ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲು ಮನವಿ
Appeal to reserve land for construction of community hall
ತಾಳಿಕೋಟಿ 08: ಪಟ್ಟಣದಲ್ಲಿರುವ ಸಿ.ಸ.ಸಂಖ್ಯೆ 2890 ಸರಕಾರಿ ಜಾಗೆಯನ್ನು ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ರವರ ಸಮುದಾಯ ಭವನಕ್ಕೆ ಕಾಯ್ದಿರಿಸಿ ಭವನವನ್ನು ನಿರ್ಮಾಣ ಮಾಡಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಜಾಂಭವ ಯುವ ಸೇನಾ(ರಿ) ತಾಳಿಕೋಟಿ ತಾಲೂಕ ಸಮಿತಿಯ ಪದಾಧಿಕಾರಿಗಳು ಸೋಮವಾರ ಪುರಸಭೆ ಕಂದಾಯ ನೀರೀಕ್ಷಕ ಸುರೇಶ ಅಮರಣ್ಣನವರ ಮೂಲಕ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ತಾಳಿಕೋಟಿ ಪಟ್ಟಣ ಹಾಗೂ ತಾಲೂಕಿನ ಸಮೀಪದ ಗ್ರಾಮಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಮುದಾಯದ ಬಡ ಹಿಂದುಳಿದ ಜನರು ಇದ್ದು ಅವರಿಗೆ ಸಮುದಾಯದ ಸಂಸ್ಕೃತಿಕ ಹಾಗೂ ಸಭೆ ಸಮಾರಂಭಗಳನ್ನು ನಡೆಸಲು ಸ್ಥಳದ ತೀವ್ರ ತೊಂದರೆಯಿದ್ದು ಈ ಸಮುದಾಯಕ್ಕೆ ಒಂದು ಸಮುದಾಯ ಭವನವನ್ನು ನಿರ್ಮಾಣ ಮಾಡಲು ಪಟ್ಟಣದಲ್ಲಿರುವ ಸಿಟಿಎಸ್ ನಂಬರ್ 28 90ರ ಸರ್ವೇ ಜಾಗೇಯನ್ನು ಡಾ.ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಹೆಸರಿನಲ್ಲಿ ಸದರಿ ನಿವೇಶನವನ್ನು ಕಾಯ್ದಿರಿಸಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರಲ್ಲಿ ವಿನಂತಿ ಪೂರ್ವಕವಾಗಿ ಕೇಳಿಕೊಳ್ಳುತ್ತೇವೆ ಎಂದು ತಿಳಿಸಲಾಗಿದೆ.
ಈ ಸಮಯದಲ್ಲಿ ಜಾಂಬವ ಯುವ ಸೇನಾ ಸಮಿತಿ ತಾಲೂಕ ಅಧ್ಯಕ್ಷ ಕಾಲಪ್ಪ ಮಾದರ, ಉಪಾಧ್ಯಕ್ಷ ಗೀರೀಶ ಕಟ್ಟಿಮನಿ, ಕಾರ್ಯದರ್ಶಿ ಕಾಶಿನಾಥ ಮಾದರ, ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಜಾಂಭವ ಯುವ ಸೇನೆ ಪದಾಧಿಕಾರಿಗಳಾದ ರಾಘವೇಂದ್ರ ಬಾನಾಳ, ಬಸವರಾಜ ಮಾದರ, ಮಹದೇವ ನಾಗೂರ, ಮತ್ತಿತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 