ಅನಧಿಕೃತ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕಾಗ್ರಹಿಸಿ ಮನವಿ

ಅನಧಿಕೃತ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕಾಗ್ರಹಿಸಿ ಮನವಿ Appeal to take action against officials who assisted in the construction of unauthorized commercial

ಗದಗ 15:-  ಅವಳಿ ನಗರವಾದ ಗದಗ - ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪಂಚರ ಹೊಂಡ ಹತ್ತಿರದ ಪಟೇಲ್ ರಸ್ತೆಯ ಬಿ ಎಸ್ ಏನ್ ಎಲ್ ಕಚೇರಿಯ ಎದುರಿಗೆ (ಮಹದೇವ್ ಮೆಡಿಕಲ್ ಎದುರಿಗೆ)  ಬಿ ಎಸ್ ಏನ್ ಎಲ್ ಕಚೇರಿಯಿಂದ ಬನ್ನೀ ಕಟ್ಟೆ ಭೀಷ್ಮ ಕೆರೆಗೆ ಸಂಪರ್ಕ ಕಲ್ಪಿಸಿಕೊಡುವ ಪ್ರಮುಖ ರಸ್ತೆಯನ್ನು ಹೊಂದಿಕೊಂಡಿರುವ ಕಾರ್ನಾರ್ ನಲ್ಲಿ  ಸೀಟಿ ಸರ್ವೆ ನಂಬರ 3760/ಬ ರಲ್ಲಿ ನಗರಸಭೆಯ ಗಟಾರ ಮೇಲೆಯೇ ಅನಧಿಕೃತ ಹಾಗೂ ಅತಿಕ್ರಮಣದೊಂದಿಗೆ ಕಟ್ಟಡ ನಿರ್ಮಾಣವಾಗುತ್ತಿರುವ ಕುರಿತು ಅಗತ್ಯ ಕ್ರಮಕ್ಕಾಗಿ ಆಗ್ರಹಿಸಿ ನಗರಸಭೆಯ ಪೌರಾಯುಕ್ತರಿಗೆ ದಿನಾಂಕ 09/05/2025 ರಂದು ಲಿಖಿತ ಮನವಿ ಸಲ್ಲಿಸಲಾಗಿತ್ತು. ಸದರ ಮನವಿಯಂತೆ  ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರು ಸಂಬಂಧಪಟ್ಟ ನಿವೇಶನದ ಮಾಲೀಕರಿಗೆ ದಿನಾಂಕ 29/05/2025 ರಂದು ಅಧಿಕೃತವಾಗಿ, ಅಕ್ರಮವಾಗಿ, ಹಾಗೂ ಅತಿಕ್ರಮಣದೊಂದಿಗೆ ನಿರ್ಮಿಸಲಾದ ಕಟ್ಟಡವನ್ನು ತೆರವುಗೊಳಿಸಿ ಫೋಟೋ ಸಹಿತವಾಗಿ ತೆರವುಗೊಳಿಸಿದ ವರದಿಯನ್ನು ಸಲ್ಲಿಸಲು ನಿರ್ದೇಶನ ನೀಡಲಾಗಿತ್ತು. ಆದರೆ ನಗರಸಭೆಯ ಪೌರಾಯುಕ್ತರು ನೀಡಿರುವ ಅಂತಿಮ ನೋಟೀಸ್ ಅವಧಿ ಈಗ ಇಂದಿಗೆ 45 ದಿನಗಳನ್ನು ಪೂರೈಸಿರುತ್ತದೆ.  

ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ನಿವೇಶನದಲ್ಲಿ ನಿರ್ಮಾಣವಾಗುವ ಕಟ್ಟಡ ಹಾಗೂ ವಾಣಿಜ್ಯ ಉಪಯೋಗಿ ಬಹುಮಹಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಾಗಿ ನೀಡಲಾಗುವ ಪರವಾನಗಿ ಹುಕುಂ ಪ್ರಕ್ರಿಯೆಯನ್ನು ನಗರಸಭೆಯ  ಸಂಬಂಧಪಟ್ಟ ಅಧಿಕಾರಿಗಳು ಭ್ರಷ್ಟಾಚಾರ, ಲಂಚಗುಳಿತನ, ಬ್ರಹತ್ ಅವ್ಯವಹಾರ ನಡೆದಿರುವದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಕಾರಣ ಸದರ ನಿವೇಶನದ ಮಾಲೀಕರು ವಾಣಿಜ್ಯ ಕಟ್ಟಡ ನಿರ್ಮಾಣಕ್ಕಾಗಿ ಹಲವಾರು ಇಲಾಖೆಗಳ ನಿರಪೇಕ್ಷಣ ಪತ್ರ ದೊಂದಿಗೆ ನಿಗದಿ ಪಡಿಸಿದ ಅರ್ಜಿ ಶುಲ್ಕದೊಂದಿಗೆ ಪೌರಾಯುಕ್ತರಿಗೆ ಅರ್ಜಿ ಸಲ್ಲಿಸಬೇಕು ಆದರೆ  ಸನ್ 2018 ರಲ್ಲಿ ನಗರಸಭೆಗೆ ಅರ್ಜಿ ಸಲ್ಲಿಸಿ 2018-19 ನೇ ಸಾಲಿನ ಒಂದು ವರ್ಷದ ಅವಧಿಯ ಕಟ್ಟಡ ನಿರ್ಮಾಣ ಪರವಾನಗಿ ಹುಕುಂ ಪಡೆದಿದ್ದು, ನಂತರ 2019-20, 2020-21, 2021-22, 2022-23 ರ ಅವಧಿಯಲ್ಲಿ ಸದರ ಪರವಾನಗಿಯನ್ನು ನವೀಕರಣ ಮಾಡಿರುವುದಿಲ್ಲ ಆದರೂ ಆಶ್ಚರ್ಯಕರವೆಂಬಂತೆ ಕರ್ನಾಟಕ ಮುನ್ಸಿಪಾಲ್ಟಿ ಕಾಯ್ದೆ1964 ರ ನಿಬಂಧನೆಗಳ  ಅಡಿಯಲ್ಲಿ ಒಂದು ವರ್ಷದ ಅವಧಿಗಾಗಿ ಮಾತ್ರ ಕಟ್ಟಡ ನಿರ್ಮಾಣ ಕಾಮಗಾರಿ ಪರವಾನಗಿ ಹುಕುಂ ನೀಡಬಹುದಾಗಿದೆ ಆದರೆ ನಗರಸಭೆಯಿಂದ ಸನ್ 2023-25 ರ ಎರಡು ವರ್ಷಗಳ ಅವಧಿಯ ನವೀಕರಣ ಒಂದೇ ಬಾರಿ ಮಾಡಲಾಗಿರುವದು ಭ್ರಷ್ಟಾಚಾರ ನಡೆದಿರುವ ಕುರಿತು ಕೈಗನ್ನಡಿಯಾಗಿರುತ್ತದೆ. 

ಆದುದರಿಂದ  ಸದರ ಅನಧಿಕೃತ, ಅಕ್ರಮ, ಅತಿಕ್ರಮಣ ಹಾಗೂ ಕಾನೂನು ಬಾಹೀರವಾಗಿ ನಿರ್ಮಿಸಲಾದ ಕಟ್ಟಡದ ಕುರಿತು ಹಾಗೂ ಸದರ ಅಕ್ರಮ ಹಾಗೂ ಕಾನೂನುಬಾಹೀರವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಅನುವು ಮಾಡಿಕೊಟ್ಟ ಇಲಾಖೆಯ ಭ್ರಷ್ಟ ಅಧಿಕಾರಿಗಳು ಮತ್ತು ನಿವೇಶನ ಮಾಲೀಕರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಿ ಅವಳಿ ನಗರದ ನಾಗರಿಕರಿಗೆ ನ್ಯಾಯ ಒದಗಿಸಿಕೊಡಬೇಕು. ಎಂದು ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಗದಗ ಬೆಟಗೇರಿ ನಗರಸಭೆಯ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.