ವಾಹನ ಸಾವರರಿಗೆ ಕಂಟಕವಾಗಿರುವ ರೈಲ್ವೆ ಬಿಡ್ಜ್ ನ ಮೇಲ್ ಸೇತುವೆ ದುರಸ್ತಿ ಮಾಡಲು ಮನವಿ
Appeal to repair the railway bridge overpass, which is a hindrance to vehicle commuters
ಕೊಟ್ಟೂರು 09: ವಿಜಯನಗರ ಜಿಲ್ಲೆಯ ಕೊಟ್ಟೂರು ಪ್ರಮುಖ ತಾಲ್ಲೂಕು ಕೇಂದ್ರವಾಗಿದ್ದು, ತಾಲ್ಲೂಕು ಮತ್ತು ಸುತ್ತಮುತ್ತಲಿನ ಸರ್ವ ನಾಗರೀಕರ ಹೋರಾಟದ ಫಲವಾಗಿ ಕೊಟ್ಟೂರು ಹರಿಹರ ಹೊಸ ರೈಲು ಮಾರ್ಗ ಜೊತೆಗೆ ಹೊಸಪೇಟೆ ಹಿ ಕೊಟ್ಟೂರು -ಹರಿಹರ ಬ್ರಾಡ್ ಗೇಜ್ ರೈಲು ನಿರ್ಮಾಣಕ್ಕೆ ಅನೇಕ ಸಂಘ ಸಂಸ್ಥೆಗಳು ರೈತರು ಕಾರ್ಮಿಕರು ವ್ಯಾಪಾರಸ್ಥರು ಸೇರಿ ಭಾರತದ ಇತಿಹಾಸದಲ್ಲೇ ದೀರ್ಘ ಮತ್ತು ಸುದೀರ್ಘ ಉಪವಾಸ ಸತ್ಯಾಗ್ರಹ ನೆಡೆಸಿ ಅಂದಿನ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗಮನ ತಂದಾಗ, ಕೇಂದ ಹಾಗೂ ರಾಜ್ಯ ಸರ್ಕಾರಗಳು ಜಂಟಿ ಆರ್ಥಿಕ ಹುಡಿಕೆಯಲ್ಲಿ ಹೊಸ ಮಾರ್ಗವನ್ನು ಅಂದಿನ ಕೇಂದ್ರ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಉದ್ಘಾಟನೆಗೊಳಿಸಿ ಚಾಲನೆ ನೀಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ,
ಅದರೆ ಸದರಿ ರೈಲು ಮಾರ್ಗದಲ್ಲಿ ಅನೇಕ ನ್ಯೂನತೆಗಳಿದ್ದು, ಕೊಟ್ಟೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾದ ಇಟಿಗೆ ರಸ್ತೆಯ ರೈಲ್ವೆ ಮೇಲು ಸೇತುವೆ ಹಾಗೂ ದಾವಣಗೇರಿ ರಸ್ತೆಯ ಕೆ. ಅಯ್ಯನಹಳ್ಳಿ ಸಮೀಪ ಇರುವ ಮೇಲು ಸೇತುವೆ ಅತ್ಯಂತ ಕಿರಿದಾಗಿರುವುದಲ್ಲದೇ ಅವೈಜ್ಞಾನಿಕದಿಂದ ಕೂಡಿವೆ, ಈ ಮಾರ್ಗದಲ್ಲಿ ಚಲಿಸುವ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ ಹಾಗೂ ಎರಡೂ ಬದಿಯ ಚರಂಡಿಗಳು ಸಹ ಅವ್ಯವಸ್ಥೆಯಿಂದ ಕೂಡಿದ್ದು, ಸದಾ ಕಸ ಕಡ್ಡಿಯಿಂದ ತುಂಬಿರುತ್ತವೆ.
ಸ್ವಲ್ಪ ಮಳೆ ಬಂದರೂ ಸಹ ವಿಪರೀತಾ ನೀರು ನಿಂತು ವಾಹನ ಸಾವರರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಈ ರಸ್ತೆಗಳು ಕೊಟ್ಟೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾಗಿದ್ದು ಈ ಮಾರ್ಗದಿಂದಲೇ ಕೊಟ್ಟೂರಿನ ಎಂ.ಪಿ.ಎಂ.ಸಿ, ಮಾರುಕಟ್ಟೆ, ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಅಗಮಿಸುವ ಭಕ್ತಾಧಿಗಳು, ಹಾಗೂ ಕೊಟ್ಟೂರು ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದ್ದು, ಇದೇ ಮಾರ್ಗದಲ್ಲಿ ಬರುವ ಶಾಲಾ ವಿಧ್ಯಾರ್ಥಿಗಳ ವಾಹನಗಳಿಗೆ ಹಾಗೂ ಇತರೇ ವಾಹನಗಳು ಬ್ರಿಡ್ಜ್ ಕೆಳಗೆ ನೀರಿನ ಸಂಗ್ರಹದಿಂದ ಘಂಟೆ ಗಟ್ಟಲೇ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿ ಸಂಪರ್ಕ ಕಡಿತವಾಗುತಿದೆ ಅನೇಕ ವಾಹನ ಸವಾರರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದು, ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಅನೇಕರ ವಾದವಾಗಿದೆ,
ಅಲ್ಲದೇ ಬ್ರಿಡ್ಜ್ ಕೆಳಗೆ ಕಳಪೆ ಕಾಮಗಾರಿ ನಡೆದಿದು, ಎಲ್ಲಾ ಕಿತ್ತು ಹೋಗಿವೆ ಕೂಡಲೇ ಸರಿಪಡಿಸದಿದ್ದಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಹೋರಾಟ ಮಾಡುವುದಾಗಿ ಅನೇಕ ರೈತ ಪರ ಸಂಘಟನೆಗಳು, ಹಾಗೂ ಸಂಘ ಸಂಸ್ಥೆಗಳವರು ಎಚ್ಚರಿಕೆ ನೀಡಿವೆ ಅದರೂ ಯಾವುದಕ್ಕೂ ಡೋಟ್ ಕೇರ್ ತರ ವರ್ತನೆ ಮಾಡುತ್ತಿರುವ ಸಂಭಂಧಪಟ್ಟ ಇಲಾಖಾ ಆಧಿಕಾರಿಗಳ ಧೋರಣೆ ಮಾತ್ರ ಎಲ್ಲರ ಕಂಗಣ್ಣಿಗೆ ಗುರಿಯಾಗಿದೆ.
ಈ ಎರಡು ಪ್ರಮುಖ ರಸ್ತೆಗಳು ರಾಜ್ಯ ಪ್ರಮುಖ ಹೆದ್ದಾರಿಗಳಾಗಿದ್ದು , ಕೂಡಲೇ ಸರಿಪಡಿಸಿ ನಾಗರೀಕರಿಗೆ ಅನುಕೂಲ ಮಾಡಿಕೊಡುವವರೇ ಅಥವಾ ಇನ್ನೊಂದು ಹೋರಾಟ ನೆಡೆಸಿ ಸರ್ಕಾರಕ್ಕೆ ಛೀ ಮಾರಿ ಹಾಕುವುದನ್ನು ಅಧಿಕಾರಿಗಳು ತಪ್ಪಿಸುವರೇ ಎಂಬುದನ್ನು ಕಾದುನೋಡಬೇಕಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 