ಸರ್ಕಾರಿ ಗೋಶಾಲೆ ಪ್ರಾರಂಭಿಸಲು ಮನವಿ
Appeal to start government cow shelter
ಜಮಖಂಡಿ 05: ನಗರದಲ್ಲಿ ಸರ್ಕಾರದಿಂದ ಗೋಶಾಲೆಯನ್ನು ಪ್ರಾರಂಭಿಸುವಂತೆ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಪೌರಾಯುಕ್ತ ಜ್ಯೋತಿ ಗೀರೀಶ, ಅವರಿಗೆ ಮನವಿ ಸಲ್ಲಿಸಿದರು.
ಓಲೆಮಠದ ಆನಂದ ದೇವರು ಮಾತನಾಡಿ, ನಗರದಲ್ಲಿ ತರಕಾರಿ ಮಾರಾಟ ಮಾಡಿ ಉಳಿದಿರುವ ತರಕಾರಿಯನ್ನು ರಸ್ತೆಯ ಮೇಲೆ ಎಸೆದು ಹೋಗುತ್ತಾರೆ. ಬಿದ್ದಿರುವ ತರಕಾರಿಗಳನ್ನು ತಿನ್ನಲು ದನ, ಕರಗಳು ಬರುತ್ತವೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ನಮ್ಮ ಸುತ್ತಮುತ್ತಲಿನ ತಾಲೂಕಿನಲ್ಲಿ ಗೋಶಾಲೆ ಇಲ್ಲವಾದ್ದರಿಂದ ನಗರದಲ್ಲಿ ಗೋಶಾಲೆ ನಿರ್ಮಾಣ ಮಾಡಲೇಬೇಕು ಎಂದು ಮನವಿ ಮಾಡಿದರು.
ನಾಗರಿಕ ಹಿತರಕ್ಷಣ ಸಂಘ, ಲೈನ್ಸ್ ಸೇವಾ ಸಂಸ್ಥೆ, ಸಿವಿಲ್ ಇಂಜಿನಿಯರ್ ಅಸೋಸಿಯನ್, ಸ್ತ್ರೀ ಶಕ್ತಿ ಸಂಘ, ಶ್ರೀ ಬಸವೇಶ್ವರ ವ್ಯಾಪಾರಸ್ಥರ ಸಂಘ, ಶ್ವೇತಾಂಬರ ಜೈನ ಟ್ರಸ್ಟ್, ತಾಲೂಕ ಬ್ರಾಹ್ಮಣ ಸಂಘ, ಭಾರತೀಯ ಸ್ವರಾಜ್ಯ ಸಂಸ್ಥೆ, ರಾಮತೀರ್ಥ ರೋಟರಿ ಸಂಸ್ಥೆ, ಮಹೇಶ್ವರಿ ಮಹಿಳಾ ಮಂಡಲ, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಬಸವ ಗ್ರಾಮೀಣ ಅಭಿವೃದ್ಧಿ ಸಂಘ ಕಡಪಟ್ಟಿ ಮುಂತಾದ ಸಂಘಟನೆಗಳ ಪದಾಧಿಕಾರಿಗಳಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 