ವಿದ್ಯುತ್ ಸಂಪರ್ಕ ಪಡೆಯಲು ಆಗುತ್ತಿರುವ ತೊಂದರೆ ಪರಿಹರಿಸಲು ಮನವಿ

ವಿದ್ಯುತ್ ಸಂಪರ್ಕ ಪಡೆಯಲು ಆಗುತ್ತಿರುವ ತೊಂದರೆ ಪರಿಹರಿಸಲು ಮನವಿ Appeal to resolve the problem of getting electricity connection

ವಿದ್ಯುತ್ ಸಂಪರ್ಕ ಪಡೆಯಲು ಆಗುತ್ತಿರುವ ತೊಂದರೆ ಪರಿಹರಿಸಲು ಮನವಿ 

ವಿಜಯಪುರ 05: ಕರ್ನಾಟಕ ರಾಜ್ಯದಲ್ಲಿ ಯಾವುದೇ ತರಹದ ವಿದ್ಯುತ್ ಸಂಪರ್ಕವನ್ನು 4 ರಿಂದ ನೀಡದೆ ನೂತನ ಹಾಗೂ ಈ ಹಿಂದೆ ಅರ್ಜಿ ಸಲ್ಲಿಸಿದ್ದ ವಿದ್ಯುತ್ ಗ್ರಾಹಕರುಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ತೊಂದರೆಯಾಗುತ್ತಿರುವುದನ್ನು ಬಗೆ ಹರಿಸುವಂತೆ ರೈತ ಭಾರತ ಪಕ್ಷ (ರಿ) ಕರ್ನಾಟಕ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಅವರ ಮೂಲಕ ಮುಖ್ಯಮಂತ್ರಿ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ರೈತ ಭಾರತ ಪಕ್ಷ (ರಿ) ಕರ್ನಾಟಕ  ರಾಜ್ಯಾಧ್ಯಕ್ಷ  ಮಲ್ಲಿಕಾರ್ಜುನ ಬಿ. ಕೆಂಗನಾಳ ಮಾತನಾಡಿ, ದಿ. 17-12-2024 ರ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಮ್ಮ ರಾಜ್ಯದಲ್ಲಿ ಮಾತ್ರ ಒ.ಸಿ. ಮತ್ತು ಸಿ.ಸಿ. ಕಡ್ಡಾಯ ಮಾಡಿ ದಿ. 04-04-2025 ರಿಂದ ಯಾವುದೇ ತರಹದ ವಿದ್ಯುತ್ ಸಂಪರ್ಕ ನೀಡದೆ ಕರ್ನಾಟಕ ಜನತೆಗೆ ತೊಂದರೆ ನೀಡುತ್ತಿರುವುದರ ಬಗ್ಗೆ, ಈ ಸಂಬಂಧ ವಿಧಾನಸೌಧ ಮತ್ತು ವಿಧಾನ ಪರಿಷತ್ ನಲ್ಲಿ ಕೂಡ ಚರ್ಚೆಯಾಗಿರುತ್ತದೆ. ಇದರ ಬಗ್ಗೆ ತಾವುಗಳು ಸಾರ್ವಜನಿಕರಿಗೆ ಹಾಗೂ ಘನ ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಿ ಸೂಕ್ತ ಕ್ರಮ ತೆಗೆದುಕೊಂಡು ಆದಷ್ಟು ಬೇಗನೆ ವಿಯುತ್ ಸಂಪರ್ಕ ಕಲ್ಪಿಸಲು ಆದೇಶ ನೀಡಬೇಕೆಂದು ಎಂದರು. 

ಎಲ್ಲಾ ಹೆಸಾ ವಿದ್ಯುತ್ ಕಂಪನಿಗಳು ಇಲಾಖೆಗೆ ಹಣ ಕಟ್ಟಿಸಿಕೊಂಡು , ಮಾಪಕಗಳನ್ನು ಖರೀದಿಸಿ, ಅಳವಡಿಸಿಕೊಳ್ಳಲು ಆದೇಶ ನೀಡಿ, ವಿದ್ಯುತ್ ಮಂಜೂರಾತಿ ನೀಡಿ, ವಿದ್ಯುತ್ ಕಾರ್ಯಾದೇಶ ನೀಡಿ, ಕೆಲವೊಂದು ಕಡತಗಗಳಿಗೆ ವಿದ್ಯುತ್ ಮಂಜೂರಾತಿಯಾಗಿದ್ದರೂ ಹಣ ಕಟ್ಟಿಸಿಕೊಳ್ಳದೆ ಸುಮಾರು 5 ಲಕ್ಷಕ್ಕೂ ಹೆಚ್ಚು ಕಡತಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಗ್ರಾಹರುಗಳಿಗೆ ತೊಂದರೆ ನೀಡಿರುತ್ತಾರೆ. 

