ಹೊಸದಾಗಿ ಜಾತಿ ಸಮೀಕ್ಷೆಯನ್ನು ನಡೆಸಲು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ
Appeal to the Chief Minister demanding a fresh caste survey
ಗದಗ : ಸನ್ಮಾನ್ಯ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಆಯೋಗವು ನಡೆಸಿರುವ ಒಳಮೀಸಲಾತಿ ಸಮೀಕ್ಷೆಯು ಅಪೂರ್ಣವಾಗಿದ್ದು, 40ಕ್ಕೂ ಲಕ್ಷ ಹೆಚ್ಚು ಜನರನ್ನು ಸಮೀಕ್ಷೆಯು ಒಳಗೊಂಡಿರುವುದಿಲ್ಲ. ಅಲ್ಲದೇ ಗಣತಿದಾರರಿಗೆ ಗುರುತಿನ ಚೀಟಿ ನೀಡದ ಕಾರಣ ಗಣತಿದಾರರ ಪರವಾಗಿ ಬೇರೆಯವರು ಸಮೀಕ್ಷೆ ಕೈಗೊಂಡಿದ್ದು, ತರಬೇತಿ ಇಲ್ಲದೇ ಬಲಗೈ/ಹೊಲೆಯ/ಛಲವಾದಿ ಸಮುದಾಯದ ಬದಲು ಬೇರೆ ಜಾತಿಯನ್ನು ನಮೂದಿಸಿರುವುದು ಚಿತ್ರದುರ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಕಂಡು ಬಂದಿರುತ್ತದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇಕಡ 40ರಷ್ಟು ಸಮೀಕ್ಷೆಯಾಗದೇ ಇರುವುದನ್ನು ಮರೆ ಮಾಚಲು ಆಯೋಗವು ಕಡಿಠಜಛಿಣಜಜ ಕಠಣಟಚಿಣಠ ಜನಸಂಖ್ಯೆಯನ್ನು 1.47ಕೋಟಿಯ ಬದಲು 1.16ಕೋಟಿಗಳಿಗೆ ಮಿತಿಗೊಳಿಸಿದ್ದು, ಕೇವಲ 1.05ಕೋಟಿಗಳ ಜನ ಸಂಖ್ಯೆಯನ್ನು ಮಾತ್ರ ಸರ್ವೆ ಮಾಡಿರುತ್ತದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಅವೈಜ್ಞಾನಿಕ, ಅಪೂರ್ಣ, ದುರುದ್ದೇಶ ಪೂರಿತ ಶಿಫಾರಸ್ಸುಗಳು ಬಲಗೈ/ಹೊಲೆಯ/ಛಲವಾದಿ ಜಾತಿಗಳಿಗೆ ಅನ್ಯಾಯವಾಗುವಂತೆ ನೀಡಿರುವ ವರದಿಯನ್ನು ತಿರಸ್ಕರಿಸಿ ಹೊಸದಾಗಿ ಜಾತಿ ಸಮೀಕ್ಷೆಯನ್ನು ನಡೆಸಲು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಗದಗ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ಬಲಗೈ ಚಾತಿಗಳ ಒಕ್ಕೂಟ ಬೆಂಗಳೂ ರ ಮತ್ತು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ದಿ ಸಂಘ ರಾಜ್ಯ ಸಮಿತಿ ಆದೇಶದ ಮೇರೆಗೆ ಜಿಲ್ಲಾ ಘಟಕ ಅಧ್ಯಕ್ಷರಾದ ಮಂಜುನಾಥ ಎಸ್ ಲಿಂಗದಾಳ ಮತ್ತು ಬಸವರಾಜ ಮಂಜುನಾಥ ಚಲವಾದಿ.ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಿದರು. ಬಸವರಾಜ ಹುಣಸೀಮರದ ಶಿವಾನಂದ ಸಿಂಗಾಡಿ.ಸಂತೋಷ ಕಲ್ಯಾಣ್ ಉಮೇಶ ಚಲವಾದಿ ಬಸವರಾಜ ಮೀಶನ್ನವರ ಮಲ್ಲಿಕಾರ್ಜುನ ಕನಕಮ್ಮನವರ ಲೊಹಿತ್ ಬಿಳೆಯಲಿ ವಿಜಯಲಕ್ಷ್ಮೀ ಚಲವಾದಿ ವೀರೇಶ ಚಲವಾದಿ ಮುಂತಾದವರು ಉಪಸ್ಥಿರಿದ್ದರು
