ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವಂತೆ ಮುಖ್ಯಮಂತ್ರಿಗೆ ಮನವಿ
ಕಾರವಾರ 23: ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಅನ್ನು ಪುನಃ ಜಾರಿಗೊಳಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಕಾರ್ಯಕರ್ತರು ಉಪವಿಭಾಗಾಧಿಕಾರಿ ಪ್ರಿಯಾಂಗಾ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿತು.
2010ರಲ್ಲಿ ಬಿಜೆಪಿ ಸಕರ್ಾರವು ರಾಜ್ಯದಲ್ಲಿ ಕನರ್ಾಟಕ ಗೋಹತ್ಯಾ ಪ್ರತಿಬಂಧಕ ಹಾಗೂ ಸಂರಕ್ಷಣಾ ಅಧಿನಿಯಮ 2010 ಕಾನೂನು ಮಾಡಿತ್ತು. 2014ರಲ್ಲಿ ಕಾಂಗ್ರೆಸ್ ಸಕರ್ಾರ ಅಧಿಕಾರವನ್ನು ಸ್ವೀಕರಿಸಿದ ನಂತರ ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಆ ಕಾನೂನನ್ನು ರದ್ದುಪಡಿಸಿತ್ತು. ಈಗ ಬಿಜೆಪಿ ಸಕರ್ಾರ ಅಧಿಕಾರದಲ್ಲಿದ್ದು, ಈ ಕಾನೂನನ್ನು ಪುನಃ ಜಾರಿಗೊಳಿಸಬೇಕು. ಜತೆಗೆ, ಗೋಮಾಂಸ ಮಾರಾಟ ಮತ್ತು ಸಾಗಾಟದ ಮೇಲೂ ಕಠಿಣ ಷರತ್ತುಗಳನ್ನು ವಿಧಿಸಬೇಕು ಎಂದು ಒತ್ತಾಯಿಸಿದರು.
ಸಿಬಿಐ ತನಿಖೆಗೆ ಆಗ್ರಹ:
ದೇಶದಲ್ಲಿ ಹಿಂದೂ ಸಂಘಟನೆಯ ಮುಖಂಡರು, ಕಾರ್ಯಕತರ ಮೇಲೆ ದೌರ್ಜನ್ಯಗಳು ಮುಂದುವರಿದಿವೆ. ಕೆಲವರಿಗೆ ಬೆದರಿಕೆ ಒಡ್ಡುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಹಿಂದೂ ಮುಖಂಡರ ಧೈರ್ಯ ಕುಗ್ಗಿಸುವ ಕಾರ್ಯದ ಹಿಂದೆ ಯಾರಿದ್ದಾರೆಂಬ ವಿಚಾರವನ್ನು ತನಿಖೆಯ ಮೂಲಕ ಪತ್ತೆ ಹಚ್ಚಬೇಕು ಎಂದು ಇದೇ ವೇಳೆ ಕೇಂದ್ರ ಸಕರ್ಾರಕ್ಕೂ ಮನವಿ ರವಾನಿಸಲಾಯಿತು.
ಅಸ್ಸಾಂನಲ್ಲಿ ರಾಷ್ಟ್ರೀ ಜನಸಂಖ್ಯಾ ನೋಂದಣಿ (ಎನ್ಆರ್ಸಿ) ಜಾರಿಗೊಳಿಸಿದಂತೆ ದೇಶದೆಲ್ಲೆಡೆ ಜಾರಿಗೊಳಿಸಬೇಕು. ಕೇವಲ ಬಾಂಗ್ಲಾ ನುಸುಳುಕೋರರನ್ನು ಮಾತ್ರವಲ್ಲ, ಪಾಕಿಸ್ತಾನಿ ಹಾಗೂ ರೋಹಿಂಗ್ಯಾ ಮುಸಲ್ಮಾನರನ್ನೂ ದೇಶದಿಂದ ಓಡಿಸಬೇಕು. ಆ ಮೂಲಕ ದೇಶದ ರಕ್ಷಣಾ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಪ್ರಸ್ಥಾಪಿಸಿದ್ದಾರೆ.
ಈ ಸಂದರ್ಭದಲ್ಲಿ ಪಂಡರಿನಾಥ ಗುರುವ, ಉಲ್ಲಾಸ ಮುಂಜು, ಸಾಗರ ಕುಡರ್ೆಕರ, ಸೋಮೇಶ ಗುರುವ, ಸುಷ್ಮಾ ಕುಡರ್ೆಕರ, ಸುರೇಖಾ ಗುರುವ, ಅಶೋಕ ಚವ್ಹಾಣ ಸೇರಿದಂತೆ ಇನ್ನಿತರು ಇದ್ದರು.