣ ನಷ್ಟ ಮಾಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. 20-5 2025 ರಂದು ವ್ಯವಸಾಯಿತ ಜಮೀನನ್ನು ಸುಳ್ಳು ಮಾಹಿತಿ ಕೊಟ್ಟು ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನಾ ಆದೇಶವನ್ನು ಪಡೆದುಕೊಂಡಿರುತ್ತಾರೆ ಜಾನಕಿ ಹಳ್ಳದ ನೈಸರ್ಗಿಕ ಮಾರ್ಗ ಬದಲಿಸಿರುವುದರಿಂದ ಹಾಗೂ ಅದರ ಹರಿವಿನ ವಿಸ್ತಿರ್ಣ ಕಿರಿದುಗೊಳಿಸಿರುವುದರಿಂದ ಇತ್ತೀಚೆಗೆ ಮಳೆ ಬಂದಾಗ ಹಳ್ಳದ ನೀರು ಸರ್ಕಾರಿ ಮಕ್ಕಳ ಹಾಸ್ಟೆಲು, ಮನೆ ಕಟ್ಟಡಗಳಿಗೆ ಹಾಗೂ ಖಾಲಿ ನಿವೇಶನಗಳಿಗೆ ನೀರು ನುಗ್ಗಿ ಜಲಾವೃತವಾಗಿತ್ತು.
ಮುಖ್ಯ ರಸ್ತೆ ಮೇಲೆ ನೀರು ಹರಿದು ದಾರಿ ಬಂದ ಆಗಿದ್ದು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿದೆ ಆದ್ದರಿಂದ ಇದನ್ನು ತಡೆದು ಭವಿಷ್ಯದಲ್ಲಿ ಆಗುವ ಅನಾಹುತಗಳಿಗೆ ತಡೆ ನೀಡಬೇಕು ಜಾನಕಿ ಹಳ್ಳದ ಮಾರ್ಗ ಬದಲಿಸಿದ್ದರೂ ಮೌನವಾಗಿರುವುದನ್ನು ನೋಡಿದರೆ ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರ ಇದರಲ್ಲಿ ಭಾಗಿಯಾಗಿರುವ ಸಂಶಯವಿದೆ. ಮಾನ್ಯ ಜಿಲ್ಲಾಧಿಕಾರಿಗಳು 14-05- 25ರಂದು ತಾಲೂಕ ದಂಡಾಧಿಕಾರಿಗಳಿಗೆ ಸದರಿ ಪ್ರಕರಣದ ಸಮಗ್ರ ವರದಿ ಕಳಿಸಲು ತಿಳಿಸಿದ್ದರೂ ಇಲ್ಲಿವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಖುದ್ದಾಗಿ ತಾಳಿಕೋಟೆಗೆ ಬಂದು ಸರ್ಕಾರಿ ಜಾನಕಿ ಹಳ್ಳದ ನಕ್ಷೆ ಮತ್ತು ಹೊಲದ ಮೂಲ ಪಿ.ಟಿ.ಶೀಟು ಹಾಗೂ ವಾಣಿಜ್ಯ ನಿವೇಶನದ ಪಿ. ಟಿ. ಶೀಟು ಪರೀಶೀಲನೆ ಮಾಡಿ ಸರ್ಕಾರಿ ಹಳ್ಳವನ್ನು ಉಳಿಸಬೇಕು . ಈ ಎಲ್ಲ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಇದ್ದ ತಹಸಿಲ್ದಾರ್ ಡಾ.ವಿನಯಾ ಹೂಗಾರ ಹಾಗೂ ಮುಖ್ಯಾಧಿಕಾರಿ ಮೋಹನ ಜಾಧವ ಇವರಿಗೆ ಇದರ ಸಮಗ್ರ ವರದಿ ಕೊಡಲು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ನಿಂಗಣ್ಣ ಕುಂಟೋಜಿ, ಗೋಪಾಲ ಇಲ್ಕಲ್, ಅಂಬೇಡ್ಕರ್ ಸೇನೆ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಆಸಿಫ್ ಕೆಂಭಾವಿ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 