ರಾಜ್ಯ ಸರ್ಕಾರವು ದಿನಾಂಕ: 03.12.2024ರಂದು ಆಯೋಗಕ್ಕೆ ನೀಡಿರುವ ನಿಂಬಂಧನೆಗಳಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಸಮಾನ ಜಾತಿಯ ಉಪ ಜಾತಿಗಳ ಗುಂಪುಗಳನ್ನು ಒಟ್ಟುಗೂಡಿಸಲು ಸೂಚಿಸಿದ್ದರೂ, ಆಯೋಗವು “ಪ್ರವರ್ಗ-ಎ ಗುಂಪನ್ನು ಸೃಜನೆ” ಮಾಡಿ ನಬಂಧನೆಗಳಿಗೆ ವಿರುದ್ಧವಾಗಿ ಎಲ್ಲಾ ವರ್ಗದ ಜನರನ್ನು ಸೇರೆ್ಡ ಮಾಡಿದ್ದು ಇದರಲ್ಲಿ 1,38,653 ಬಲಗೈ/ಹೊಲೆಯ/ಛಲವಾದಿ ಸಂಬಂಧಿತ ಜಾತಿಗಳನ್ನು ಸೇರೆ್ಡಗೊಳಿಸುವುದರ ಮೂಲಕ ಹೊಲೆಯರ ಜನಸಂಖ್ಯೆಯನ್ನು ವಿಭಜಿಸಿ ಕಡಿಮೆ ಮಾಡಿ ತೋರಿಸಲಾಗಿದೆ.
ಅಲ್ಲದೇ ಆದಿ-ಕರ್ನಾಟಕ, ಆದಿ-ದ್ರಾವಿಡ, ಆದಿ-ಆಂದ್ರ ಜಾತಿಗಳಲ್ಲದೇ ಇದ್ದರೂ ಜಾತಿಗಳಿಗೆ ನಗದಿಪಡಿಸುವ ಮೀಸಲಾತಿಯನ್ನು ಜಾತಿಗಳ ಗುಂಪುಗಳಿಗೆ ಶೇಕಡ 1ರಷ್ಟು. ಮೀಸಲಾತಿಯನ್ನು ನಿಗದಿಪಡಿಸಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ 4,74,954 ಬಲಗೈ ಜನರನ್ನು ಪ್ರತ್ಯೇಕಗೊಳಿ ಒಟ್ಟಾರೆ ಜನ ಸಂಖ್ಯೆಯಲ್ಲಿ ಬಲಗೈ ಜನ ಸಂಖ್ಯೆ ಕಡಿಮೆಯಾಗುವಂತೆ ವರದಿ ಮಾಡಲಾಗಿದೆ.
ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ 2,58,954 ಜನರಾದ ಹಲ್ಸಾರ್ ಹಸ್ಲಾ ಮೊಗೆರಾ, ಪರೈಯ್ಯ ಪರಯನ್ ಜನರನ್ನು ಮಾದಿಗೆ ಸಮುದಾಯಕ್ಕೆ ಸೇರಿಸಿ ಹೊಲೆಯ ಸಮುದಾಯದ ಜನ ಸಂಖ್ಯೆ ಕಡಿಮೆಯಾಗುವಂತೆ ಉದ್ದೇಶ ಪೂರ್ವಕವಾಗಿ ಮಾಡಲಾಗಿದೆ.
ಕುಲಶಾಸ್ತ್ರೀಯ ಅಧ್ಯಾಯನವಿಲ್ಲದೇ ಯಾವುದೇ ಜಾತಿಗಳನ್ನು ಮತ್ತೊಂದು ಜಾತಿಗೆ ಸೇರೆ್ಡ ಮಾಡಲು ಅವಕಾಶವಿಲ್ಲದೇ ಇದ್ದರೂ, ಈ ಬಗ್ಗೆ ಶ್ರೀಯುತ ಇಜರಚಿಡಿ ಖಿಣಢಿಣಠ ಮತ್ತು ಏ ಖಚಿಟಿರಚಿಛಿಚಿಡಿ “ಅಛಿಣಜ ಚಿಟಿಜ ಖಿಡಿಛ ಠ ಖಠಣಜಡಿಟಿ ಋಜಚಿ” ಶ್ರೀಯುತ ಹಯವದನರಾವ್ ರವರು ಸಂಪಾದಿಸಿರುವ 1927ರ ಒಥಿಠಜ ಉಚಿದಜಣಣಜಜಡಿ ನಲ್ಲಿ ನಮೂದಿಸಿದ್ದರೂ, ಸದರಿ ಐತಿಹಾಸಿಕ ಸತ್ಯಗಳನ್ನು ಮರೆಮಾಚಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ದುರುದ್ದೇಶ ಪೂರ್ವಕವಾಗಿ ಪರಿಶಿಷ್ಟ ಜಾತಿಯ ಬಲಗೈಗೆ ಸೇರಿದ ಹಲವು ಜಾತಿಗಳನ್ನು ವಿಂಗಡಿಸಿ ಮಾದಿಗ ಸಮುದಾಯಕ್ಕೆ ಸೇರೆ್ಡಗೊಳಿಸಿರುವುದು.