15.03.2025 ರಂದು ಕೆ.ಇ.ಆರ್‌.ಸಿ. ಯವರು ಒಂದು ಸುತ್ತೋಲೆಯನ್ನು ಹೊರಡಿಸಿ ಎಸ್ಕಾಂ ಕಂಪನಿಗಳು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಿಯಮ ಪಾಲಿಸುವಂತೆ ಪತ್ರ ವ್ಯವಹರಿಸಿದರು. ಅದರಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು 13-05-2025 ಸುತ್ತೋಲೆ ಹೊರಡಿಸಿ, ಎಸ್ಕಾಂ ಕಂಪನಿಗಳು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಿಯಮ ಪಾಲಿಸುವಂತೆ ಪತ್ರ ವ್ಯವಹರಿಸಿದರು. 

ಗ್ರಾಹಕರು ತಮ್ಮಗಳ ವಿದ್ಯುತ್ ಸಂಪರ್ಕಕ್ಕಾಗಿ ಈ ಹಿಂದೆಯಿದ್ದ ಕೆ.ಇ.ಆರ್‌.ಸಿ. ನಿಯಮವನ್ನು ಪಾಲಿಸಿ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಆದರೆ, ಗ್ರಾಹಕರಿಗೆ ಮೇಲೆ ತಿಳಿಸಿದಂತೆ ವಿದ್ಯುತ್ ಸಂಪರ್ಖ ನೀಡದೆ ಅನವಶ್ಯಕವಾಗಿ ತೊಂದರೆ ನೀಡಿದ್ದಾರೆ. 

ಖಾವಂಧರಾದ ತಾವುಗಳು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು, ದೀನದಲಿತರ ನಾಯಕರು, ಅಲ್ಪಸಂಖ್ಯಾತರ ಅಲ್ಪಸಂಖ್ಯಾತರ ಬೆನ್ನೆಲುಬಾಗಿ ನಿಂತಿರುವ ಹಾಗೂ 5 ಯಶಸ್ವಿ ಉಚಿತ ಯೋಜನೆಗಳ ರೂವಾರಿಗಳು ಆಗಿರುವ ತಾವುಗಳು, ವಿದ್ಯುತ್ ಸಂಪರ್ಕ ನೀಡದೆ 6ನೇ ಕತ್ತಲೆ ಭಾಗ್ಯ  ನೀಡುವಂತೆ ಮಾಡಿರುವುದನ್ನು ಜನರು ತಮ್ಮ ಸರ್ಕಾರದ ಸುತ್ತೋಲೆ ಹೊರಡಿಸಿ ಆದಷ್ಟು ಶೀಘ್ರವಾಗಿ 13-05-2025 ರ ಹಿಂದೆ ತಾತ್ಕಾಲಿಕ ವಿದ್ಯುತ್ ಸಂಪರ್ಕ, ಹೊಸ ವಿದ್ಯುತ್ ಸಂಪರ್ಕ ಪಡೆಯಲು ನೋಂದಾಯಿಸಿದ್ದು ಎಲ್ಲಾ ತರಹದ ಅರ್ಜಿಗಳಿಗೆ ಒಂದು ಗಡುವು ನೀಡಿ ವಿನಾಃಕಾರಣ ವಿಳಂಬ ಹಾಗೂ ತೊಂದರೆಗೊಳಗಾಗಿರುವ ಗ್ರಾಹಕರ ವಾಸದ ಮನೆ, ಸರ್ಣಣ ಕೈಗಾರಿಕೆ ,ಬೃಹತ್ ಕೈಗಾರಿಕೆ, ವಾಣಿಜ್ಯ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. 

ಒಂದು ವೇಳೆ ಇದರ ಬಗ್ಗೆ ತಾವುಗಳು ನಿರ್ಲಕ್ಷ್ಯ ತೋರಿದಲ್ಲಿ ರಾಜ್ಯಾದ್ಯಂತ ಎಲ್ಲಾ ವಿದ್ಯುತ್ ಗುತಿಗೆದಾರರಿಂದ, ಕಾರ್ಮಿಕರಿಂದ , ವಿದ್ಯುತ್ ಸಂಪರ್ಕ ವಂಚಿತರಾಗಿರುವ ಗ್ರಾಹಕರಿಂದ, ಕನ್ನಡ ಪರ ಸಂಘಟನೆಗಳಿಂದ, ಎಫ್‌.ಕೆ. ಸಿ.ಸಿ.ಐ ಯಿಂದ ಕಾಸಿಯಾನಿಂದ ಪಿಐಎ ನಿಂದ ಮತ್ತು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಎಸ್‌.ಸಿ ಎಸ್ಟಿ ಸಂಘಟನೆಗಳಿಂದ ಉಗ್ರವಾದ ಹೋರಾಟವನ್ನು ವಿಧಾನಸೌಧ ಚಲೋ ಆಂದೋಲನ ಹಮ್ಮಿಕೊಳ್ಳಬೇಕಾಗುತ್ತದೆ. ಆದುದರಿಂದ ಆವುಗಳು ಆಸ್ಪದ ನೀಡದೆ ನಮ್ಮ ಮನವಿಯನ್ನು ಕೂಡಲೇ ಪುಸ್ಕರಿಸಬೇಕು ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ  ಅಂಬಾಜಿ ನಾರಾಯಣಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.