ರೈತರಿಗೆ ಸಮರ್ಕವಾಗಿ ಬೀಜ ರಸಗೊಬ್ಬರ ಪೂರೈಸುವಂತೆ ಮನವಿ
Appeal to provide seeds and fertilizers to farmers effectively
ಲಕ್ಷ್ಮೇಶ್ವರ 29: ರೈತರಿಗೆ ಮುಂಗಾರು ಬಿತ್ತನೆಗೆ ಬೇಕಾಗುವ ರಸ ಗೊಬ್ಬರ ಮತ್ತು ಬೀಜಗಳನ್ನು ಸರಿಯಾದ ರಿಯಾಯಿತಿ ದರದಲ್ಲಿ ಮತ್ತು ಎಲ್ಲ ರೈತರಿಗೂ ಪೂರೈಸುವಂತೆ ಕ್ರಮ ಕೈಗೊಳ್ಳಲು ತಹಶೀಲ್ದಾರ ಧನಂಜಯ ಎಂ ಮಾಲಗಿತ್ತಿ ಅವರಿಗೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ಮೋಹನ್ ನಂದೆಣ್ಣವರ ಅವರ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣ ರಂಜನ್ ಶೆಟ್ಟಿ ಅಣ್ಣನವರ ಸಾರಿಥ್ಯದಲ್ಲಿ ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ವಾಕ್ಯದಿಂದ ಪ್ರಾರಂಭಗೊಂಡ ಜಯ ಕರ್ನಾಟಕ ಜನಪರ ವೇದಿಕೆಯ ಸಂಘಟನ ರಾಜ್ಯ ಅಧ್ಯಕ್ಷರಾದ ಜೆ ಶ್ರೀನಿವಾಸ ರವರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಸಂಘಟನ ಕರ್ನಾಟಕ ರಾಜ್ಯಾದ್ಯಂತ ದಿನ್ ದಲಿತರ, ಬಡವರ, ರೈತರ, ಮಹಿಳೆಯರ, ಪರಿಸರ, ಅರಣ್ಯ ಸಂರಕ್ಷಣೆ ಹಾಗೂ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಮತ್ತು ಸರ್ಕಾರ ಹಾಗೂ ಜನ ಸಾಮಾನ್ಯರ ಮಧ್ಯದಲ್ಲಿ ಸೆತ್ತುವೆಯಾಗಿ ಕೆಲಸ ಮಾಡುತ್ತಿರುವ. ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಹಾಲಪ್ಪ ಈ ವರವಿ ಹಾಗೂ ಗದಗ ಜಿಲ್ಲೆಯ ಅಧ್ಯಕ್ಷರಾದ ಸಣ್ಣಯಲ್ಲಪ್ಪ ರಾ ವಳಗೇರಿ ಇವರ ಆದೇಶದ ಮೇರೆಗೆ ತಹಶೀಲ್ದಾರ ಸಾಹೇಬರಿಗೆ ಮುಂಗಾರು ಹಂಗಾಮ ಪ್ರಾರಂಭವಾಗಿದ್ದು ತಾಲೂಕಿನಲ್ಲಿ ಎಲ್ಲ ರೈತರಿಗೂ ಅನುಕೂಲವಾಗುವಂತೆ ರಸಗೊಬ್ಬರ ಬಿತ್ತನೆಗೆ ಬೇಕಾಗಿರುವಂತ ಬೀಜ ಮತ್ತು ರೈತರ ಅನುಕೂಲವಾಗುವಂತ ವಸ್ತುಗಳನ್ನು ಲೈಸೆನ್ಸ್ ದಾರರು ಅತೀ ಹೆಚ್ಚಿನ ಬೆಲೆಗೆ ಮಾರಾಟವನ್ನು ಮಾಡುತ್ತಿದ್ದಾರೆ. ಸದರಿ ಲೈಸೆನ್ಸ್ ದಾರರು ರಿಯಾಯಿತಿ ದರದಲ್ಲಿ ಮತ್ತು ಒಳ್ಳೆಯ ಗುಣಮಟ್ಟದ ರಸಗೊಬ್ಬರ ವನ್ನು ಪೊರೈಸಬೇಕೆಂದು ಹಾಗೂ ಎಲ್ಲ ರೈತರಿಗೂ ಸೌಲಭ್ಯ ಸಿಗುವಂತೆ ತಹಸಿಲ್ದಾರ ಸಾಹೇಬರಿಗೆ ಈ ಮನವಿ ಸಲ್ಲಿಸಿದರು ಈ ಸಮಯದಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಇದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 