ಪ್ರವರ್ಗ-ಎ ಗುಂಪಿಗೆ ಸೇರೆ್ಡ ಮಾಡಿರುವುದು, ಜಾತಿಗಳಲ್ಲದ ಆದಿ-ಕರ್ನಾಟಕ, ಆದಿ-ದ್ರಾವಿಡ, ಆದಿ-ಅಂದ ಗುಂಪುಗಳಾಗಿ ವಿಂಗಡಿಸಿರುವುದು ಅಕ್ರಮ, ಅನ್ಯಾಯ, ಕಾನೂನು ಭಾಹಿರ ಹಾಗೂ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಸರ್ಕಾರದ ನಬಂಧನೆಗಳನ್ನು ಉಲ್ಲಂಘಿಸಿ ವರದಿ ನಡಿರುವುದರಿಂದ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟವು ಈ ಕೆಳಕಂಡಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತದೆ.
1. ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ದಿನಾಂಕ: 04.08.2025ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯು ಅವೈಜ್ಞಾನಿಕ, ಅಪೂರ್ಣ, ದುರುದ್ದೇಶ ಪೂರಿತ, ಸರ್ಕಾರದ ನಿಬಂಧನೆಗಳ ಉಲ್ಲಂಘನೆ ಹಾಗೂ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸ್ಸುಗಳಾಗಿರುವುದರಿಂದ ಸದರಿ ವರದಿಯನ್ನು ತಿರಸ್ಕರಿಸಿ ನಿರ್ಣಯ ಕೈಗೊಂಡಿದ್ದು, ಸದರಿ ನಿರ್ಣಯವನ್ನು ಸರ್ಕಾರವು ಗೌರವಿಸುವುದು.
2. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ರೀತಿಯಲ್ಲಿ ಸರ್ಕಾರವು ದಿನಾಂಕ: 16.08.2025ರಂದು ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ವರದಿಯನ್ನು ಅಂಗೀಕರಿಸಿದ್ದಲ್ಲಿ ಅದರ ಪರಿಣಾಮವನ್ನು ರಾಜ್ಯ ಸರ್ಕಾರ, ಪರಿಶಿಷ್ಟ ಜಾತಿಯ ಸಚಿವರು ಮತ್ತು ಶಾಸಕರು ಎದುರಿಸಬೇಕಾಗುತ್ತದೆ ಎಂದು ಈ ಮೂಲಕ ವಿನಮ್ರವಾಗಿ ಎಚ್ಚರಿಸುತ್ತದೆ.
3. ಸಚಿವ ಸಂಪುಟವು ಏನಾದರೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ವರದಿಯನ್ನು ಅಂಗೀಕರಿಸಿದ್ದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಸಚಿವರು ಕಾಂಗ್ರೇಸ್ ಪಕ್ಷದ ಎಲ್ಲಾ ಶಾಸಕರು ರಾಜೀನಾಮೆ ಕೊಡುವವರೆವಿಗೂ ಬಲಗೈ ಸಮುದಾಯ ಉಗ್ರ ಹೋರಾಟವನ್ನು ರೂಪಿಸುತ್ತದೆ ಎಂದು ಈ ಮೂಲಕ ತಿಳಿಸುತ್ತದೆ.ಮನವಿ ಮಾಡಿದರು ಬಸವರಾಜ ಹುಣಸೀಮರದ ಶಿವಾನಂದ ಸಿಂಗಾಡಿ.ಸಂತೋಷ ಕಲ್ಯಾಣ್ ಉಮೇಶ ಚಲವಾದಿ ಬಸವರಾಜ ಮೀಶನ್ನವರ ಮಲ್ಲಿಕಾರ್ಜುನ ಕನಕಮ್ಮನವರ ಲೊಹಿತ್ ಬಿಳೆಯಲಿ ವಿಜಯಲಕ್ಷ್ಮೀ ಚಲವಾದಿ ವೀರೇಶ ಚಲವಾದಿ ಮುಂತಾದವರು ಉಪಸ್ಥಿರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 